Monday, August 11, 2025
Homeರಾಜ್ಯಮಹದೇವಪುರ ವಿಧಾನಸಭೆ ಕ್ಷೇತ್ರದಲ್ಲಿ ಮತಗಳ್ಳತನ : ಈ ಸಂಜೆ ರಿಯಾಲಿಟಿ ಚೆಕ್‌

ಮಹದೇವಪುರ ವಿಧಾನಸಭೆ ಕ್ಷೇತ್ರದಲ್ಲಿ ಮತಗಳ್ಳತನ : ಈ ಸಂಜೆ ರಿಯಾಲಿಟಿ ಚೆಕ್‌

Vote Chori in Mahadevapura Assembly Constituency: Reality Check

ಮಹದೇವಪುರ,ಆ.11-ಕಳೆದ 2004 ಲೋಕಸಭಾ ಚುನಾವಣೆ ವೇಳೆ ಬೆಂಗಳೂರು ಸೆಂಟ್ರಲ್‌ ಕ್ಷೇತ್ರದ ಮಹದೇವಪುರ ವಿಧಾನಸಭೆ ಕ್ಷೇತ್ರದಲ್ಲಿ ಮತಗಳ್ಳತನವಾಗಿದೆ ಎಂದು ವಿಪಕ್ಷ ನಾಯಕ ರಾಹುಲ್‌ ಗಾಂಧಿ ಆರೋಪಕ್ಕೆ ಸಂಭಂಧಿಸಿದಂತೆ ಖುದ್ದು ಸ್ಥಳಕ್ಕೆಈ ಸಂಜೆ ಪತ್ರಿಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಯಾವುದೇ ರೀತಿ ಅಕ್ರಮ ನಡೆದಿಲ್ಲ ಎಂಬುದು ಗೊತ್ತಗಿದೆ.

ಮಹದೇವಪುರ ಕ್ಷೇತ್ರದ ಬೆಳ್ಳಂದೂರು ವಾರ್ಡಿನ ಬೂತ್‌ ನಂ.470 ನ ಮುನಿರೆಡ್ಡಿ ಗಾರ್ಡನ್‌ ನಲ್ಲಿ ಸರ್ವೇ ನಂ 35 ರಲ್ಲಿರುವ ನಿವೇಶನ ಒಂದರಲ್ಲೇ 80 ಕ್ಕೂ ಹೆಚ್ಚು ಮತಗಳು ಚಲಾವಣೆಯಾಗಿವೆ ಎಂಬ ಆರೋಪಿಸಲಾಗಿತ್ತು ಆದರೇ ಇಲ್ಲಿ ಸುಮಾರು 10 ಕ್ಕೂ ಹೆಚ್ಚು ನಿವೇಶನಗಳಲ್ಲಿರುವ ಕಟ್ಟಡದಲ್ಲಿ ಸರ್ವೇ ನಂ 35 ಇದ್ದು ಚಲಾವಣೆಯಾಗಿರುವ ಎಲ್ಲಾ ಮತಗಳು ಸಕ್ರಮವಾಗೇ ಇವೆ.

ಖುದ್ದು ಸರ್ವೇ ನಂ35 ನಿವೇಶನದಾರ ಜಯರಾಂರೆಡ್ಡಿ ಮಾತನಾಡಿ, ಒಂದು ಸಣ್ಣಕೊಠಡಿಯಲ್ಲಿ 80 ಜನರನ್ನು ಹೇಗೆ ತುಂಬಲು ಸಾಧ್ಯ,ಆರೋಪದಲ್ಲಿ ಯಾವುದೇ ಹುರುಳಿಲ್ಲ, ಆ ಸಣ್ಣ ರೂಮಲ್ಲಿ ಈಗ ಕೇವಲ ಒಬ್ಬ ಮಾತ್ರ ಬಾಡಿಗೆದಾರ ಇದ್ದಾನೆ, ಸರ್ವೇ ನಂ 35 ರಲ್ಲಿ ಈ ಮೊದಲು 8 ಜನ ಮಾಲೀಕರಿದ್ದರು ಕಾಲಕ್ರಮೇಣ ಈಗ 4 ಮಾಲಿಕರಿದ್ದಾರೆ ಇದೇ ಸರ್ವೆ ನಂಬರ್‌ ಸುಮಾರು 10 ರಿಂದ 15 ಎಕರೆ ವಿಸ್ತೀರ್ಣದಲ್ಲಿದೆ ಎಂದು ತಿಳಿಸಿದರು.

ಎಲ್ಲದಕ್ಕೂ ಒಂದೇ ಸರ್ವೇ ನಂಬರ್‌ ಇರುವುದರಿಂದ ಮತಗಳ್ಳತನವಾಗಿದೆ ಎಂದು ಆರೋಪಿಸಲಾಗುತ್ತಿದೆ ಹೊರತು ಅದರಲ್ಲಿ ಸತ್ಯಾಂಶವಿಲ್ಲ, ಆರೋಪ ಮಾಡಿದವರು ಅವರ ದಾಖಲೆ ತರಲಿ ನಂತರ ನಮ ದಾಖಲೆಗಳನ್ನು ಪರಿಶೀಲಿಸಲಿ ಆಗ ನಿಜಾಂಶ ತಿಳಿಯಲಿದೆ ಎಂದರು.

ಒಂದು ಕೊಠಡಿಯಲ್ಲಿ ಪ್ರಸ್ತುತ ಪಶ್ಚಿಮ ಬಂಗಾಳದ ಆಹಾರ ವಿತರಣಾ ಕೆಲಸ ಮಾಡುವ ದೀಪಂಕರ್‌ ಬಂದು ನೆಲೆಸಿದ್ದಾರೆ. ಅವರು ಕೇವಲ ಒಂದು ತಿಂಗಳ ಹಿಂದೆ ಇಲ್ಲಿಗೆ ಬಂದರು. ಬೆಂಗಳೂರಿನಲ್ಲಿ ತನಗೆ ಮತದಾರರ ನೋಂದಣಿ ಇಲ್ಲ ಮತ್ತು ಆ ವಿಳಾಸಕ್ಕೆ ಲಿಂಕ್‌ ಮಾಡಲಾದ ಮತದಾರರ ಪಟ್ಟಿಯಲ್ಲಿರುವ ಹೆಸರುಗಳನ್ನು ಗುರುತಿಸಲಾಗಿಲ್ಲ ಎಂದು ಅವರು ಹೇಳಿದರು.
ರಸಗಂಗಾ ಹೋಟೆಲ್‌ ಮಾಲೀಕ ಸದಾನಂದ ಶೆಟ್ಟಿ ಮಾತನಾಡಿ ಕಳೆದೊಂದು ವಾರದಿಂದ ಈ ವಿಚಾರದ ಬಗ್ಗೆ ಮಾಹಿತಿ ನೀಡಿ ನಮಗೂ ಸಾಕಾಗಿ ಹೋಗಿದೆ, ಸುಖಾಸುಮ್ಮನೆ ಎಲ್ಲಿಯೋ ಕುಳಿತು ಆರೋಪ ಮಾಡುವುದಲ್ಲ, ಸರಿಯಾದ ಮಾಹಿತಿ ಇದ್ದು ಆರೋಪ ಮಾಡೊದು ಒಳಿತು. ಇಲ್ಲವಾದಲ್ಲಿ ಇದು ಕೇವಲ ಆರೋಪವಾಗೇ ಉಳಿಯಲಿದೆ,

ಇನ್ನೂ ಮತಗಳ್ಳತನವಾದರೇ ಕೇವಲ ಬಿಜೆಪಿಗೆ ಮತ ಹೋಗುತ್ತದೆ ಎಂಬುದು ಸುಳ್ಳು, ಎಲ್ಲಾ ಪಕ್ಷಗಳಿಗೂ ಹೋಗಿತ್ತದೆ ಎಂಬ ಕನಿಷ್ಠ ಜ್ಞಾನವಾದರೂ ಇರಬೇಕಲ್ಲವೆ ಎಂದಿದ್ದಾರೆ.ಹೋಟೆಲ್‌ ಗಳಲ್ಲಿ ಕೆಲಸಮಾಡುವವರಿಗೆ ರೂಮ್‌ ಗಳನ್ನು ನೀಡಲಾಗಿದೆ, ನಮ್ಮ ಬಳಿಯಿರುವ ಜನರ ಸಂಖ್ಯೆ ನಮಗೆ ತಿಳಿದಿದೆ,ಹಾಗೇ ಮತಗಳ ಸಂಖ್ಯೆಯೂ ತಿಳಿದಿದೆ ಒಮ್ಮೊಮೆ ಕೆಲಸಬಿಟ್ಟು ಹೋದರೇ ಮತಗಳ ಸಂಖ್ಯೆ ಕಡಿಮೆಯಾಗುತ್ತವೆ, ಹಾಗೆಯೇ ಜನ ಹೆಚ್ಚಾದರೇ ಮತಗಳ ಸಂಖ್ಯೆ ಹೆಚ್ಚಾಗುತ್ತವೆ, ಅಷ್ಟೇ ಹೊರತು ಒಂದೇ ಸಂಖ್ಯೆಯಲ್ಲಿ 80, 100 ಮತಗಳ ಚಲಾವಣೆ ಅಸಾಧ್ಯ ಎಂದು ಸ್ಪಷ್ಟನೆ ನೀಡಿದರು.

ಇನ್ನು ಶಕುನ್‌ ರಾಣಿ ಅವರು ಕೇವಲ ಒಂದು ಕಡೆ ಮಾತ್ರ ಮತ ಚಲಾಯಿಸಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಎರಡು ಬಾರಿ ಮತ ಚಲಾಯಿಸಿದ ಆರೋಪವನ್ನು ನಿರಾಕರಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ತೋರಿಸಲಾದ ಗುರುತಿನ ಚೀಟಿಯ ದಾಖಲೆಯು ಮತಗಟ್ಟೆ ಅಧಿಕಾರಿಯಿಂದ ನೀಡಲಾದ ದಾಖಲೆಯಲ್ಲ ಎಂದು ತಿಳಿದುಬಂದಿದೆ.

ಇನ್ನು ಇಲ್ಲಿರುವ ಮನೆಗಳಿಗೆ ಭೇಟಿ ನೀಡಿದಾಗ ಮತದರರ ಗುರುತಿನ ಚೀಟಿ ತೋರಿಸಿ ಮ ಮನೆಯವರೆಲ್ಲರೂ ಮತದಾನ ಜಾಗೃತಿಯಿಂದಾಗ ಕಡ್ಡಾಯ ಮತದಾನ ಮಾಡಬೇಕೆಂದು ಮತ ಹಾಕಿದ್ದೇವೆ ಆದರೆ ಹೆಚ್ಚಿನ ಕುಟುಂಬದವರೆಲ್ಲಾ ಮತದಾನ ಮಾಡಿದಾಗ ಸಾಮಾನ್ಯವಾಗಿ ಒಂದೇ ಮನೆಯಲ್ಲಿ 10 ಕ್ಕಿಂತ ಹೆಚ್ಚಿನ ಜನರಿದ್ದಾರೆ.

ಹೇಳುವವರಿಗೆ ಬುದ್ಧಿ ಇಲ್ಲ ಅಂದ್ರೆ ಕೇಳುವವರೆಗೂ ಗೊತ್ತಿಲ್ಲವೇ, ರಾಹುಲ್‌ ಗಾಂಧಿ ಒಬ್ಬ ರಾಷ್ಟ್ರೀಯ ನಾಯಕ ಅವರಿಗೆ ಅಷ್ಟು ಅರಿವಿಲ್ಲವೇ, ಅವರೇ ಖುದ್ದಾಗಿ ಬಂದು ನಮ್ಮ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸತ್ಯ ತಿಳಿದುಕೊಳ್ಳಲ್ಲಿ. ಸುಮ್ಮಸುಮ್ಮನೆ ಇಲ್ಲ ಸಲ್ಲದ ರಾಜಕೀಯ ಯಾಕೆ ಸ್ವಾಮಿ.
ಜಯರಾಮ್‌ ರೆಡ್ಡಿ,
ಮುನಿರೆಡ್ಡಿ ಗಾರ್ಡನ್‌ ಮಾಲೀಕರು,
ಬೆಳ್ಳಂದೂರು ನಿವಾಸಿ.

ಹಿರಿಯ ಮಹದೇವಪುರ ವಲಯದ ಬಿಬಿಎಂಪಿ ಆರ್‌.ಓ, ಚುನಾವಣಾ ಅಧಿಕಾರಿಗಳು ಪ್ರಸ್ತುತ ಪರಿಶೀಲನೆ ನಡೆಸುವ ಕಾರ್ಯದಲ್ಲಿ ಇದ್ದೇವೆ. ಸೂಕ್ತ ಮಾಹಿತಿ ದೊರೆತ ನಂತರ ಹೆಚ್ಚಿನ ಮಾಹಿತಿ ನೀಡುತ್ತೆವೆ.
ದೀಪಾಶ್ರೀ,
ಎ.ಇ. ಆರ್‌.ಓ ಬಿಬಿಎಂಪಿ ಮತ್ತು ಚುನಾವಣಾ ಅಧಿಕಾರಿ

RELATED ARTICLES

Latest News