ಮೈಸೂರು,ಆ.12- ಸಾಂಸ್ಕೃತಿಕ ನಗರಿಯಲ್ಲಿ ಇತ್ತೀಚೆಗೆ ಪತ್ತೆಯಾದ ಬೃಹತ್ ಡ್ರಗ್ಸ್ ಫ್ಯಾಕ್ಟರಿ ಪ್ರಕರಣದ ಹಿನ್ನಲೆಯಲ್ಲಿ ಪೊಲೀಸರು ಅಲರ್ಟ್ ಆಗಿದ್ದು, ತಡರಾತ್ರಿ ವಿವಿಧೆಡೆ ದಾಳಿ ನಡೆಸಿದ್ದಾರೆ.
ನಗರದಲ್ಲಿ ಪತ್ತೆಯಾದ ಡ್ರಗ್ಸ್ ಫ್ಯಾಕ್ಟರಿ ಪ್ರಕರಣ ಭಾರೀ ಸಂಚಲನವನ್ನೇ ಮೂಡಿಸಿತ್ತು.
ಇದರಿಂದ ನಗರದ ಪೊಲೀಸರು ಫುಲ್ ಅಲರ್ಟ್ ಆಗಿದ್ದು, ಉದಯಗಿರಿ, ಮಂಡಿಮೊಹಲ್ಲಾ , ಕೆಸರೆ, ಉಟ್ಕೊನಗರ, ಸುನ್ನಿಚೌಕಾ ವ್ಯಾಪ್ತಿಯಲ್ಲಿ 71 ಮಂದಿ ಅನುಮಾನಸ್ಪದ ವ್ಯಕ್ತಿಗಳನ್ನು ತಪಾಸಣೆ ಮಾಡಿ, ಎನ್‌ಡಿಪಿಎಸ್ ಕಾಯ್ದೆಯಡಿ 6 ಪ್ರಕರಣ ದಾಖಲು ಮಾಡಿದ್ದಾರೆ. ಸಿಂತೆಟಿಕ್ ಡ್ರಗ್ಸ್ ಎಂಡಿಎಂಎ ತಯಾರಿಕಾ ಘಟಕ ಪತ್ತೆಯಾಗಿದ್ದು, ಕೋಟ್ಯಂತರ ರೂ. ಮೌಲ್ಯದ ಮಾದಕವಸ್ತು ಜಪ್ತಿ ಮಾಡಲಾಗಿತ್ತು.
ನಗರದಲ್ಲಿ ಡ್ರಗ್ಸ್ ಜಾಲವನ್ನು ಸಂಪೂರ್ಣವಾಗಿ ಬುಡಸಮೇತ ಕಿತ್ತು ಹಾಕಲು ಎಲ್ಲೆಡೆ ಪಣತೊಟ್ಟಿದ್ದು, ಮಿಂಚಿನ ಕಾರ್ಯಾಚರಣೆ ನಡೆಸುತ್ತಿದ್ದು, ಅನುಮಾನಾಸ್ಪದ ವ್ಯಕ್ತಿಗಳನ್ನು ತಪಾಸಣೆಗೊಳಪಡಿಸುತ್ತಿದ್ದಾರೆ.
- ಗ್ರಂಥಾಲಯಗಳನ್ನು ಬಲಪಡಿಸುವ ಅಗತ್ಯವಿದೆ : ಸಚಿವ ಮಧು ಬಂಗಾರಪ್ಪ
- ಧರ್ಮಸ್ಥಳ ಪ್ರಕರಣ : 13ನೇ ಸ್ಥಳದಲ್ಲಿ ಜಿಪಿಆರ್ನಿಂದ ಇಂಚಿಂಚೂ ಪರಿಶೀಲನೆ
- 12 ವರ್ಷದ ಬಾಲಕಿ ಮೇಲೆ 200 ಬಾರಿ ಅತ್ಯಾಚಾರ..!
- ಸಾಲ ತೀರಿಸಲು ಕೆಲಸ ನೀಡಿದ್ದ ಮಾಲೀಕರ ಮನೆಯಲ್ಲೇ ಕಳ್ಳತನ ಮಾಡಿದವನ ಸೆರೆ, 89 ಲಕ್ಷ ಮೌಲ್ಯದ ಚಿನ್ನಾಭರಣ ವಶ
- ಬೆಂಗಳೂರಿಗರೇ, ಡೇಟಾ ಸೆಂಟರ್ಗಳಿಗೆ ಬಾಡಿಗೆ ಕೊಡುವಾಗ ಎಚ್ಚರ