ಬೆಂಗಳೂರು, ಆ.12- ಮಳೆ ನೀರಿನ ಅನಾಹುತಗಳಿಂದ ಬೆಂಗಳೂರಿನಲ್ಲಿ 10 ಮಂದಿ ಜೀವಹಾನಿಯಾಗಿದ್ದು, 1,114 ಮನೆಗಳು ಹಾಗೂ 343ಕಿ.ಮೀ. ಉದ್ದದ ರಸ್ತೆಗಳು ಹಾನಿಗೊಳಗಾಗಿವೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ವಿಧಾನಸಭೆಯ ಪ್ರಶ್ನೋತ್ತರದ ಅವಧಿಯಲ್ಲಿ ಡಾ. ಸಿ.ಎನ್. ಅಶ್ವತ್ ನಾರಾಯಣ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರಿನಲ್ಲಿ ಮುಂಗಾರು ಪೂರ್ವ ಮತ್ತು ಮುಂಗಾರಿನಲ್ಲಿ ಸುರಿದ ಮಳೆಯಿಂದ ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ 2, ಶಿವಾಜಿನಗರ ಕ್ಷೇತ್ರದಲ್ಲಿ 2, ಜಯನಗರ ಕ್ಷೇತ್ರದಲ್ಲಿ 2, ಬಿಟಿಎಂ ಲೇಔಟ್, ಸಿವಿರಾಮನ್ ನಗರ, ಸರ್ವಜ್ಞ ನಗರ, ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ತಲಾ ಒಂದು ಸೇರಿ ಒಟ್ಟು 10 ಜೀವ ಹಾನಿಯಾಗಿದೆ. ಶಿಥಿಲಗೊಂಡ ಮರಗಳ ರೆಂಬೆಗಳು ಬಿದ್ದು 3 ಜನ ಮೃತಪಟ್ಟಿದ್ದಾರೆ ಎಂದು ವಿವರಿಸಿದ್ದಾರೆ.
ಬೆಂಗಳೂರಿನಲ್ಲಿ ಮಳೆ ಅನಾಹುತಗಳನ್ನು ತಪ್ಪಿಸಲು 2025-26ನೇ ಸಾಲಿನಲ್ಲಿ 2ಸಾವಿರ ಕೋಟಿ ರೂ. ವೆಚ್ಚದಲ್ಲಿ 173 ಕಿ.ಮೀ. ಉದ್ದದ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ರಾಜ ಕಾಲುವೆಗಳ ತಡೆಗೋಡೆಗಳು ನಿರ್ಮಾಣಗೊಳ್ಳುತ್ತದೆ.
ಎನ್‌ಡಿಎಂಎಫ್ ಅನುದಾನದಲ್ಲಿ 172.25 ಕೋಟಿ ರೂ. ವೆಚ್ಚದಲ್ಲಿ ಕಲ್ವರ್ಟ್ ಹಾಗೂ ಬಿಡ್ಜ್ ಗಳನ್ನು ವಿನ್ಯಾಸಗೊಳಿಸಲಾಗುತ್ತಿದೆ. 581 ಬೃಹತ್ ನೀರುಗಾಲುವೆಗಳನ್ನು ವಾರ್ಷಿಕ ನಿರ್ವಹಣೆಗಾಗಿ ಗುತ್ತಿಗೆ ನೀಡಲಾಗಿದೆ.
ಮಳೆಗಾಲದಲ್ಲಿ ಹಾನಿಗೊಳಗಾಗಬಹುದಾದ 218 ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದ್ದು, ಈ ವರ್ಷದ ಜುಲೈ ಅಂತ್ಯಕ್ಕೆ 169 ಸೂಕ್ಷ್ಮ ಮತ್ತು ಅತೀಸೂಕ್ಷ್ಮ ಪ್ರದೇಶಗಳನ್ನು ಸರಿಪಡಿಸಲಾಗಿದೆ. 49 ಪ್ರದೇಶಗಳನ್ನು ವಿವಿಧ ಯೋಜನೆಯಡಿ ನಿರ್ವಹಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
- ರಾಜಸ್ಥಾನದ ಜೈಸಲೇರ್ನಲ್ಲಿ ಶಂಕಿತ ಗೂಢಚಾರಿ ಅರೆಸ್ಟ್
- ಉತ್ತರ ಪ್ರದೇಶದಲ್ಲಿ ಮಹಿಳೆಯನ್ನು ಕಚ್ಚಿ ಕೊಂದ ಬೀದಿ ನಾಯಿಗಳು
- ಭಾರತ ಮತ್ತು ಪಾಕ್ನೊಂದಿಗಿನ ಬಾಂಧವ್ಯ ಉತ್ತಮವಾಗಿದೆ ; ಅಮೆರಿಕ ವಿದೇಶಾಂಗ ಇಲಾಖೆ
- ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಹರ್ಘರ್ ತಿರಂಗ ಅಭಿಯಾನಕ್ಕೆ ಯೋಗಿ ಆದಿತ್ಯನಾಥ್ ಕರೆ
- ಸ್ವಾತಂತ್ರ್ಯೋತ್ಸವದಂದು ಮಾಂಸದಂಗಡಿ, ಕಸಾಯಿಖಾನೆ ಮುಚ್ಚಲು ಆದೇಶ : ಭುಗಿಲೆದ್ದ ವಿವಾದ