Thursday, August 14, 2025
Homeರಾಜ್ಯಅಪಾಯಕಾರಿ ಸೇಂದಿ ಮಾರಾಟದ ವಿರುದ್ಧ ಗೂಂಡಾ ಕಾಯ್ದೆ : ಸಚಿವ ತಿಮ್ಮಾಪುರ ಎಚ್ಚರಿಕೆ

ಅಪಾಯಕಾರಿ ಸೇಂದಿ ಮಾರಾಟದ ವಿರುದ್ಧ ಗೂಂಡಾ ಕಾಯ್ದೆ : ಸಚಿವ ತಿಮ್ಮಾಪುರ ಎಚ್ಚರಿಕೆ

Goonda Act against sale of dangerous Liquor

ಬೆಂಗಳೂರು, ಆ.12- ಕ್ಲೋರಲ್‌ ಹೈಡ್ರೇಟ್‌ ಎಂಬ ಅಪಾಯಕಾರಿ ರಾಸಾಯನಿಕ ಮಿಶ್ರಿತವಾದ ಸೇಂದಿಯನ್ನು ರಾಜ್ಯದ ಗಡಿ ಜಿಲ್ಲೆಗಳಲ್ಲಿ ಮಾರಾಟ ಮಾಡುತ್ತಿರುವ ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆ ಬಳಕೆ ಮಾಡುವುದಾಗಿ ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಎಚ್ಚರಿಕೆ ನೀಡಿದ್ದಾರೆ.

ವಿಧಾನಸಭೆಯಲ್ಲಿ ಸಂಡೂರು ಕ್ಷೇತ್ರದ ಶಾಸಕಿ ಅನ್ನಪೂರ್ಣ ಅವರು, ಬಳ್ಳಾರಿ ಜಿಲ್ಲೆಯಲ್ಲಿ ನೆರೆಯ ಆಂಧ್ರಪ್ರದೇಶದಿಂದ ಸೇಂದಿಯನ್ನು ಅಕ್ರಮವಾಗಿ ತಂದು ಮಾರಾಟ ಮಾಡಲಾಗುತ್ತಿದೆ. ಇದು ಮನುಷ್ಯರು ಬಳಕೆ ಮಾಡಲು ಯೋಗ್ಯವಲ್ಲ ಎಂದು ಪ್ರಯೋಗಾಲಯದ ವರದಿ ಸ್ಪಷ್ಟಪಡಿಸಿದೆ. ಸರ್ಕಾರ ಕೂಡಲೇ ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಉತ್ತರ ನೀಡಿದ ಸಚಿವ ಆರ್‌.ಬಿ. ತಿಮಾಪುರ್‌ ಆಂಧ್ರಪ್ರದೇಶದಿಂದ ಅಕ್ರಮವಾಗಿ ಸೇಂದಿಯನ್ನು ರಾಜ್ಯದ ಗಡಿ ಜಿಲ್ಲೆಗಳಿಗೆ ತರಲಾಗುತ್ತಿದೆ. ಸಿಎಚ್‌ ಎಂಬ ಸಣ್ಣ ಪೊಟ್ಟಣ್ಣದ ಪೌಡರನ್ನು ಸೇಂದಿಗೆ ಮಿಶ್ರಣ ಮಾಡಿ ಐದಾರು ಲೀಟರ್‌ ತಯಾರಿಸಲಾಗುತ್ತಿದೆ. ಇದರ ವಿರುದ್ಧ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವ್ಯಾಪಕ ಜನಜಾಗೃತಿ ಮಾಡಿದ್ದೇವೆ ಎಂದರು.

ಈವರೆಗೂ ಅಕ್ರಮ ಸೇಂದಿ ಪ್ರಕರಣಕ್ಕೆ ಸಂಬಂಧಪಟ್ಟಂತೆ 160 ಪ್ರಕರಣಗಳನ್ನು ದಾಖಲಿಸಿ 160 ಜನರನ್ನು ಬಂಧಿಸಲಾಗಿದೆ. 19691 ಲೀ. ಮದ್ಯವನ್ನು ವಶಪಡಿಸಿಕೊಂಡು, 121 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಸದರಿ ಆರೋಪಿಗಳ ವಿರುದ್ಧ, ಗೂಂಡಾ ಕಾಯ್ದೆ ಬಳಕೆ ಮಾಡಲು ಚರ್ಚೆಗಳು ನಡೆಯುತ್ತಿವೆ. ರಾಯಚೂರಿನಲ್ಲಿ ಇಬ್ಬರು ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆ ಬಳಸಲಾಗಿದೆ. ಅಕ್ರಮವಾಗಿ ಸೇಂದಿ ಮಾರುವ 25 ಮಂದಿಯನ್ನು ಗುರುತಿಸಲಾಗಿದ್ದು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

RELATED ARTICLES

Latest News