Thursday, August 14, 2025
Homeರಾಷ್ಟ್ರೀಯ | Nationalರಾಜಸ್ಥಾನ : ಪಿಕಪ್‌ ವ್ಯಾನ್‌ ಟ್ರಕ್‌ಗೆ ಡಿಕ್ಕಿಯಾಗಿ 7 ಮಕ್ಕಳು ಸೇರಿ 11 ಜನರು ಸಾವು

ರಾಜಸ್ಥಾನ : ಪಿಕಪ್‌ ವ್ಯಾನ್‌ ಟ್ರಕ್‌ಗೆ ಡಿಕ್ಕಿಯಾಗಿ 7 ಮಕ್ಕಳು ಸೇರಿ 11 ಜನರು ಸಾವು

Road accident in Dausa, Rajasthan: 7 children among 11 killed as pickup van rams into truck

ಜೈಪುರ,ಆ.13-ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ಇಂದು ಮುಂಜಾನೆ ಪಿಕಪ್‌ ವ್ಯಾನ್‌ ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಏಳು ಮಕ್ಕಳು ಸೇರಿದಂತೆ 11 ಜನರು ಸಾವನ್ನಪ್ಪಿದ್ದಾರೆ.ಖಾತು ಶ್ಯಾಮ್‌ ಮತ್ತು ಸಲಸರ್‌ ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿ ಉತ್ತರ ಪ್ರದೇಶದ ಇಟಾದಲ್ಲಿರುವ ತಮ ಗ್ರಾಮಕ್ಕೆ ಪಿಕಪ್‌ ವಾಹನದ ಪ್ರಯಾಣಿಕರು ಮುಂಜಾನೆ 4.30ರ ಸುಮಾರಿಗೆ ಮನೋಹರ್‌ಪುರ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ ಎಂದು ದೌಸಾ ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿ ಸಾಗರ್‌ ತಿಳಿಸಿದ್ದಾರೆ.

ಸಾವಿಗೀಡಾದವರಲ್ಲಿ ಏಳು ಮಕ್ಕಳು ಮತ್ತು ನಾಲ್ವರು ಮಹಿಳೆಯರು ಸೇರಿದ್ದಾರೆ ಮತ್ತು ಎಂಟು ಜನರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು.ಪಿಕಪ್‌ ವಾಹನದಲ್ಲಿ ಇಪ್ಪತ್ತು ಜನರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ ಇದರ ಚಾಲಕ ಹೆದ್ದಾರಿಯ ಸರ್ವಿಸ್‌‍ ಲೇನ್‌ನಲ್ಲಿ ನಿಂತಿದ್ದ ಟ್ರಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾನೆ ಎಂದು ಎಸ್‌‍ಪಿ ಹೇಳಿದರು, ಗಾಯಗೊಂಡ ಎಂಟು ಜನರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಶವಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿಸಿದರು.ಘಟನೆ ಕುರಿತು ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

RELATED ARTICLES

Latest News