Thursday, August 14, 2025
Homeಬೆಂಗಳೂರುಬೆಂಗಳೂರಲ್ಲಿ ಹಾಡಹಗಲೇ ಲೇಡಿಸ್‌‍ ಪಿಜಿಗೆ ನುಗ್ಗಿ ಚಿನ್ನಾಭರಣ , ಮೊಬೈಲ್‌ ದರೋಡೆ

ಬೆಂಗಳೂರಲ್ಲಿ ಹಾಡಹಗಲೇ ಲೇಡಿಸ್‌‍ ಪಿಜಿಗೆ ನುಗ್ಗಿ ಚಿನ್ನಾಭರಣ , ಮೊಬೈಲ್‌ ದರೋಡೆ

Ladies PG robbed in broad daylight in Bengaluru

ಬೆಂಗಳೂರು,ಆ.13-ಹಾಡಹಗಲೇ ಲೇಡಿಸ್‌‍ ಪಿಜಿಗೆ ನುಗ್ಗಿದ ದರೋಡೆಕೋರ ಮಹಿಳಾ ಬೆಸ್ಕಾಂ ಎಂಜಿನಿಯರ್‌ ಕುತ್ತಿಗೆಗೆ ಚಾಕು ಇಟ್ಟು ಹೆದರಿಸಿ ಚಿನ್ನಾಭರಣ ಹಾಗೂ ಎರಡು ಮೊಬೈಲ್‌ಗಳನ್ನು ದೋಚಿ ಪರಾರಿಯಾಗಿರುವ ಘಟನೆ ಯಲಹಂಕ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬೆಸ್ಕಾಂ ಅಸಿಸ್ಟೆಂಟ್‌ ಮಹಿಳಾ ಎಂಜಿನಿಯರ್‌ರೊಬ್ಬರು ಜುಡಿಷಿಯಲ್‌ ಲೇಔಟ್‌ನಲ್ಲಿರುವ ಲೇಡಿಸ್‌‍ ಪಿಜಿಗೆ ಕಳೆದ 15 ದಿನಗಳ ಹಿಂದೆಯಷ್ಟೆ ಸೇರಿದ್ದರು. ಆ.11 ರಂದು ಎಂದಿನಂತೆ ಕೆಲಸಕ್ಕೆ ಹೋಗಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಊಟಕ್ಕೆಂದು ಪಿಜಿಗೆ ಬಂದಿದ್ದಾರೆ.

ಪಿಜಿಯ 3ನೇ ಮಹಡಿಯಲ್ಲಿರುವ ತಮ ರೂಮಿಗೆ ಹೋದ ಕೆಲವೇ ನಿಮಿಷಗಳಲ್ಲಿ ಬಾಗಿಲು ಬಡಿದ ಶಬ್ದವಾಗಿದೆ. ಪಿಜಿಯವರೇ ಬಂದಿರಬಹುದೆಂದು ತಿಳಿದು ಅವರು ಬಾಗಿಲು ತೆಗೆಯುತ್ತಿದ್ದಂತೆ ದರೋಡೆಕೋರ ಇವರ ಕುತ್ತಿಗೆಯ ಬಳಿ ಚಾಕು ಇಟ್ಟು ಬೆದರಿಸಿ ಅವರು ಧರಿಸಿದ್ದ ಚಿನ್ನಾಭರಣಗಳನ್ನು ಬಿಚ್ಚಿಸಿಕೊಂಡಿದ್ದಲ್ಲದೇ, ರೂಮಿನ ಹಾಸಿಗೆ ಮೇಲಿದ್ದ ಎರಡು ಮೊಬೈಲ್‌ಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ.

ಆ ಸಂದರ್ಭದಲ್ಲಿ ಏನು ಮಾಡುವುದೆಂದು ತೋಚದೆ ತಕ್ಷಣ ಯಲಹಂಕ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದಾರೆ.ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಾಗ ಪಿಜಿಯ ಸ್ವಲ್ಪ ದೂರದ ಪೊದೆಯ ಬಳಿ ಎರಡು ಮೊಬೈಲ್‌ಗಳು ಪತ್ತೆಯಾಗಿವೆ.ದರೋಡೆಕೋರ ಬಿಸಾಡಿದ್ದ ಆ ಎರಡು ಮೊಬೈಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದು ದರೋಡೆಕೋರರ ಪತ್ತೆಗೆ ಬಲೆ ಬೀಸಿದ್ದಾರೆ.

RELATED ARTICLES

Latest News