Wednesday, August 13, 2025
Homeರಾಷ್ಟ್ರೀಯ | Nationalಪತಂಜಲಿ ಸಂಸ್ಥೆಗೆ "ಸುಪ್ರೀಂ" ರಿಲೀಫ್‌

ಪತಂಜಲಿ ಸಂಸ್ಥೆಗೆ “ಸುಪ್ರೀಂ” ರಿಲೀಫ್‌

"Supreme" relief to Patanjali

ನವದೆಹಲಿ, ಆ. 13- ಜನರನ್ನು ದಾರಿ ತಪ್ಪಿಸುವ ಜಾಹೀರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮ್‌ದೇವ್‌ ಒಡೆತನದ ಪತಂಜಲಿ ಸಂಸ್ಥೆಗೆ ಸುಪ್ರೀಂಕೋರ್ಟ್‌ ಬಿಗ್‌ ರಿಲೀಫ್‌ ನೀಡಿದೆ. ಸಾಂಪ್ರದಾಯಿಕ ಔಷಧಕ್ಕೆ ಸಂಬಂಧಿಸಿದ ಜಾಹೀರಾತುಗಳು ; ದಾರಿತಪ್ಪಿಸುವಂತಿವೆ. ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಭಾರತೀಯ ವೈದ್ಯಕೀಯ ಸಂಘ(ಐಎಂಎ) ನ್ಯಾಯಾಲಯದ ಮೊರೆ ಹೋಗಿತ್ತು.

ಇದಕ್ಕೂ ಮುನ್ನ ನ್ಯಾಯಾಲಯವು ಪತಂಜಲಿಯ ಜಾಹೀರಾತುಗಳ ಮೇಲೆ ತಾತ್ಕಾಲಿಕ ನಿಷೇಧ ಹೇರಿತ್ತು. ಪತಂಜಲಿಯ ಬಾಬಾ ರಾಮದೇವ್‌ ಮತ್ತು ಆಚಾರ್ಯ ಬಾಲಕೃಷ್ಣ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣವನ್ನು ಆರಂಭಿಸಲಾಗಿತ್ತು.

ಜುಲೈ 1, 2024 ರಂದು, ಕೇಂದ್ರ ಆಯುಷ್‌ ಸಚಿವಾಲಯವು ಔಷಧಗಳು ಮತ್ತು ಸೌಂದರ್ಯವರ್ಧಕ ನಿಯಮಗಳು 1945 ರ ನಿಯಮ 170 ಅನ್ನು ತೆಗೆದುಹಾಕಲು ಅಧಿಸೂಚನೆಯನ್ನು ಹೊರಡಿಸಿತ್ತು.ಮಾಧ್ಯಮ ವರದಿಗಳು ನಿಯಮ 170 ರ ಅಡಿಯಲ್ಲಿ, ಕಂಪನಿಗಳು ಆಯುರ್ವೇದ, ಸಿದ್ಧ ಅಥವಾ ಯುನಾನಿ ಔಷಧಿಗಳನ್ನು ಜಾಹೀರಾತು ಮಾಡಲು ರಾಜ್ಯ ಪರವಾನಗಿ ಅಧಿಕಾರಿಗಳಿಂದ ಅನುಮತಿ ಪಡೆಯುವುದು ಅಗತ್ಯವಾಗಿತ್ತು ಎಂದು ಹೇಳಿವೆ.

ನ್ಯಾಯಾಂಗ ನಿಂದನೆ ಕುರಿತು ಮೇ 14ರಂದು ಸುಪ್ರೀಂಕೋರ್ಟ್‌ ಪೀಠದ ಜಸ್ಟೀಸ್‌‍ ಹಿಮಾ ಕೊಹ್ಲಿ ಮತ್ತು ಜಸ್ಟೀಸ್‌‍ ಅಸಾದುದ್ದೀನ್‌ ಅಮಾನುಲ್ಲಾ ಆದೇಶವನ್ನು ಕಾಯ್ದಿರಿಸಿದ್ದರು. ಆಧುನಿಕ ವೈದ್ಯ ಪದ್ಧತಿ ಮತ್ತು ಕೋವಿಡ್‌ ಲಸಿಕೆ ವಿರುದ್ಧ ಪತಂಜಲಿ ಆಕ್ಷೇಪಾರ್ಹ ಪ್ರಚಾರ ಕೈಗೊಂಡಿತ್ತು. ಇದರ ವಿರುದ್ಧ ಐಎಂಎ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು.

RELATED ARTICLES

Latest News