ಬೆಂಗಳೂರು, ಆ.13- ಡಿಸೆಂಬರ್ ತಿಂಗಳ ಒಳಗೆ 2 ಲಕ್ಷ ಮಂಜೂರಿ ದಾರರಿಗೆ ಪೋಡಿಗಳನ್ನು ವಿತರಣೆ ಮಾಡುವ ಗುರಿ ಹೊಂದಿದ್ದೇವೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.
ಎಂಟಿಬಿ ನಾಗರಾಜ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಹಿಂದೆ ಪೋಡಿಗಳನ್ನು ವಿತರಣೆ ಮಾಡಲು ಕೆಲವು ತಾಂತ್ರಿಕ ಕಾರಣಗಳು ಎದುರಾಗಿದ್ದವು. ಈಗ ಎಲ್ಲಾ ದಾಖಲೆಗಳನ್ನು ಸರಿಪಡಿಸಿ ಅಂತಿಮವಾಗಿ 2 ಲಕ್ಷ ಪೋಡಿಗಳನ್ನು ವಿತರಣೆ ಮಾಡುವ ಗುರಿ ನಮದಾಗಿದೆ ಎಂದರು.
2013-18ರಲ್ಲಿ 5800, 2018-2023ರಿಂದ 8500 ಪೋಡಿಗಳನ್ನು ವಿತರಣೆ ಮಾಡಲಾಗಿತ್ತು.ನಾವು ಇಲಾಖೆ ಅಧಿಕಾರಿಗಳ ಜೊತೆ ನಡೆಸಿದ ಸಭೆ, ದಾಖಲಾತಿಗಳ ತಿದ್ದುಪಡಿ ಸೇರಿದಂತೆ ಹಲವು ಕ್ರಮಗಳನು್ನ ತೆಗೆದುಕೊಂಡ ಪರಿಣಾಮ ಒಂದು ಹಂತಕ್ಕೆ ಬಂದಿದ್ದೇವೆ. ಹಿಂದೆ ಖಾಸಗಿಯವರಿಗೆ ಮಾತ್ರ ಪೋಡಿ ನೀಡಲಾಗಿತ್ತು ಎಂದು ತಿಳಿಸಿದರು.
ಈ ಹಿಂದೆ ಏಕವ್ಯಕ್ತಿ ಪೋಡಿ ಪದ್ದತಿ ಮತ್ತು ಅರ್ಜಿ ಕೊಟ್ಟವರಿಗೆ ಮಾತ್ರ ಪೋಡಿ ವಿತರಿಸುವ ವ್ಯವಸ್ಥೆ ಇತ್ತು. ಯಾರಿಗೆ ಅರ್ಜಿ ಸಲ್ಲಿಸಲು ಸಾಮರ್ಥ್ಯವಿತ್ತೋ ಅಂಥವರಿಗೆ ಪೋಡಿಯನ್ನು ಕೊಡುತ್ತಿದ್ದವು. ಸಾಮರ್ಥ್ಯ ಇಲ್ಲದವರು ಪೋಡಿಯನ್ನೇ ಪಡೆಯುತ್ತಿರಲಿಲ್ಲ. ಇನ್ನು ಮುಂದೆ ಅರ್ಜಿ ಕೊಟ್ಟರೆ ಸಾಕು ಸರ್ಕಾರವೇ ಪೋಡಿಯನ್ನು ಕೊಡುವ ತೀರ್ಮಾನಕ್ಕೆ ಬಂದಿದೆ ಎಂದು ಹೇಳಿದರು.
73,390 ಸರ್ಕಾರಿ ಜಮೀನುಗಳಿಗೆ ಪೋಡಿ ನೀಡಲಾಗಿದೆ. ದತ್ತಾಂಶಗಳನ್ನು ಸಂಗ್ರಹಣೆ ಮಾಡಿಕೊಂಡು ಹಂತ ಹಂತವಾಗಿ ವಿತರಣೆ ಮಾಡುತ್ತಿದ್ದೇವೆ. ಈ ಹಿಂದೆ 1,17,000 ಪೋಡಿಗಳನ್ನು ಕೊಡಲಾಗಿತ್ತು. 1,33,000 ಬಾಕಿ ಇವೆ ಎಂದರು.
ಸದಸ್ಯೆ ಹೇಮಲತಾ ನಾಯಕ್ ಅವರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಾಗುವಳಿ ಚೀಟಿ ಪಡೆಯಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಹಿಂದೆ ಬೇರೆ ಬೇರೆ ಕಾರಣಗಳಿಂದ ಸಾಗುವಳಿಚೀಟಿ ನೀಡಲಾಗುತ್ತಿತ್ತು. ಗೊತ್ತಿದ್ದೋ, ಗೊತ್ತಿಲ್ಲದೆಯೋ ಸಾಗುವಳಿಚೀಟಿ ಪಡೆದುಕೊಳ್ಳುತ್ತಿದ್ದರು. ವಾಸ್ತವವಾಗಿ ಸಾಗುವಳಿಚೀಟಿ ಪಡೆಯಲು ಅವಕಾಶವೇ ಇಲ್ಲ ಎಂದು ಪುನರುಚ್ಚರಿಸಿದರು.ಸಾಗುವಳಿಚೀಟಿ ಇದ್ದು ಆರ್‌ಟಿಸಿ ಸಂಖ್ಯೆ ಇಲ್ಲದವರಿಗೆ ಅದನ್ನು ಸಹ ಡಿಸೆಂಬರ್‌ನೊಳಗೆ ವಿತರಣೆ ಮಾಡಲಿದ್ದೇವೆ ಎಂದು ತಿಳಿಸಿದರು.
- ಜಾಗತಿಕ ಪ್ರಕ್ಷುಬ್ಧತೆ ಎದುರಿಸಲು ಆತ್ಮನಿರ್ಭರತೆ ಅಗತ್ಯ ; ಜೈಶಂಕರ್
- ಟ್ರೀಡಿಂಗ್ ಲಿಂಕ್ ಒತ್ತಿ 69 ಲಕ್ಷ ರೂ. ಕಳೆದುಕೊಂಡ ದಂಪತಿ
- ರಾಜಣ್ಣ ವಜಾ ಹಿನ್ನೆಲೆಯಲ್ಲಿ ಕಾಂಗ್ರೆಸ್ನೊಳಗೆ ಬಲಾ-ಬಲ ಪ್ರದರ್ಶನಕ್ಕೆ ಗುಂಪು ರಾಜಕಾರಣ ಶುರು
- ಹಿಮಾಚಲ ಪ್ರದೇಶದ ವಿವಿಧ ಭಾಗಗಳಲ್ಲಿ ಭಾರಿ ಪ್ರವಾಹ
- ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-08-2025)