Thursday, August 14, 2025
Homeಇದೀಗ ಬಂದ ಸುದ್ದಿಸಂಪುಟದಿಂದ ಹೊರಹಾಕಲ್ಪಟ್ಟ ಕೆ.ಎನ್‌. ರಾಜಣ್ಣ ಅವರನ್ನು ಭೇಟಿಯಾದ ಬಿಜೆಪಿ ನಾಯಕರು

ಸಂಪುಟದಿಂದ ಹೊರಹಾಕಲ್ಪಟ್ಟ ಕೆ.ಎನ್‌. ರಾಜಣ್ಣ ಅವರನ್ನು ಭೇಟಿಯಾದ ಬಿಜೆಪಿ ನಾಯಕರು

ಬೆಂಗಳೂರು,ಆ.14-ಇತ್ತೀಚೆಗೆ ಕಾಂಗ್ರೆಸ್‌ ಸರ್ಕಾರದಿಂದ ಸಚಿವ ಸ್ಥಾನದಿಂದ ವಜಾಗೊಂಡ ಕೆ.ಎನ್‌. ರಾಜಣ್ಣ ಅವರನ್ನು ಹಾಗೂ ಅವರ ಮಗ ಮತ್ತು ಎಂಎಲ್‌ ಸಿ ರಾಜೇಂದ್ರ ರಾಜಣ್ಣ ಅವರನ್ನು ಭೇಟಿಯಾದ ಹಿರಿಯ ಬಿಜೆಪಿ ನಾಯಕ ಬಿ ಶ್ರೀರಾಮುಲು ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಸಚಿವ ಸತೀಶ್‌ ಜಾರಕಿಹೊಳಿ ಅವರೊಂದಿಗೆ ಕಾಂಗ್ರೆಸ್‌ ಶಾಸಕರ ತಂಡ ರಾಜಣ್ಣ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಚರ್ಚೆ ನಡೆಸಿ ನಂತರ ಈ ಬೆಳವಣಿಗೆ ನಡೆದಿದೆ.

ಇಡೀ ಸಮುದಾಯ ಮತ್ತು ಅದರ ನಾಯಕರು ನಿಮ್ಮೊಂದಿಗಿದ್ದಾರೆ, ಬಿಜೆಪಿಗೆ ಬನ್ನಿ. ನೀವು ಮತ್ತು ನಿಮ್ಮ ಮಗ ಬಿಜೆಪಿಗೆ ಬನ್ನಿ. ನಾನು, ಶಿವನಗೌಡ ನಾಯಕ, ರಾಜುಗೌಡ ಮತ್ತು ನಮ್ಮ ಎಲ್ಲಾ ನಾಯಕರು, ನಾವು ನಿಮ್ಮನ್ನು ಪಕ್ಷಕ್ಕೆ ಸ್ವಾಗತಿಸುತ್ತೇವೆ ಮತ್ತು ಪಕ್ಷದಲ್ಲಿ ನಮಗಿಂತ ಹೆಚ್ಚಿನ ಗೌರವ ಸಿಗಲೂ ಇದೆ ಎಂದು ಎಂದು ಶ್ರೀರಾಮುಲು ಭರವಸೆ ನೀಡಿದ್ದಾರೆ.

ಸತ್ಯವನ್ನು ಹೇಳಿದ್ದಕ್ಕಾಗಿ ರಾಜಣ್ಣ ಅರನ್ನು ಅವಮಾನಿಸಿ ಸಚಿವ ಸ್ಥಾನದಿಂದ ವಜಾಗೊಳಿಸಲಾಗಿದೆ ಎಂದು ರಾಮುಲು ಕಿಡಿ ಕಾರಿದ್ದಾರೆ.ಈ ನಡುವೆ ಕಾಂಗ್ರೆಸ್‌ ಶಾಸಕರಾದ ರಘುಮೂರ್ತಿ, ಬಸವಂತಪ್ಪ, ಅನಿಲ್‌ ಚಿಕ್ಕಮಧು ಮತ್ತು ಇತರರು ಸತೀಶ್‌ ಜಾರಕಿಹೊಳಿ ಅವರೊಂದಿಗೆ ರಾಜಣ್ಣ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.

ಪತ್ರಕರ್ತರ ಜೊತೆ ಮಾತನಾಡಿದ ಜಾರಕಿಹೊಳಿ, ನಾವು ಅವರೊಂದಿಗೆ ಇದ್ದೇವೆ ಮತ್ತು ನಮ್ಮ ಸ್ನೇಹದ ಭಾಗವಾಗಿ, ಅವರಲ್ಲಿ ವಿಶ್ವಾಸ ತುಂಬಲು ಪ್ರಯತ್ನಿಸಿದ್ದೇವೆ ಎಂದು ಅವರಿಗೆ ತಿಳಿಸಿದ್ದೇವೆ .ಎರಡು ವರ್ಷಗಳ ಕಾಲ ಸಚಿವರಾಗಿ ಅವರ ಕಾರ್ಯಕ್ಷಮತೆಯಿಂದ ಅವರು ತೃಪ್ತರಾಗಿದ್ದಾರೆ ಮತ್ತು ದೆಹಲಿಯಲ್ಲಿ (ನಾಯಕತ್ವ) ಅವರ ಬಗ್ಗೆ ತಪ್ಪು ತಿಳುವಳಿಕೆ ಇದೆ ಮತ್ತು ಅವರು ದೆಹಲಿಗೆ ಹೋಗಿ ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಡುತ್ತಾರೆ ಎಂದು ಹೇಳಿದರು.

ರಾಜಣ್ಣ ದೆಹಲಿಗೆ ಒಬ್ಬಂಟಿಯಾಗಿ ಹೋಗುತ್ತಾರೋ ಅಥವಾ ಅವರು ಸಹ ನಿಯೋಗವಾಗಿ ಸೇರುತ್ತಾರೋ ಎಂದು ಕೇಳಿದಾಗ, ನಿಯೋಗ ಹೋಗುವುದು ಅವರು (ರಾಜ್ಣ) ಹೋಗುವುದಕ್ಕಿಂತ ಭಿನ್ನವಾಗಿದೆ. ಅವರು ಹೈಕಮಾಂಡ್‌ಗೆ ಹೋಗಿ ವಿವರಿಸಬೇಕು ಎಂದು ನುಡಿದರು.

ಸಚಿವ ಸಂಪುಟದಲ್ಲಿ ಖಾಲಿ ಇರುವ ಎರಡು ಎಸ್‌ಟಿ ಹುದ್ದೆಗಳ ಭರ್ತಿಗಾಗಿ ನಿಯೋಗವೊಂದು ಕೋರಲಿದೆ, ಅವುಗಳನ್ನು ಯಾವುದೇ ವಿಳಂಬವಿಲ್ಲದೆ ಭರ್ತಿ ಮಾಡಬೇಕೆಂದು ಮತ್ತು ಅದೇ ಖಾತೆಗಳನ್ನು ವಾಲ್ಮೀಕಿ (ಎಸ್‌ಟಿ) ಸಮುದಾಯಕ್ಕೆ ನೀಡಬೇಕೆಂದು ನಾವು ಕೇಳುತ್ತೇವೆ. ಇದು ಬೇಡಿಕೆ. ಅಽವೇಶನದ ನಂತರ ನಾವು ಹೋಗುತ್ತೇವೆ ಎಂದರು.

RELATED ARTICLES

Latest News