ಚಿತ್ರದುರ್ಗ,ಆ.14-ಇಲ್ಲಿ ನಡೆದಿದ್ದ ಆಟೋ ಚಾಲಕ ರವಿಕುಮಾರ್ ಹತ್ಯೆ ಪ್ರಕರಣವನ್ನು ಭೇಧಿಸಿರುವ ಚಿತ್ರದುರ್ಗ ಗ್ರಾಮಾಂತರ ಠಾಣೆಯ ಪೊಲೀಸರು ಪತ್ನಿ,ಮಗ ಹಾಗು ಪ್ರಿಯಕರನನ್ನು ಬಂಧಿಸಿದ್ದಾರೆ.ಸುನೀತಾ, ಪುತ್ರ ವಿಷ್ಣು ಹಾಗು ಪ್ರಿಯಕರ ಗಣೇಶ್ ಬಂಧಿತ ಅರೋಪಿ.
ಘಟನೆ ವಿವರ : ತಾಲೂಕಿನ ಈರಜ್ಜನಹಟ್ಟಿ ಗ್ರಾಮದ ಬಳಿ ಕಳೆದ ಜುಲೈ 20ರಂದು ಆಟೋ ಚಾಲಕ ರವಿಕುಮಾರ್ (51) ಕೊಲೆ ನಡೆದಿತ್ತು.ಶವವನ್ನು ಮೂಟೆ ಕಟ್ಟಿ ಬಿಸಾಡಲಾಗಿತ್ತು.
ನಂತರ ಶವಪತ್ತೆಯಾಗಿ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಗುರುತು ಪತ್ತೆಯಾದ ನಂತರ ಪೊಲೀಸರ ವಿಚಾರಣೆ ವೇಳೆ ಕೊಲೆಯಾ ರವಿಕುಮಾರ್ ಪತ್ನಿ ಸುನಿತಾ, ತನ್ನ ಮಗಳ ಗಂಡನ ಮೇಲೆ ಆರೋಪ ಹೊರಿಸಿದ್ದಳು. ಆದರೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ ಪೊಲೀಸೆ ಬೆಂಗಳೂರು ಮೂಲದವನಾದ ಹಲವು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಗಣೇಶನ ಪಾತ್ರದ ಬಗ್ಗೆ ಸುಳಿವು ಸಿಕ್ಕಿತ್ತು.
ಆತ ಕೆಲ ತಿಂಗಳಿಂದ ಕೆಳಗೋಟೆ ಬಡಾವಣೆಯಲ್ಲಿ ವಾಸವಾಗಿದ್ದ. ಈ ವೇಳೆ ಸುನೀತಾ ಜೊತೆ ಅನೈತಿಕ ಸಂಬಂಧ ಹೊಂದಿರುವದು ಗೊತ್ತಾಗಿತ್ತು.ಇವರ ಕಳ್ಳಾಟಕ್ಕೆ ಅಡ್ಡಿಯಾಗಿದ್ದ ರವಿಕುಮಾರ್ ಕೊಲೆಗೆ ಸಂಚು ರೂಪಿಸಿದ್ದ ಕೊಲೆ ಮಾಡಿರುವ ಅಸಲಿ ಸತ್ಯ ಬಯಲಿಗೆಳೆದಿದ್ದಾರೆ. ಮೃತ ರವಿಕುಮಾರ್ ಪತ್ನಿ ಸುನೀತಾ, ಪುತ್ರ ವಿಷ್ಣು ಹಾಗು ಆಕೆಯ ಪ್ರಿಯಕರ ಗಣೇಶನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದರಲ್ಲಿ ಮಗ ವಿಷ್ಣು ಕೂಡ ಸಹಕರಿಸಿರುವುದು ತನಿಖೆ ಯಿಂದ ತಿಳಿದು ಬಂದಿದ್ದು ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಣದ ಮೋಹಕ್ಕೆ ಇಡೀ ಕುಟುಂಬ ನಾಶವಾಗಿದೆ.
- BIG NEWS : ಹೊಸಕೆರೆ ಬಳಿಯ ಅಪಾರ್ಟ್ಮೆಂಟ್ನಲ್ಲಿ ನಟ ದರ್ಶನ್ ಅರೆಸ್ಟ್
- ರಾಜ್ಯದಲ್ಲಿ 13 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ದಾರರು : ಕೆ.ಹೆಚ್.ಮುನಿಯಪ್ಪ
- ಭೂಸ್ವಾಧೀನ ವೇಳೆ ಹಣ ಪಡೆದಿದ್ದರೆ ಸೂರ್ಯ ಮುಳುಗುವುದರೊಳಗೆ ಸಸ್ಪೆಂಡ್ : ಡಿಕೆಶಿ
- ಬ್ಯಾಟ್ನಿಂದ ಹೊಡೆದು ಮಗನನ್ನು ಕೊಂದಿದ್ದ ತಂದೆಗೆ ಜೀವಾವಧಿ ಶಿಕ್ಷೆ
- ರಾಷ್ಟ್ರಪತಿ ಪದಕಕ್ಕೆ ಆಯ್ಕೆಯಾದ 1090 ಅಧಿಕಾರಿಗಳು