Thursday, August 14, 2025
Homeರಾಷ್ಟ್ರೀಯ | Nationalಬ್ಯಾಟ್‌ನಿಂದ ಹೊಡೆದು ಮಗನನ್ನು ಕೊಂದಿದ್ದ ತಂದೆಗೆ ಜೀವಾವಧಿ ಶಿಕ್ಷೆ

ಬ್ಯಾಟ್‌ನಿಂದ ಹೊಡೆದು ಮಗನನ್ನು ಕೊಂದಿದ್ದ ತಂದೆಗೆ ಜೀವಾವಧಿ ಶಿಕ್ಷೆ

Father sentenced to life imprisonment for beating son to death with bat

ಬೆಂಗಳೂರು,ಆ.14- ಮಗನನ್ನು ಬ್ಯಾಟ್‌ನಿಂದ ಹೊಡೆದು ಕೊಲೆ ಮಾಡಿದ ಆರೋಪಿ ತಂದೆಗೆ 25 ಸಾವಿರ ದಂಡ ಹಾಗೂ ಜೀವಾವಧಿ ಶಿಕ್ಷೆ ವಿಧಿಸಿ ಸಿಟಿ ಸಿವಿಲ್‌ ಮತ್ತು ಸತ್ರ ಮಕ್ಕಳ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

ಕುಮಾರಸ್ವಾಮಿ ಲೇಔಟ್‌ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ವಾಸವಿರುವ ರವಿಕುಮಾರ್‌ ಎಂಬುವವರು ಮದ್ಯವೆಸನಿಯಾಗಿದ್ದು, ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಇವರ ಪತ್ನಿ ಗಾರ್ಮೆಂಟ್‌್ಸ ಕೆಲಸಕ್ಕೆ ಹೋಗಿ ಕುಟುಂಬ ನಿಭಾಯಿಸುತ್ತಿದ್ದಾರೆ.

ಪ್ರತಿನಿತ್ಯ ಕುಡಿಯಲು ಪತ್ನಿಗೆ ಪತಿ ರವಿಕುಮಾರ್‌ ಪೀಡಿಸುತ್ತಿದ್ದನು. ಮಗ ತೇಜಸ್‌‍ ತಾಯಿಯ ದುಡಿಮೆ ಸಾಲುತ್ತಿಲ್ಲ ಎಂಬ ಕಾರಣಕ್ಕೆ ಮತ್ತು ನನ್ನ ಅಣ್ಣನನ್ನು ಓದಿಸುವ ಸಲುವಾಗಿ ಹಾಲು ಮತ್ತು ಪೇಪರ್‌ ಹಾಕುವ ಕೆಲಸಕ್ಕೆ ಹೋಗುತ್ತಿದ್ದರಿಂದ ಶಾಲೆಗೆ ಆಗಾಗ್ಗೆ ಗೈರಾಗುತ್ತಿದ್ದನು.

ಇದೇ ವಿಚಾರಕ್ಕೆ ಕೋಪಗೊಂಡು ತಂದೆ ರವಿಕುಮಾರ್‌ ಮಗ ತೇಜಸ್‌‍ ಜೊತೆ ಗಲಾಟೆ ಮಾಡಿದ್ದಾರೆ. 2024, ನವೆಂಬರ್‌ 15 ರಂದು ತನ್ನ 14 ವರ್ಷದ ಮಗ ತೇಜಸ್‌‍ಗೆ ತಂದೆ ಮರದ ಬ್ಯಾಟ್‌ನಿಂದ ಹಲವಾರು ಬಾರಿ ತಲೆ,ಮುಖ ಹಾಗೂ ಮೈಕೈಗೆ ಹೊಡೆದಿದ್ದಲ್ಲದೇ ಗೋಡೆಗೆ ತಲೆ ಗುದ್ದಿಸಿ ಕೊಲೆ ಮಾಡಿದ್ದನು.ಈ ಬಗ್ಗೆ ಪತ್ನಿ ಕುಮಾರಸ್ವಾಮಿ ಲೇಔಟ್‌ ಠಾಣೆ ಪೊಲೀಸರಿಗೆ ಪತಿ ರವಿಕುಮಾರ್‌ ವಿರುದ್ಧ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಅಲ್ಲಿನ ತನಿಖಾಧಿಕಾರಿಯಾಗಿದ್ದ ಇನ್‌್ಸಪೆಕ್ಟರ್‌ ಜಗದೀಶ್‌ ಅವರು ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣವನ್ನು ಸಿಸಿಹೆಚ್‌-51 ನ್ಯಾಯಾಧೀಶರಾದ ಸಂತೋಷ್‌ ಅವರು ವಿಚಾರಣೆ ನಡೆಸಿ ಆರೋಪಿ ರವಿಕುಮಾರನಿಗೆ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಪ್ರಕರಣವನ್ನು ಸರ್ಕಾರಿ ಅಭಿಯೋಜಕರಾದ ಭಾಸ್ಕರ್‌ ಅವರು ವಾದ ಮಂಡಿಸಿರುತ್ತಾರೆ.

RELATED ARTICLES

Latest News