Friday, August 15, 2025
Homeರಾಷ್ಟ್ರೀಯ | Nationalತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಅಕ್ಷರ ಪುರುಷೋತ್ತಮ ದರ್ಶನ ಮಂಟಪ ಸ್ಥಾಪನೆ

ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಅಕ್ಷರ ಪುರುಷೋತ್ತಮ ದರ್ಶನ ಮಂಟಪ ಸ್ಥಾಪನೆ

Akshar Purushottam Darshan Mantapa in tirupati

ತಿರುಪತಿ, ಆ.15- ಆಂಧ್ರಪ್ರದೇಶ ಪ್ರಸಿದ್ಧ ಯಾತ್ರಾ ಸ್ಥಳ ತಿರುಪತಿಯಲ್ಲಿನ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಅಕ್ಷರ ಪುರುಷೋತ್ತಮ ದರ್ಶನ ಮಂಟಪವನ್ನು ಸ್ಥಾಪಿಸಲಾಗಿದೆ. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅಕ್ಷರ ಪುರುಷೋತ್ತಮ ದರ್ಶನ ಮತ್ತು ಇತರ ದರ್ಶನಗಳನ್ನು ತಿಳಿದುಕೊಳ್ಳುವುದನ್ನು ಖಚಿತ ಪಡಿಸಿಕೊಳ್ಳುವ ಉದ್ದೇಶದಿಂದ ವಿಶ್ವವಿದ್ಯಾಲಯ ವಿಶಾಲವಾದ ಆವರಣದಲ್ಲಿ ಇತರ ದರ್ಶನಗಳ ಮಂಟಪಗಳಂತೆ ಅಕ್ಷರ ಪುರುಷೋತ್ತಮ ದರ್ಶನ ಮಂಟಪವನ್ನು ರಚಿಸಲಾಗಿದೆ.

ಉದ್ಘಾಟನೆಯ ವೇಳೆ ವೇದಾಂತ ತತ್ವ ಶಾಸ್ತ್ರಗಳ ವಿವಿಧ ವೈದಿಕ ಪಂಥಗಳ ವ್ಯಾಖ್ಯಾನಗಳನ್ನು ಆಚರಿಸಲು ಭಾಷ್ಯೋತ್ಸವವನ್ನು ಆಯೋಜಿಸಲಾಗಿತ್ತು. ಶ್ರೀ ಸ್ವಾಮಿ ನಾರಾಯಣ್‌ ಬೋಧಿಸಿದ ಅಕ್ಷರ ಪುರುಷೋತ್ತಮ ದರ್ಶನವನ್ನು ಪ್ರತಿನಿಧಿಸುವ ಪ್ರಾಸ್ಥಾನತ್ರಯೀ ಸ್ವಾಮೀ ನಾರಾಯಣ ಭಾಷ್ಯವನ್ನು ಪ್ರಸ್ತುತಪಡಿಸಲಾಯಿತು.

ಭಾರತೀಯ ಸಂಸ್ಕೃತಿಯ ಜಾಗತಿಕ ಮಹಾ ಪುರುಷರ ಪ್ರತಿಮೆಗಳ ಜೊತೆ ಪ್ರಪಂಚದಾದ್ಯಂತ ವೈದಿಕ ಸನಾತನ ಧರ್ಮವನ್ನು ಪ್ರಚಾರ ಮಾಡಿದ ಶ್ರೀ ಪ್ರಮುಖ್‌ ಸ್ವಾಮಿ ಮಹರಾಜರ ಪ್ರತಿಮೆಯನ್ನು ಸ್ಥಾಪಿಸಿ ವಿಶೇಷ ಗೌರವ ಸಲ್ಲಿಸಲಾಯಿತು.

ಶ್ರೀ ಮಹಾಂತ ಸ್ವಾಮೀಜಿ ಆ.2 ರಂದ ನಡೆದ ವಿವಿಧ ಧಾರ್ಮಿಕ ಕಾರ್ಯಗಳ ನೇತೃತ್ವ ವಹಿಸಿದ್ದರು. ಕಾಂಚಿಪೀಠದ ಶಂಕರಚಾರ್ಯ ವಿಜಯೇಂದ್ರ ಸರಸ್ವತಿ ಮಹರಾಜರು ಮಾರ್ಗದರ್ಶನ ನೀಡಿದ್ದರು. ಒಡಿಶಾ ರಾಜ್ಯಪಾಲ ಡಾ. ಹರಿಬಾಬು ಕಂಭಂಪತೀಜಿ, ಉತ್ತರಖಂಡದ ಮುಖ್ಯಮಂತ್ರಿ ಪುಷ್ಕರ್‌ಸಿಂಗ್‌ ಧಾಮಿ, ಶ್ರೀ ಭದ್ರೇಶ್‌ದಾಸ ಸ್ವಾಮೀಜಿ ಮತ್ತಿತರರು ಕಾರ್ಯಕ್ರದಲ್ಲಿ ಭಾಗವಹಿಸಿದ್ದರು.

RELATED ARTICLES

Latest News