ಬೆಂಗಳೂರು, ನ.22- ರಾಜ್ಯದಲ್ಲಿನ ಬರ ಪರಿಸ್ಥಿತಿ ಕುರಿತು ಪಕ್ಷದ ಮುಖಂಡರು ನಡೆಸಿರುವ ಅಧ್ಯಯನದ ಜಿಲ್ಲಾವಾರು ಮಾಹಿತಿಯನ್ನು ಜೆಡಿಎಸ್ ಸಂಗ್ರಹ ಮಾಡುತ್ತಿದೆ. ಜಿಲ್ಲಾವಾರು ತಂಡಗಳನ್ನು ರಚನೆ ಮಾಡಿದ್ದು, ಆಯಾ ಜಿಲ್ಲೆಯಲ್ಲಿನ ವಾಸ್ತವ ಪರಿಸ್ಥಿತಿ ಅಧ್ಯಯನ ಮಾಡಿ ವರದಿ ನೀಡಲು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನಿರ್ದೇಶನ ನೀಡಿದ್ದರು.
ಆಯಾ ಜಿಲ್ಲೆಯ ಪಕ್ಷದ ಜಿಲ್ಲಾಧ್ಯಕ್ಷರು, ಹಾಲಿ ಶಾಸಕರು, ಮಾಜಿ ಶಾಸಕರು, ಪರಾಭವಗೊಂಡಿರುವ ಅಭ್ಯರ್ಥಿಗಳು, ಮತ್ತಿತರ ಹಿರಿಯ ಮುಖಂಡರನ್ನು ಒಳಗೊಂಡ 31 ತಂಡಗಳನ್ನು ರಚನೆ ಮಾಡಲಾಗುತ್ತು. ಬರ ಪರಿಸ್ಥಿತಿಗೆ ಸಂಬಂಧಿಸಿದಂತೆ ರಚನೆ ಮಾಡಲಾಗಿದ್ದ ತಂಡಗಳು 31 ಜಿಲ್ಲೆಗಳಿಗೂ ಭೇಟಿ ನೀಡಿ ದೀಪಾವಳಿ ಹಬ್ಬದ ಒಳಗಾಗಿ ಅಧ್ಯಯನ ಮುಗಿಸಿ ಕೇಂದ್ರ ಕಚೇರಿಗೆ ವರದಿ ನೀಡಬೇಕೆಂದು ಸೂಚನೆ ನೀಡಲಾಗಿತ್ತು.
ಎನ್‌ಸಿಇಆರ್‌ಟಿ ಪಠ್ಯದಲ್ಲಿ ರಾಮಾಯಣ, ಮಹಾಭಾರತ ಸೇರ್ಪಡೆಗೆ ಶಿಫಾರಸು
ಪಕ್ಷದ ಕೇಂದ್ರ ಕಚೇರಿಯು ಆಯಾ ತಂಡದ ಮುಖ್ಯಸ್ಥರಿಂದ ಬರ ಅಧ್ಯಯನದ ಮಾಹಿತಿಯನ್ನು ಕಲೆ ಹಾಕುತ್ತಿದೆ. ಈಗಾಗಲೇ ಹಲವು ಜಿಲ್ಲೆಗಳ ಮಾಹಿತಿ ಪಕ್ಷದ ಕೇಂದ್ರ ಕಚೇರಿಗೆ ತಲುಪಿದೆ. ಎಲ್ಲಾ ಜಿಲ್ಲೆಗಳ ಮಾಹಿತಿ ಒಳಗೊಂಡ ಬರ ಕುರಿತ ವರದಿಯೊಂದನ್ನು ಸಿದ್ದರಪಡಿಸಲಾಗುತ್ತಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಬೆಳೆ ಹಾನಿಗೆ ಒಳಗಾಗಿರುವ ಪ್ರತಿ ಪ್ರದೇಶಕ್ಕೂ ಭೇಟಿ ನೀಡಬೇಕು. ಸಂಕಷ್ಟದಲ್ಲಿರುವ ರೈತರ ಜತೆ ನೇರ ಮಾತುಕತೆ ನಡೆಸಿ ವರದಿಗಳನ್ನು ಸಿದ್ಧ ಮಾಡಬೇಕು. ಅಧ್ಯಯನ ವರದಿ ಮುಂದಿಟ್ಟುಕೊಂಡು ಪಕ್ಷವು ವಿಧಾನ ಮಂಡಲದ ಒಳಗೆ, ಹೊರಗೆ ದೊಡ್ಡ ಮಟ್ಟದಲ್ಲಿ ರೈತರ ಪರವಾಗಿ ದನಿ ಎತ್ತುವುದಾಗಿ ಕುಮಾರಸ್ವಾಮಿ ತಿಳಿಸಿದ್ದರು.
41 ಕಾರ್ಮಿಕರನ್ನು ರಕ್ಷಿಸುವ ಅರ್ಧ ದಾರಿ ಸವೇಸಿರುವ ರಕ್ಷಣಾ ಸಿಬ್ಬಂದಿ
ಬರ ಪರಿಹಾರ ಕ್ರಮಗಳನ್ನು ಸರ್ಕಾರ ಸಮರ್ಪಕವಾಗಿ ಕೈಗೊಂಡಿಲ್ಲ. ಬೆಳೆ ಹಾನಿಗೆ ಪರಿಹಾರ ನೀಡಿಲ್ಲ. ಒಂದೆಡೆ ಬರ ಮತ್ತೊಂದೆಡೆ ವಿದ್ಯುತ್ ಅಭಾವದಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದು, ರೈತರ ಪರವಾಗಿ ಪಕ್ಷ ಹೋರಾಟ ನಡೆಸುವ ಪೂರ್ವಭಾವಿಯಾಗಿ ಅಧ್ಯಯನ ನಡೆಸಬೇಕು ಎಂಬ ನಿರ್ದೇಶನವನ್ನು ಕುಮಾರಸ್ವಾಮಿ ನೀಡಿದ್ದರು.