Sunday, August 17, 2025
Homeರಾಷ್ಟ್ರೀಯ | Nationalತಾಯ್ನಾಡಿಗೆ ಮರಳಿದ ಗಗನಯಾನಿ ಶುಭಾಂಶು ಶುಕ್ಲಾಗೆ ಅದ್ಧೂರಿ ಸ್ವಾಗತ

ತಾಯ್ನಾಡಿಗೆ ಮರಳಿದ ಗಗನಯಾನಿ ಶುಭಾಂಶು ಶುಕ್ಲಾಗೆ ಅದ್ಧೂರಿ ಸ್ವಾಗತ

India’s First ISS Astronaut Shubhanshu Shukla Receives Warm Welcome in Delhi

ನವದೆಹಲಿ,ಆ.17- ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌‍ಎಸ್‌‍) ತೆರಳಿ ಸುರಕ್ಷಿತವಾಗಿ ಭೂಮಿಗೆ ಮರಳಿದ ಮೊದಲ ಭಾರತೀಯ ಎಂಬ ಶ್ರೇಯಕ್ಕೆ ಪಾತ್ರವಾದ ಗಗನಯಾನಿ ಗ್ರೂಪ್‌ ಕ್ಯಾಪ್ಟನ್‌ ಶುಭಾಂಶು ಶುಕ್ಲಾ ಇಂದು ಬೆಳಗಿನ ಜಾವ ತಾಯ್ನಾಡಿಗೆ ಆಗಮಿಸಿದರು.

ಅಮೆರಿಕದಿಂದ ಮಧ್ಯರಾತ್ರಿ 1.30ರ ವೇಳೆಗೆ ದೆಹಲಿಗೆ ಆಗಮಿಸಿದ ಶುಭಾಂಶು ಶುಕ್ಲಾಗೆ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿತು. ಕೇಂದ್ರ ಸಚಿವ ಜಿತೇಂದ್ರ ಸಿಂಗ್‌, ದೆಹಲಿ ಸಿಎಂ ರೇಖಾ ಗುಪ್ತಾ, ಶುಭಾಂಶು ಶುಕ್ಲಾರನ್ನು ಬರಮಾಡಿಕೊಂಡರು.

ಶುಕ್ಲಾ ಪ್ರಧಾನಿ ಮೋದಿಯನ್ನು ಭೇಟಿಯಾಗಲಿದ್ದಾರೆ. ಬಳಿಕ, ತಮ್ಮ ತವರು ಲಕ್ನೋಗೆ ಪ್ರಯಾಣಿಸುವ ಸಾಧ್ಯತೆ ಇದೇ 23ರಂದು ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಕಾರ್ಯಕ್ರಮದಲ್ಲಿಅವರು ಭಾಗಿಯಾಗಲಿದ್ದಾರೆ ಎಂದು ಜಿತೇಂದ್ರ ಸಿಂಗ್‌ ತಿಳಿಸಿದ್ದಾರೆ.

ಶುಕ್ಲಾ ಅವರು ನಾಸಾ ನೇತೃತ್ವದ ಆಕ್ಸಿಯಂ-4 ಮಿಷನ್‌ನಲ್ಲಿ ಭಾಗವಹಿಸಿದ್ದರು. ಶುಕ್ಲಾ ಅವರು ಬಾಹ್ಯಾಕಾಶಕ್ಕೆ ಹೋದ ಎರಡನೇ ಭಾರತೀಯ ವ್ಯಕ್ತಿ. ಅವರು 18 ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಇದ್ದರು. ಜುಲೈ 15 ರಂದು ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಭೂಮಿಗೆ ಇಳಿದಿದ್ದರು. ಭಾರತದ ಬಾಹ್ಯಾಕಾಶ ಯೋಜನೆಗಳಿಗೆ ಶುಕ್ಲಾ ಅವರ ಅನುಭವ ನೆರವಾಗಲಿದೆ. ಬಾಹ್ಯಾಕಾಶ ಕೇಂದ್ರದಲ್ಲಿ ಇದ್ದಾಗ, ಶುಕ್ಲಾ ಅನೇಕ ವೈಜ್ಞಾನಿಕ ಪ್ರಯೋಗಗಳನ್ನು ಮಾಡಿದರು.

ಇಸ್ರೋ ಪ್ರಕಾರ, ಶುಕ್ಲಾ ಗಗನಯಾನ ಅನುಭವ, ಕೆಲಸವು ಭಾರತದ ಮಾನವ ಸಹಿತ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮಕ್ಕೆ ನೇರವಾಗಿ ಸಹಾಯ ಆಗಲಿದೆ. ಈ ವರ್ಷದ ಕೊನೆಯಲ್ಲಿ ಗಗನಯಾನದ ಮೊದಲ ಮಾನವರಹಿತ ಮಿಷನ್‌ ನಡೆಯಲಿದೆ. ಆಕ್ಸಿಯಂ-4 ಮಿಷನ್‌ ಭಾರತದ ಮಾನವ ಸಹಿತ ಬಾಹ್ಯಾಕಾಶ ಹಾರಾಟದ ಮಹತ್ವಾಕಾಂಕ್ಷೆಗೆ ಒಂದು ದೊಡ್ಡ ಹೆಜ್ಜೆಯಾಗಿದೆ.

ಶುಕ್ಲಾ ಅವರ ಕೊಡುಗೆಗಳು ಭಾರತೀಯ ಗಗನಯಾತ್ರಿಯನ್ನು ದೇಶೀಯ ಬಾಹ್ಯಾಕಾಶ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ಕಳುಹಿಸಲು ಸಹಾಯ ಮಾಡುತ್ತದೆ. ಶುಕ್ಲಾ ಅವರ ಈ ಸಾಧನೆ ಭಾರತಕ್ಕೆ ಹೆಮೆ ತಂದಿದೆ. ಅವರ ಅನುಭವ ಮತ್ತು ಜ್ಞಾನವು ಮುಂದಿನ ಪೀಳಿಗೆಯ ಗಗನಯಾತ್ರಿಗಳಿಗೆ ಸ್ಫೂರ್ತಿ ನೀಡುತ್ತದೆ. ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲು ಇದು ಸಹಾಯ ಮಾಡಲಿದೆ.

2027ರಲ್ಲಿ ಇಸ್ರೋ ತನ್ನ ಮೊದಲ ಮಾನವ ಬಾಹ್ಯಾಕಾಶ ಹಾರಾಟ ಎದುರು ನೋಡುತ್ತಿರುವುದರಿಂದ ತಮ್ಮ ಅನುಭವಗಳನ್ನು ಸ್ನೇಹಿತರು ಹಾಗೂ ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳಲು ಶುಭಾಂಶು ಉತ್ಸುಕರಾಗಿದ್ದಾರೆ. ಕಳೆದ ಒಂದು ವರ್ಷದಿಂದ ಐಎಸ್‌‍ಎಸ್‌‍ಗೆ ಆಕ್ಸಿಯಂ-4 ಮಿಷನ್‌ಗಾಗಿ ಅಮೆರಿಕದಲ್ಲಿ ತರಬೇತಿ ಪಡೆಯುತ್ತಿರುವ ಶುಕ್ಲಾ ಅವರು, ನಾಳೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ, ಶೀಘ್ರದಲ್ಲೇ ತಮ ತವರು ಲಖನೌಗೆ ಪ್ರಯಾಣಿಸುವ ನಿರೀಕ್ಷೆಯಿದೆ. ಆ.22-23 ರಂದು ನಡೆಯಲಿರುವ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯಲ್ಲಿ ಭಾಗವಹಿಸಲು ಶುಕ್ಲಾ ಅವರು ರಾಜಧಾನಿಗೆ ಹಿಂತಿರುಗುವ ನಿರೀಕ್ಷೆಯಿದೆ.

ವಿಮಾನದಲ್ಲಿ ಕುಳಿತು ನಗುತ್ತಿರುವ ಫೋಟೋವನ್ನು ಶುಕ್ಲಾ ಅವರು ತಮ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿ ಮತ್ತು ಅದರ ಶೀರ್ಷಿಕೆಯಲ್ಲಿ ಅವರು ಅಮೆರಿಕವನ್ನು ತೊರೆದಾಗ ವಿಶಿಷ್ಟ ಭಾವನೆಗಳಿಂದ ತುಂಬಿದ್ದಾಗಿ ಮತ್ತು ತಮ ಅನುಭವಗಳನ್ನು ಮನೆಯಲ್ಲಿ ಎಲ್ಲರೊಂದಿಗೆ ಹಂಚಿಕೊಳ್ಳಲು ಭಾರತಕ್ಕೆ ಮರಳಲು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.

ನಾನು ಭಾರತಕ್ಕೆ ಹಿಂತಿರುಗಲು ವಿಮಾನದಲ್ಲಿ ಕುಳಿತಾಗ, ನನ್ನ ಹೃದಯದಲ್ಲಿ ಭಾವನೆಗಳ ಮಿಶ್ರಣವಿದೆ. ಕಳೆದ ಒಂದು ವರ್ಷದಿಂದ ಈ ಕಾರ್ಯಾಚರಣೆಯ ಸಮಯದಲ್ಲಿ ನನ್ನ ಸ್ನೇಹಿತರು ಮತ್ತು ಕುಟುಂಬವಾಗಿದ್ದ ಅದ್ಭುತ ಜನರ ಗುಂಪನ್ನು ಬಿಟ್ಟು ಹೋಗುವುದು ನನಗೆ ದುಃಖ ತಂದಿತ್ತು. ಕಾರ್ಯಾಚರಣೆಯ ನಂತರ ಮೊದಲ ಬಾರಿಗೆ ನನ್ನ ಎಲ್ಲಾ ಸ್ನೇಹಿತರು, ಕುಟುಂಬ ಮತ್ತು ದೇಶದ ಪ್ರತಿಯೊಬ್ಬರನ್ನು ಭೇಟಿಯಾಗಲು ತುಂಬಾ ಉತ್ಸುಕನಾಗಿದ್ದೇನೆ. ಜೀವನ ಎಂದರೆ ಇದೇ ಎಂದು ನಾನು ಭಾವಿಸುತ್ತೇನೆ – ಎಲ್ಲವೂ ಒಂದೇ ಬಾರಿಗೆ ಎಂದು ಶುಕ್ಲಾ ಪೋಸ್ಟ್‌ನಲ್ಲಿ ತಿಳಿಸಿದ್ದರು.

ಮಿಷನ್‌ ಸಮಯದಲ್ಲಿ ಮತ್ತು ನಂತರ ಎಲ್ಲರಿಂದಲೂ ಅದ್ಭುತ ಪ್ರೀತಿ ಮತ್ತು ಬೆಂಬಲವನ್ನು ಪಡೆದ ಬಳಿಕ ನನ್ನ ಅನುಭವಗಳನ್ನು ನಿಮೆಲ್ಲರೊಂದಿಗೆ ಹಂಚಿಕೊಳ್ಳಲು ಭಾರತಕ್ಕೆ ಹಿಂತಿರುಗಲು ನಾನು ಕಾತರದಿಂದ ಕಾಯುತ್ತಿದ್ದೇನೆ. ವಿದಾಯ ಕಷ್ಟ ಆದರೆ ನಾವು ಜೀವನದಲ್ಲಿ ಚಲಿಸುತ್ತಲೇ ಇರಬೇಕು. ನನ್ನ ಕಮಾಂಡರ್‌ ಪೆಗ್ಗಿ ವಿಟ್ಸನ್‌ ಪ್ರೀತಿಯಿಂದ ಹೇಳುವಂತೆ, ಬಾಹ್ಯಾಕಾಶ ಹಾರಾಟದಲ್ಲಿ ಏಕೈಕ ಸ್ಥಿರವೆಂದರೆ ಬದಲಾವಣೆ. ಅದು ಜೀವನಕ್ಕೂ ಅನ್ವಯಿಸುತ್ತದೆ ಎಂದು ನಾನು ನಂಬುತ್ತೇನೆ ಎಂದು ಅವರು ಹೇಳಿದ್ದಾರೆ.

ಐಎಸ್‌‍ಎಸ್‌‍ನಲ್ಲಿ 18 ದಿನಗಳನ್ನು ಕಳೆದ ನಂತರ ಗಗನಯಾತ್ರಿ ಕಳೆದ ತಿಂಗಳು ಭೂಮಿಗೆ ಮರಳಿದ್ದರು. ಈ ಅವಧಿಯಲ್ಲಿ ಅವರು ಭಾರತಕ್ಕೆ ಸಂಬಂಧಿಸಿದ ಏಳು ನಿರ್ದಿಷ್ಟ ಪ್ರಯೋಗಗಳನ್ನು ನಡೆಸಿದ್ದಾರೆ. ಅವುಗಳನ್ನು ಈಗ ಭಾರತೀಯ ವಿಜ್ಞಾನಿಗಳ ಪರಿಶೀಲನೆಗಾಗಿ ಮರಳಿ ತರಲಾಗಿದ್ದು, ಫಲಿತಾಂಶಗಳು ಶೀಘ್ರದಲ್ಲೇ ಬರುವ ನಿರೀಕ್ಷೆಯಿದೆ.

ಜೂನ್‌ 25 ರಂದು ಅಮೆರಿಕದಿಂದ ಗೆ -4 ಕಾರ್ಯಾಚರಣೆಯನ್ನು ಪ್ರಾರಂಭಿಸುವ ಮೊದಲು ಅವರ ಪ್ಲೇಪಟ್ಟಿಯಲ್ಲಿದ್ದ ಬಾಲಿವುಡ್‌ ಚಲನಚಿತ್ರ ಸ್ವದೇಶ್‌ನ ಹಾಡನ್ನು ನೆನಪಿಸಿಕೊಂಡು, ಎಂಡ್‌ ಆಫ್‌ ದಿ ಡೇ – ಯುನ್‌ ಹಿ ಚಲಾ ಚಲ್‌ ರಹಿ – ಜೀವನ್‌ ಗಾಡಿ ಹೈ ಸಮಯ್‌ ಪಹಿಯಾ ಎಂದು ಶುಕ್ಲಾ ಹೇಳಿದ್ದರು.

ಶುಕ್ರವಾರ ಹ್ಯೂಸ್ಟನ್‌ನ ಭಾರತೀಯ ದೂತಾವಾಸದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಶುಕ್ಲಾ ಮತ್ತು ಅವರ ಸಹಾಯಕ ಗಗನಯಾತ್ರಿ ಪ್ರಶಾಂತ್‌ ನಾಯರ್‌ ಭಾಗವಹಿಸಿದ್ದರು.ಕೆಂಪು ಕೋಟೆಯಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಹೇಳಿದರು ಮತ್ತು ಗ್ರೂಪ್‌ ಕ್ಯಾಪ್ಟನ್‌ ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾತ್ರೆಯಿಂದ ಹಿಂತಿರುಗಿದ್ದಾರೆ ಎಂದು ನೆನಪಿಸಿಕೊಂಡರು.

RELATED ARTICLES

Latest News