ಮಂಡ್ಯ,ಆ.17- ಚಿನ್ನದ ಅಂಗಡಿಯಲ್ಲಿನ ಕಳುವು ಮಾಡಲು ಬಂದ ದುಷ್ಕರ್ಮಿಗಳನ್ನು ತಡೆಯಲು ಹೋದ ಹೋಟೆಲ್ ಮಾಲೀಕನನ್ನುಇರಿದು ಕೊಲೆ ಮಾಡಿರುವ ಆಘಾತಕಾರಿ ಘಟನೆ ಮಂಡ್ಯ ಜಿಲ್ಲೆಯ ಮಳವಳಿ ್ಳತಾಲೂಕಿನ ಕಿರುಗಾವಲು ಗ್ರಾಮದಲ್ಲಿ ನಡೆದಿದೆ. ಕಿರುಗಾವಲು ಗ್ರಾಮದ ನಿವಾಸಿ ಹೋಟೆಲ್ ನಡೆಸುತ್ತಿದ್ದ ಮಹಾದೇವಪ್ಪ (75) ಕೊಲೆಗೀಡಾದ ವ್ಯಕ್ತಿ.
ಇಂದು ಬೆಳಗಿನ ಜಾವ ಈ ಘಟನೆ ನಡೆದಿದ್ದು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಕಳೆದ ವಾರ ಸರಣಿ ಕಳ್ಳತನ ನಡೆದಿದ್ದು ಆರೋಪಿ ಬಂಧಿಸಿವುದರ ಒಳಗೆ ಗ್ರಾಮದ ಮುಖ್ಯ ವೃತ್ತದ ಬಳಿ ಇರುವ ಮಹಾಲಕ್ಷ್ಮಿ ಜ್ಯುಯಲರಿ ಹಾಗೂ ಬ್ಯಾಂಕರ್‌ರಸಅಂಗಡಿ ಬೀಗ ಮುರಿದು ನಾಲ್ಕೈದು ಮಂದಿ ದುಷ್ಕರ್ಮಿಗಳು ಕಳುವು ಮಾಡುತ್ತಿರುವಾಗ ಶಬ್ದ ಕೇಳಿ ಆಗಷ್ಟೇ ಹೋಟೆಲ್ ಬಾಗಿಲು ತೆಗೆದಿದ್ದ ಮಹಾದೇವಪ್ಪ ದುಷ್ಕರ್ಮಿಗಳನ್ನು ತಾರು ಎಂದು ಪ್ರಶ್ನಿಸಿದ್ದಾರೆ.
ನಂತರ ಹಿಡಿಯಲು ಹೋದಾಗ ಮಹಾದೇವಪ್ಪ ಅವರ ಮೇಲೆ ಎರಗಿದ ದುಷ್ಕರ್ಮಿಗಳು ಆತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವುದರ ಜೊತೆಗೆ ಕುತ್ತಿಗೆ ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಮಾರು 150 ಗ್ರಾಂ ಚಿನ್ನ 2 ಕೆ ಜಿ ಬೆಳ್ಳಿ .ಹಿತ್ತಾಳೆ, ಪದಾರ್ಥಗಳ ಜೊತೆಗೆ ಸುಮಾರು 30 ಸಾವಿರ ಮೌಲ್ಯದ ಕೃತಕ ಚಿನ್ನದ ಒಡವೆಗಳನ್ನು ದೋಚಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಜೊತೆಗೆ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿಟಿವಿ ಹಾರ್ಡ್ ಡಿಸ್ಕ್ ಗಳನ್ನು ಸಹ ಕಳುವು ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು ಚಿನ್ನದ ಅಂಗಡಿ ಮಾಲೀಕ ಶೇಷರಾವ್ ತಿಳಿಸಿದ್ದಾರೆ.
ಸುದ್ದಿ ತಿಳಿದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಹೆಚ್ಚವರಿ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಗಂಗಾಧರ್ ಸ್ವಾಮಿ,ಡಿವೈಎಸ್ಪಿ ಕೃಷ್ಣಪ್ಪ, ಸಿಪಿಐ ಶ್ರೀಧರ್, ಪಿಎಸ್‌ಐ ರವಿಕುಮಾರ್ ಭೇಟೆ ನೀಡಿ ಪರಿಶೀಲನೆ ನಡೆಸಿದ್ದಾರೆಕಿರುಗಾವಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.
- ಪಾಕ್ ಪ್ರವಾಹದಲ್ಲಿ 220 ಜನ ಬಲಿ
- ಇಂಡೋನೇಷ್ಯಾದ ಸುಲಾವೆಸಿ ದ್ವೀಪದಲ್ಲಿ 5.8 ತೀವ್ರತೆಯ ಭೂಕಂಪ
- ಪೀಣ್ಯ ಫ್ಲೈ ಓವರ್ ಮೇಲೆ ಅಪಘಾತ, ಗ್ಯಾಸ್ ಸಿಲಿಂಡರ್ ಡೆಲಿವರಿ ಬಾಯ್ ಸಾವು
- ಧರ್ಮಸ್ಥಳದ ಅಪಪ್ರಚಾರ ಪಿತೂರಿ ಮಾಡಿದವರ ವಿರುದ್ಧ ತನಿಖೆಗೆ ಬಿವೈವಿ ಆಗ್ರಹ
- ನಗರ್ತಪೇಟೆ ಅಗ್ನಿ ಅವಘಡ, ಇಬ್ಬರ ಬಂಧನ