ಬೆಂಗಳೂರು, ಆ.17- ಕೊಲೆ ಆರೋಪದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಅವರ ಸಾಮಾಜಿಕ ಜಾಲತಾಣವನ್ನು ಪತ್ನಿ ವಿಜಯಲಕ್ಷ್ಮಿ ನಿರ್ವಹಣೆ ಮಾಡಲಿದ್ದಾರೆ.ಎಕ್ಸ್ ಮತ್ತು ಇನ್ಸ್ಟಾಗ್ರಾಮ್ ಜಾಲತಾಣದ ದರ್ಶನ್ ತೂಗುದೀಪ್ ಅವರ ಮೂಲ ಖಾತೆಯನ್ನು ಇನ್ನು ಮುಂದೆ ತಾವು ನಿರ್ವಹಣೆ ಮಾಡುವುದಾಗಿ, ವಿಜಯಲಕ್ಷ್ಮಿ ಪ್ರಕಟಿಸಿದ್ದಾರೆ.
ನಿಮ ಚಾಲೆಂಜಿಂಗ್‌ಸ್ಟಾರ್ ದರ್ಶನ್ ಅವರು, ಪ್ರತಿಯೊಬ್ಬ ಅಭಿಮಾನಿಯನ್ನು ತಮ್ಮ ಹೃದಯದಲ್ಲಿಟ್ಟು ಕೊಂಡಿದ್ದಾರೆ. ಅವರು ವಾಪಾಸ್ ಬಂದು ನಿಮೊಂದಿಗೆ ನೇರವಾಗಿ ಸಂಪರ್ಕಗೊಳ್ಳುವವರೆಗೂ ಅವರ ಸಾಮಾಜಿಕ ಜಾಲತಾಣವನ್ನು ನಾನು ನಿರ್ವಹಣೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ವಿದ್ಯಮಾನಗಳ ಮಾಹಿತಿ ಹಾಗೂ ಸಿನಿಮಾದ ಪ್ರಚಾರಕ್ಕಾಗಿ ದರ್ಶನ್ ಅವರ ಪರವಾಗಿ ನಾನು ಜಾಲತಾಣದಲ್ಲಿ ಸಕ್ರಿಯಳಾಗಿರುತ್ತೇನೆ. ನಿಮ ಪ್ರೀತಿ, ಪ್ರಾರ್ಥನೆ ಮತ್ತು ತಾಳೆ ಮುಂದುವರೆಯಲಿ. ಅದೇ ನಮ ಕುಟುಂಬಕ್ಕೆ ಅಪಾರ ಶಕ್ತಿ ಎಂದು ಬರೆದುಕೊಂಡಿದ್ದಾರೆ.ಒಗ್ಗಟ್ಟು, ಸಕಾರಾತಕ ಭಾವನೆಯನ್ನು ಹಾಗೆಯೇ ಉಳಿಸಿಕೊಳ್ಳಿ. ಅದೇ ಪ್ರೀತಿ ಮತ್ತು ಶಕ್ತಿಯೊಂದಿಗೆ ದರ್ಶನ್ ಶೀಘ್ರವೇ ಮರಳಿ ಬರಲಿದ್ದಾರೆ ಎಂದು ವಿಜಯಲಕ್ಷ್ಮಿ ಇಂಗ್ಲಿಷ್‌ನಲ್ಲಿ ದರ್ಶನ್ ಖಾತೆಯನ್ನು ಬಳಸಿಕೊಂಡು ಪೋಸ್ಟ್ ಮಾಡಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ಅವರಿಗೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿತ್ತು. ಆ. 14ರಂದು ದರ್ಶನ್ ಮತ್ತು ಸಹಚರರು ಮತ್ತೆ ಬಂಧನಕ್ಕೊಳಗಾಗ ಬೇಕಾಯಿತು.
ಈ ಮೊದಲು ದರ್ಶನ್ ಜೈಲಿಗೆ ಹೋಗಿದ್ದಾಗ ಅವರ ಖಾತೆಯಲ್ಲಿ ಅಧಿಕೃತವಾದ ಮಾಹಿತಿಯಿಲ್ಲದೆ ವದಂತಿಗಳ ಆರ್ಭಟವೇ ಜಾಸ್ತಿಯಾಗಿತ್ತು. ಈ ಕಾರಣಕ್ಕೆ ಈ ಬಾರಿ ದರ್ಶನ್ ಅವರು ಜೈಲಿಗೆ ಹೋಗುವ ಮುನ್ನ ತಮ ಪತ್ನಿಗೆ ಸಾಮಾಜಿಕ ಜಾಲತಾಣ ನಿರ್ವಹಿಸಲು ನಿಯಮಾನುಸಾರ ಪೂರ್ವಾನುಮತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.ಇನ್ನು ಮುಂದೆ ದರ್ಶನ್ ವಿರುದ್ಧ ಇಲ್ಲ-ಸಲ್ಲದ ವದಂತಿಗಳು ಕೇಳಿ ಬಂದರೆ ಅದಕ್ಕೆ ವಿಜಯಲಕ್ಷ್ಮಿ ಸಾಮಾಜಿಕ ಜಾಲತಾಣದ ಮೂಲಕವೇ ಪ್ರತಿಕ್ರಿಯಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.