ಖೈರಾಗಢ,ಆ.17- ಮ್ಯೂಸಿಕ್ ಸಿಸ್ಟಮ್ ಸ್ಪೀಕರ್‌ನಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಅಳವಡಿಸಿ ಅದನ್ನು ತಾನು ಪ್ರೀತಿಸುತ್ತಿದ್ದ ಮಹಿಳೆಯ ಪತಿಗೆ ಉಡುಗೊರೆಯಾಗಿ ಕಳುಹಿಸಿದ್ದ ಛತ್ತೀಸ್‌ಗಢದ 20 ವರ್ಷದ ಎಲೆಕ್ಟ್ರಿಷಿಯನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಆನ್‌ಲೈನ್ ವ್ಯವಸ್ಥೆಗಳನ್ನು ಬಳಸಿಕೊಂಡು ಸ್ಪೋಟಕವನ್ನುಜೋಡಿಸಿ, ಪ್ಲಗ್ ಇನ್ ಮಾಡಿದಾಗ ಅದು ಸ್ಫೋಟಿಸುವಂತೆ ವಿನ್ಯಾಸಗೊಳಿಸಿದ್ದ.
ಇದಲ್ಲದೆ ಪೊಲೀಸರಿಗೆ ಸಿಕ್ಕಿಬೀಳದೆ ಇರಲು ಬಾಂಬ್ ಬಳಸಿ ಹೇಗೆ ಕೊಲ್ಲುವುದು ಎಂದು ಸಾಮಾಜಿಕ ತಾಣದಲ್ಲಿ ನೋಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಖೈರಾಗಢ-ಚುಯಿಖಾದನ್-ಗಂಡೈ ಜಿಲ್ಲೆಯ ಪೊಲೀಸರು ಯೋಜಿತ ಕೊಲೆಯನ್ನು ವಿಫಲಗೊಳಿಸಿದ್ದಲ್ಲದೆ, ಆರೋಪಿಗಳಿಗೆ ಜೆಲಾಟಿನ್ ಸ್ಟಿಕ್‌ಗಳನ್ನು ಪೂರೈಸುವ ಸ್ಫೋಟಕ ಕಳ್ಳಸಾಗಣೆ ದಂಧೆಯನ್ನು ಸಹ ಬಯಲು ಮಾಡಿದ್ದಾರೆ.
ಕಳೆದ ಏಪ್ರಿಲ್ 2023 ರಲ್ಲಿ ಇದೇ ರೀತಿಯ ಪ್ರಕರಣವೊಂದರಲ್ಲಿ, ನೆರೆಯ ಕಬೀರ್ಧಾಮ್ ಜಿಲ್ಲೆಯಲ್ಲಿ, ತನ್ನ ಪತ್ನಿಯ ಮಾಜಿ ಪ್ರೇಮಿಯಿಂದ ಮದುವೆ ಉಡುಗೊರೆಯಾಗಿ ಸ್ವೀಕರಿಸಲಾದ ಹೋಮ್ ಥಿಯೇಟರ್ ಮ್ಯೂಸಿಕ್ ಸಿಸ್ಟಮ್ ಸ್ಫೋಟಗೊಂಡು ನವವಿವಾಹಿತ ಪುರುಷ ಮತ್ತು ಅವನ ಅಣ್ಣ ಸಾವನ್ನಪ್ಪಿದರು.
ಇತ್ತೀಚಿನ ಪ್ರಕರಣದಲ್ಲಿ, ಪ್ರಮುಖ ಆರೋಪಿ ವಿನಯ್ ವರ್ಮಾ ಮತ್ತು ಇತರ ಆರು ಜನರನ್ನು ಬಂಧಿಸಲಾಗಿದೆ ಎಂದು ಖೈರಾಗಢ-ಚುಯಿಖಾದನ್-ಗಂಡೈ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಲಕ್ಷ್ಯ ಶರ್ಮಾ ತಿಳಿಸಿದ್ದಾರೆ.ಇತರೆ ಬಂಧಿತ ಆರೋಪಿಗಳನ್ನು ಪರಮೇಶ್ವರ್ ವರ್ಮಾ (25), ಗೋಪಾಲ್ ವರ್ಮಾ (22), ಘಾಸಿರಾಮ್ ವರ್ಮಾ (46), ದಿಲೀಪ್ ಧಿಮಾರ್ (38), ಗೋಪಾಲ್ ಖೇಲ್ವಾರ್ ಮತ್ತು ಖಿಲೇಶ್ ವರ್ಮಾ (19) ಎಂದು ಗುರುತಿಸಲಾಗಿದೆ.
ಮೂರು-ನಾಲ್ಕು ದಿನಗಳ ಹಿಂದೆ ಗಂಡೈ ಪೊಲೀಸ್ ಠಾಣೆ ವ್ಯಾಪ್ತಿಯ ಮಾನ್ಪುರ್ ಗ್ರಾಮದ ಅಂಗಡಿಯೊಂದಕ್ಕೆ ನಕಲಿ ಇಂಡಿಯಾ ಪೋಸ್ಟ್ ಲೋಗೋ ಹೊಂದಿರುವ ಅನುಮಾನಾಸ್ಪದ ಪಾರ್ಸೆಲ್ ತಲುಪಿದಾಗ ಈ ಪಿತೂರಿ ಬೆಳಕಿಗೆ ಬಂದಿತು.
ಪಾರ್ಸೆಲ್ ಅನ್ನು ಅಫ್ಸರ್ ಖಾನ್ ಅವರಿಗೆ ಕಳುಹಿಸಲಾಗಿತ್ತು.ಇದರ ಬಗ್ಗೆಅನುಮಾನಾಸ್ಪವಾಗಿ ಕಂಡುಕೊಂಡುಬಂದ ನಂತರ ಖಾನ್ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು ಎಂದು ಅಧಿಕಾರಿ ಹೇಳಿದರು.ಅನುಮಾನದ ಮೇರೆಗೆ ಬಾಂಬ್ ನಿಷ್ಕ್ರಿಯ ತಂಡವು ಪ್ಯಾಕೇಜ್ ಅನ್ನು ಪರಿಶೀಲಿಸಿದಾಗ ಹೊಸ ಸ್ಪೀಕರ್ ಒಳಗೆ 2 ಕೆಜಿ ತೂಕದ ಐಇಡಿ ಅಡಗಿಸಿಟ್ಟಿರುವುದು ಕಂಡುಬಂದಿದೆ ಎಂದು ಎಸ್ಪಿ ಹೇಳಿದರು.
ತಾಂತ್ರಿಕ ವಿಶ್ಲೇಷಣೆಯು ಐಇಡಿಯನ್ನು ವಿದ್ಯುತ್ ಮೂಲಕ್ಕೆ ಪ್ಲಗ್ ಮಾಡಿದಾಗ ಸ್ಫೋಟಗೊಳ್ಳಲು ವಿನ್ಯಾಸಗೊಳಿಸಲಾಗಿದೆ ಎಂದು ತೋರಿಸಿದೆ.ಆರೋಪಿಯು ತನ್ನ ಕಾಲೇಜು ದಿನಗಳಿಂದಲೂ ಖಾನ್ ಅವರ ಪತ್ನಿಯೊಂದಿಗೆ ಒನ್‌ವೇ ಲವ್‌ನಲ್ಲದ್ದ . ಕೆಲವು ತಿಂಗಳ ಹಿಂದೆ ಅವರು ಖಾನ್ ಅವರನ್ನು ಮದುವೆಯಾದ ನಂತರ, ವರ್ಮಾ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದರು ಎಂದು ಅವರು ಹೇಳಿದರು.
ಹೆಚ್ಚಿನ ತನಿಖೆಯಲ್ಲಿ ಈ ಸಾಧನದಲ್ಲಿ ಬಳಸಲಾದ ಸ್ಫೋಟಕಗಳನ್ನು ಛತ್ತೀಸ್‌ಗಢದ ದುರ್ಗ್ ಜಿಲ್ಲೆಯ ಕಲ್ಲಿನ ಕ್ವಾರಿಯಿಂದ ತರಲಾಗಿದೆ ಎಂದು ತಿಳಿದುಬಂದಿದೆ.ದುರ್ಗ ನಿವಾಸಿ ಪರಮೇಶ್ವರ್ ದುರ್ಗ್ ನಿವಾಸಿಗಳಾದ ಗೋಪಾಲ್ ಮತ್ತು ದಿಲೀಪ್ ಅವರಿಂದ ಜೆಲಾಟಿನ್ ರಾಡ್‌ಗಳನ್ನು ಖರೀದಿಸಲು 6,000 ರೂ.ಗಳನ್ನು ಪಾವತಿಸಿದ್ದಾರೆ ಎಂದು ಆರೋಪಿಸಲಾಗಿದೆ. ಘಾಸಿರಾಮ್ ಸ್ಫೋಟಕಗಳನ್ನು ತಲುಪಿಸಿದರೆ, ಖಿಲೇಶ್ ಪಾರ್ಸೆಲ್‌ನಲ್ಲಿ ಬಳಸಲಾದ ನಕಲಿ ಇಂಡಿಯಾ ಪೋಸ್ಟ್ ಲೋಗೋವನ್ನು ಸಿದ್ಧಪಡಿಸಿದ ಆರೋಪ ಹೊಂದಿದ್ದಾರೆ ಎಂದು ಅಧಿಕಾರಿ ಹೇಳಿದರು.