ಪಲು, ಆ.17-ಇಂಡೋನೇಷ್ಯಾದ ಪೂರ್ವ ಭಾಗದಲ್ಲಿ ಇಂದು ಬೆಳಿಗ್ಗೆ 5.8 ತೀವ್ರತೆಯ ಭೂಕಂಪ ಸಂಭವಿಸಿದೆ.ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ಮಧ್ಯ ಸುಲಾವೆಸಿ ಪ್ರಾಂತ್ಯದ ಪೊಸೊ ಜಿಲ್ಲೆಯಿಂದ 15 ಕಿಲೋಮೀಟರ್ ಉತ್ತರಕ್ಕೆ ಭೂಕಂಪ ಸಂಭವಿಸಿದೆ.
ನಂತವೂ ಕನಿಷ್ಠ 15 ಸರಣಿ ಕಂಪನಗಳು ಸಂಭವಿಸಿವೆ.ಇತ್ತ್ತೀಚಿನ ಮಾಹಿತಿ ಪ್ರಕಾರ ಹಲವು ಕಟ್ಟಡಗಳು ಕುಸಿದಿದ್ದು ಕೆಲವರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.ಇಂಡೋನೇಷ್ಯಾದ ರಾಷ್ಟ್ರೀಯ ವಿಪತ್ತು ತಗ್ಗಿಸುವಿಕೆ ಸಂಸ್ಥೆಯ ಪ್ರಕಾರ ಗಾಯಾಳುಗಳಲ್ಲಿ ಹೆಚ್ಚಿನವರನ್ನು ಪ್ರಾದೇಶಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅವರಲ್ಲಿ ಹೆಚ್ಚಿನವರು ಬೆಳಿಗ್ಗೆ ಚರ್ಚ್‌ಗೆ ಬಂದಿದ್ದವರು ಎಂದು ಹೇಳಿದೆ.ಚರ್ಚ್ ಸೇರಿದಂತೆ ಹಲವಡೆ ಕಟ್ಟಡಗಳ ಹಾನಿಯನ್ನು ಸಾಮಜಿಕ ಜಾಲತಾಣದಲ್ಲಿ ಹರಿದಾಡಿದೆ.2 ಕೋಟಿಗೂ ಹೆಚ್ಚು ಹೆಚ್ಚು ಜನರನ್ನು ಹೊಂದಿರುವ ವಿಶಾಲ ದ್ವೀಪಸಮೂಹ ಇಂಡೋನೇಷ್ಯಾ, ಪೆಸಿಫಿಕ್ ಬೇಸಿನ್‌ನಲ್ಲಿರುವ ಜ್ವಾಲಾಮುಖಿಗಳು ಮತ್ತು ದೋಷ ರೇಖೆಗಳ ಕಮಾನಿನ ರಿಂಗ್ ಆಫ್ ಫೈರ್‌ನಲ್ಲಿ ನೆಲೆಗೊಂಡಿರುವುದರಿಂದ ಆಗಾಗ್ಗೆ ಭೂಕಂಪಗಳು, ಜ್ವಾಲಾಮುಖಿ ಸ್ಫೋಟಗಳು ಮತ್ತು ಸುನಾಮಿಗಳಿಗೆ ತುತ್ತಾಗುತ್ತಿದೆ.