Monday, August 18, 2025
Homeಅಂತಾರಾಷ್ಟ್ರೀಯ | Internationalಭಾರತ-ಪಾಕ್‌ ನಡುವೆ ಮತ್ತೆ ಯುದ್ಧ ಸಾಧ್ಯತೆ : ಮಾರ್ಕೊ ರುಬಿಯೋ ಭವಿಷ್ಯ

ಭಾರತ-ಪಾಕ್‌ ನಡುವೆ ಮತ್ತೆ ಯುದ್ಧ ಸಾಧ್ಯತೆ : ಮಾರ್ಕೊ ರುಬಿಯೋ ಭವಿಷ್ಯ

US was 'directly involved' in India-Pak ceasefire, claims Rubio;

ವಾಷಿಂಗ್ಟನ್‌, ಅ.18 ಭಾರತ ಮತ್ತು ಪಾಕಿಸ್ತಾನ ನಡುವೆ ಮತ್ತೆ ಯುದ್ಧ ನಡೆಯುವ ಸಾಧ್ಯತೆಗಳಿವೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೋ ಭವಿಷ್ಯ ನುಡಿದಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷ ಏರ್ಪಡುವ ಸುಳಿವು ನೀಡಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ಒಪ್ಪಂದಗಳು ದುರ್ಬಲವಾಗಿವೆ. ಅವುಗಳನ್ನ ನಿರ್ವಹಣೆ ಮಾಡುವುದು ಸವಾಲಿನ ಕೆಲಸವಾಗಿದೆ. ಆದ್ದರಿಂದ ಕದನ ವಿರಾಮ ಶೀಘ್ರದಲ್ಲೇ ಸ್ಥಗಿತಗೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.

ಪ್ರತಿದಿನ ನಾವು ಭಾರತ-ಪಾಕಿಸ್ತಾನದ ನಡುವೆ ಏನಾಗುತ್ತಿದೆ? ಕಾಂಬೋಡಿಯಾ ಥೈಲ್ಯಾಂಡ್‌ ನಡುವೆ ಏನಾಗುತ್ತಿದೆ? ಅನ್ನೋದರ ಮೇಲೆ ಕಣ್ಣಿಟ್ಟಿದ್ದೇವೆ. ಈ ನಿಟ್ಟಿನಲ್ಲಿ ನೋಡಿದಾಗ ಭಾರತ-ಪಾಕ್‌ ಕದನ ವಿರಾಮ ಸ್ಥಗಿತವಾಗಬಹುದು ಅನ್ನಿಸಿರುವುದಾಗಿ ತಿಳಿಸಿದರು.

ಇದೇ ವೇಳೆ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ನಿಲ್ಲಿಸಿದ್ದು ಟ್ರಂಪ್‌ ಅಂತ ರೂಬಿಯೋ ಕೂಡ ಪುನರುಚ್ಚರಿಸಿದ್ದಾರೆ. ನಾವು ತುಂಬಾ ಅದೃಷ್ಟವಂತರು. ಶಾಂತಿ ಮತ್ತು ಶಾಂತಿ ಸಾಧನೆಯನ್ನೇ ತಮ್ಮ ಆಡಳಿತದ ಆದ್ಯತೆಯನ್ನಾಗಿ ಮಾಡಿಕೊಂಡ ಅಧ್ಯಕ್ಷರನ್ನ ಹೊಂದಿರುವುದಕ್ಕೆ ಕೃತಜ್ಞರಾಗಿರಬೇಕು ಎಂದು ಟ್ರಂಪ್‌ ಗುಣಗಾನ ಮಾಡಿದ್ದಾರೆ. ಒಂದು ದಿನದ ಹಿಂದೆಯಷ್ಟೆ ಟ್ರಂಪ್‌ ಮಾಧ್ಯಮದಲ್ಲಿ ಮಾತನಾಡುವಾಗ ಭಾರತ ಮತ್ತು ಪಾಕ್‌ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಮತ್ತೆ ಹೇಳಿಕೊಂಡಿದ್ದರು.

RELATED ARTICLES

Latest News