Monday, August 18, 2025
Homeರಾಷ್ಟ್ರೀಯ | Nationalದೆಹಲಿಯ ಮೂರು ಶಾಲೆಗಳಿಗೆ ಬಾಂಬ್‌ ಬೆದರಿಕೆ

ದೆಹಲಿಯ ಮೂರು ಶಾಲೆಗಳಿಗೆ ಬಾಂಬ್‌ ಬೆದರಿಕೆ

Bomb threat to three schools in Delhi

ನವದೆಹಲಿ, ಆ.18- ದೆಹಲಿಯ ದ್ವಾರಕಾ ಪ್ರದೇಶದ ಮೂರು ಶಾಲೆಗಳಿಗೆ ಇಂದು ಬೆಳಿಗ್ಗೆ ಇ-ಮೇಲ್‌ ಮೂಲಕ ಬಾಂಬ್‌ ಬೆದರಿಕೆ ಬಂದಿದೆ.ಇದು ವಿದ್ಯಾರ್ಥಿಗಳಲ್ಲಿ ಭೀತಿ ಮೂಡಿಸಿದ್ದು, ಕೂಡಲೇ ಮಕ್ಕಳನ್ನು ಹೊರಗೆ ಕಳುಹಿಸಿದ್ದಾರೆ.

ದೆಹಲಿ ಪಬ್ಲಿಕ್‌ ಸ್ಕೂಲ್‌ (ಡಿಪಿಎಸ್‌‍), ಮಾಡ್ರನ್‌ ಕಾನ್ವೆಂಟ್‌ ಸ್ಕೂಲ್‌ ಮತ್ತು ಶ್ರೀ ರಾಮ್‌ ವರ್ಲ್‌್ಡ ಸ್ಕೂಲ್‌ ಈ ಬೆದರಿಕೆ ಕರೆ ಬಂದಿದೆ ಎಂದು ಹಿರಿಯ ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೆಹಲಿ ಪೊಲೀಸರು,ಬಾಂಬ್‌ ನಿಷ್ಕ್ರಿಯ ದಳ ಮತ್ತು ಶ್ವಾನ ದಳದ ತಂಡಗಳು ಸ್ಥಳಕ್ಕೆ ಧಾವಿಸಿ ಶಾಲೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

ದುಷ್ಕರ್ಮಿಗಳು ಬೆದರಿಕೆ ಸಂದೇಶ ಕಳಿಸಿರುವ ಐಪಿ ವಿಳಾಸವನ್ನು ಪತ್ತೆಹಚ್ಚಲು ಸೈಬರ್‌ ತಂಡಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES

Latest News