ಬೆಂಗಳೂರು, ಆ.18-ಉತ್ತರ ಪ್ರದೇಶದ ಮಾಜಿ ಶಾಸಕರೊಬ್ಬರ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ರಿಜಿಸ್ಟರ್ ಮದುವೆಯಾಗುವುದಾಗಿ ನಂಬಿಸಿ ನನ್ನ ಮೇಲೆ ಅತ್ಯಾಚಾರ ವೆಸಗಿದ್ದಾರೆೆಂದು ಒರಿಸ್ಸಾ ಮೂಲದ ಸಂತ್ರಸ್ತೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.ರಾಜಕೀಯಕ್ಕೆ ಬರಬೇಕೆಂದು ಈ ಮಹಿಳೆ ಮಾಜಿ ಶಾಸಕರೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದು ಇವರು ಲಿವಿಂಗ್-ಟು-ಗೆದರ್‌ನಲ್ಲಿದ್ದರು. ಮಾಜಿ ಶಾಸಕರಿಗೆ ಈಗಾಗಲೇ ಮದುವೆಯಾಗಿ ಮಕ್ಕಳಿರುವುದು ಈ ಮಹಿಳೆಗೆ ಗೊತ್ತಿಲ್ಲ.
ನಂತರದ ದಿನಗಳಲ್ಲಿ ಈ ಮಹಿಳೆಯೊಂದಿಗೆ ಆತೀಯತೆ ಹೊಂದಿದ್ದ ಮಾಜಿ ಶಾಸಕ, ನಿನ್ನನ್ನು ರಿಜಿಸ್ಟರ್ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ವೆಸಗಿದ್ದಾನೆಂಬ ಆರೋಪ ಕೇಳಿಬಂದಿದೆ.ಇವರಿಬ್ಬರು ಹಲವು ಕಡೆಗಳಲ್ಲಿ ಸುತ್ತಾಡಿದ್ದಾರೆ. ತದ ನಂತರದಲ್ಲಿ ಮಹಿಳೆಯಿಂದ ಮಾಜಿ ಶಾಸಕ ಅಂತರ ಕಾಯ್ದುಕೊಂಡಿದ್ದಾರೆ.
ಈ ನಡುವೆ ಉತ್ತರ ಪ್ರದೇಶದಿಂದ ಬೆಂಗಳೂರಿಗೆ ಮಾಜಿ ಶಾಸಕ ಹೋಗುತ್ತಿರುವ ವಿಷಯ ತಿಳಿದು ಅವರು ಬರುವ ಮೊದಲೇ ಈ ಸಂತ್ರಸ್ತ್ತೆ ಮಹಿಳೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಕಾಯುತ್ತಿದ್ದಳು.
ಆ ವೇಳೆ ವಿಮಾನದಲ್ಲಿ ಬಂದಿಳಿದ ಮಾಜಿ ಶಾಸಕರೊಂದಿಗೆ ಮಾತನಾಡಿ, ನಿಲ್ದಾಣದ ಸಮೀಪವಿರುವ ಪ್ರತಿಷ್ಠಿತ ಹೋಟೇಲ್‌ನಲ್ಲಿ ರೂಂ ಬುಕ್ ಮಾಡಿ ತಂಗಿದ್ದು, ಮೈಸೂರು, ಚಿತ್ರದುರ್ಗ ಸೇರಿದಂತೆ ವಿವಿಧ ಕಡೆಗಳಲ್ಲಿ ಇವರಿಬ್ಬರು ಸುತ್ತಾಡಿದ್ದಾರೆ.
ನಾನು ಜೊತೆಯಲ್ಲಿರುವಾಗಲೇ ಮೊದಲ ಪತ್ನಿ ಜೊತೆ ಮಾಜಿ ಶಾಸಕ ಮಾತನಾಡುತ್ತಿರುವುದನ್ನು ಈ ಮಹಿಳೆ ಗಮನಿಸಿ ಜಗಳವಾಡಿದ್ದು ತನಗೆ ಮೋಸಮಾಡುತ್ತಿದ್ದಾರೆಂದು ಅರಿತು ಮಾಜಿ ಶಾಸಕರ ವಿರುದ್ಧ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.