Monday, August 18, 2025
Homeಬೆಂಗಳೂರುಸಸ್ಯಕಾಶಿ ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನಕ್ಕೆ ತೆರೆ

ಸಸ್ಯಕಾಶಿ ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನಕ್ಕೆ ತೆರೆ

Lalbagh Flower and Flower Exhibition

ಬೆಂಗಳೂರು,ಆ.18– ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಡೆದ ಫಲಪುಷ್ಪ ಪ್ರದರ್ಶನಕ್ಕೆ ಇಂದು ತೆರೆ ಬಿದ್ದಿದೆ. ವೀರವನಿತೆ ಕಿತ್ತೂರು ರಾಣಿ ಚೆನ್ನಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಿಷಯಾಧಾರಿತ ಫಲಪುಷ್ಪ ಪ್ರದರ್ಶನದ ಮೂಲಕ ಈ ಬಾರಿ ಜನರನ್ನು ಆಕರ್ಷಿಸಿದ್ದ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಒಟ್ಟಾರೆ 67.310 ಮಂದಿ ಕಣ್ತುಂಬಿಕೊಂಡಿದ್ದು ಇಂದು ತೆರೆಬಿದ್ದಿದೆ.

ಭಾನುವಾರ ರಜೆ ಹಿನ್ನೆಲೆಯಲ್ಲಿ ತುಂತುರು ಮಳೆಯ ನಡುವೆಯೂ ಸಹಸ್ರಾರು ಜನರು ಸಸ್ಯಕಾಶಿಗೆ ಭೇಟಿ ನೀಡಿ, ಹೂವಿನಲ್ಲಿ ಮೂಡಿದ್ದ ಕಲಾಕೃತಿಗಳನ್ನು ವೀಕ್ಷಿಸಿ ಸಂಭ್ರಮಿಸಿದರು. ನಿನ್ನೆ ಒಂದೇ ದಿನ 37.39 ಲಕ್ಷ ಆದಾಯ ಸಂಗ್ರಹವಾಗಿದೆ. ಮಳೆಯ ನಡುವೆಯೂ 52,150 ಮಂದಿ ವಯಸ್ಕರು, 7.960 ಮಕ್ಕಳು ಭೇಟಿ ನೀಡಿದ್ದಲ್ಲದೆ ಶಾಲಾ ಸಮವಸ್ತ್ರದಲ್ಲಿ ಬಂದಿದ್ದ 7,200 ಮಕ್ಕಳಿಗೆ ಉಚಿತ ಪ್ರದರ್ಶನ ಕಲ್ಪಿಸಲಾಗಿತ್ತು.

ಇಂದು ಫಲಪುಷ್ಪ ಪ್ರದರ್ಶನಕ್ಕೆ ಅಂತಿಮ ದಿನವಾಗಿದ್ದು, ಬೆಳಿಗ್ಗೆ 9 ರಿಂದ ಸಂಜೆ 6.30ರವರೆಗೆ ಪ್ರದರ್ಶನವಿರಲಿದೆ. ವಾರದ ದಿನವಾದ್ದರಿಂದ ವಯಸ್ಕರಿಗೆ 80 ರೂ., ಮಕ್ಕಳಿಗೆ 30 ರೂ. ಶುಲ್ಕವಿರಲಿದೆ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

RELATED ARTICLES

Latest News