Tuesday, August 19, 2025
Homeರಾಜ್ಯರಾಜ್ಯದ 8 ಸಕ್ಕರೆ ಕಾರ್ಖಾನೆ ನಿಯಮಬದ್ಧವಾಗಿಯೇ ಭೋಗ್ಯಕ್ಕೆ ನೀಡಲಾಗಿದೆ : ಸಚಿವ ಶಿವಾನಂದಪಾಟೀಲ್‌

ರಾಜ್ಯದ 8 ಸಕ್ಕರೆ ಕಾರ್ಖಾನೆ ನಿಯಮಬದ್ಧವಾಗಿಯೇ ಭೋಗ್ಯಕ್ಕೆ ನೀಡಲಾಗಿದೆ : ಸಚಿವ ಶಿವಾನಂದಪಾಟೀಲ್‌

8 sugar factories in the state have been given on lease as per the rules

ಬೆಂಗಳೂರು,ಆ.19– ರಾಜ್ಯದ 8 ಸಕ್ಕರೆ ಕಾರ್ಖಾನೆಗಳನ್ನು 30 ವರ್ಷಗಳ ಅವಧಿಗೆ ನಿಯಮಬದ್ಧವಾಗಿಯೇ ಭೋಗ್ಯ (ಲೀಸ್‌‍)ಕ್ಕೆ ನೀಡಲಾಗಿದೆ ಎಂದು ಸಕ್ಕರೆ ಸಚಿವ ಶಿವಾನಂದಪಾಟೀಲ್‌ ಸ್ಪಷ್ಟಪಡಿಸಿದರು. ಸದಸ್ಯ ಎನ್‌.ರವಿಕುಮಾರ್‌ರವರ ಪ್ರಶ್ನೆಗೆ ಉತ್ತರಿಸಿದ ಅವರು, 8 ಸಕ್ಕರೆ ಕಾರ್ಖಾನೆಗಳನ್ನು 371 ಕೋಟಿ ರೂ. ಲೀಸ್‌‍ಗೆ 30 ವರ್ಷಗಳ ಅವಧಿಗೆ ನೀಡಲಾಗಿದೆ. ಅವಧಿ ಮುಗಿದ ನಂತರ ಕಾರ್ಖಾನೆಗಳನ್ನು ಸರ್ಕಾರಕ್ಕೆ ಹಸ್ತಾಂತರ ಮಾಡಲಿದ್ದಾರೆ ಎಂದು ಹೇಳಿದರು.

ಹಿಂದಿನ ಸರ್ಕಾರವು ಈ ಕಾರ್ಖಾನೆಗಳನ್ನು 40 ವರ್ಷ ಲೀಸ್‌‍ ಹಾಗೂ 330 ಕೋಟಿ ರೂ.ಗೆ ನೀಡಲಾಗಿತ್ತು. ನಮ ಸರ್ಕಾರ ಬಂದ ನಂತರ ಕೆಲವು ನಿಯಮಗಳನ್ನು ತಿದ್ದುಪಡಿ ಮಾಡಿ ನಿಯಮಬದ್ಧವಾಗಿಯೇ ನೀಡಿದ್ದೇವೆ ಎಂದು ಸಮರ್ಥನೆ ಮಾಡಿಕೊಂಡರು.

ಸಕ್ಕರೆ ಕಾರ್ಖಾನೆಗಳನ್ನು ಟೆಂಡರ್‌ ಮೂಲಕ ಲೀಸ್‌‍ಗೆ ನೀಡಲಾಗುತ್ತದೆ. ಯಾರು ಹೆಚ್ಚು ಬಿಡ್‌ ಮಾಡುತ್ತಾರೋ ಅವರಿಗೆ ಲೀಸ್‌‍ ಸಿಗುತ್ತದೆ. ಬಹುತೇಕ ಸಕ್ಕರೆ ಕಾರ್ಖಾನೆಗಳು ನಷ್ಟದಲ್ಲಿದ್ದರೆ ಖಾಸಗಿ ಸಕ್ಕರೆ ಕಾರ್ಖಾನೆಗಳು ಲಾಭದ ಹಳಿಯಲ್ಲಿವೆ ಎಂದು ತಿಳಿಸಿದರು.

ಹಿಂದಿನ ಸರ್ಕಾರ ಮಾಡಿದ್ದ ತಪ್ಪನ್ನು ನಾವು ಸರಿಪಡಿಸಿದ್ದೇವೆ. 330 ಕೋಟಿ ರೂ.ಗೆ ಲೀಸ್‌‍ಹಾಗೂ 40 ವರ್ಷದ ಅವಧಿಗೆ ಕೊಟ್ಟಿದ್ದರು. ನಾವು ಇದನ್ನು ಮರು ಟೆಂಡರ್‌ ಕರೆದು 371 ಕೋಟಿ ರೂ. ಹಾಗೂ 40 ವರ್ಷದಿಂದ 30 ವರ್ಷಕ್ಕೆ ಇಳಿಕೆ ಮಾಡಿದ್ದೇವೆ. ಎಲ್ಲಿಯೂ ಕಾನೂನು ಉಲ್ಲಂಘನೆ ಮಾಡುವುದಿಲ್ಲ ಎಂದು ಪುನರುಚ್ಚರಿಸಿದರು.

ಸಕ್ಕರೆ ಕಾರ್ಖಾನೆಗಳು ಸಿಬ್ಬಂದಿ ವೇತನ, ವಿದ್ಯುತ್‌ ಬಾಕಿ, ಬಾಕಿ ವೇತನ ನೀಡಬೇಕು. ಈಗ ಕಾಲಕಾಲಕ್ಕೆ ಎಲ್ಲವೂ ಸರಿದಾರಿಗೆ ಬಂದಿವೆ. ಮಾಜಿ ಸಚಿವ ಮುರುಗೇಶ್‌ ನಿರಾಣಿ, ಕಾರ್ಖಾನೆಯು ನಷ್ಟದಲ್ಲಿತ್ತು. ಆಗ ನಿಮ ಸರ್ಕಾರವೇ ಅಧಿಕಾರದಲ್ಲಿತ್ತು. ಸರ್ಕಾರದಿಂದ ಸಾಲ ಪಡೆದವರು ತೀರಿಸುವ ಜವಾಬ್ದಾರಿಯನ್ನು ಅವರೇ ಹೊರಬೇಕೆಂದು ಪರೋಕ್ಷವಾಗಿ ಬಿಜೆಪಿ ಸರ್ಕಾರಕ್ಕೆ ತಿರುಗೇಟು ಕೊಟ್ಟರು.

RELATED ARTICLES

Latest News