Tuesday, August 19, 2025
Homeಜಿಲ್ಲಾ ಸುದ್ದಿಗಳು | District Newsಥಿನ್ನರ್‌ ಬಾಟಲಿ ಜಾರಿ ಬಿದ್ದು ಮಗು ಸಾವನ್ನಪ್ಪಿದ ಮರುದಿನವೇ ರಕ್ಷಿಸಲು ತಂದೆ ಕೂಡ ಸಾವು

ಥಿನ್ನರ್‌ ಬಾಟಲಿ ಜಾರಿ ಬಿದ್ದು ಮಗು ಸಾವನ್ನಪ್ಪಿದ ಮರುದಿನವೇ ರಕ್ಷಿಸಲು ತಂದೆ ಕೂಡ ಸಾವು

The day after a child died after falling from a thinner bottle, the father also died trying to save him.

ಧಾರವಾಡ,ಆ.19– ಥಿನ್ನರ್‌ ಬಾಟಲಿ ಜಾರಿ ಬಿದ್ದು ಮಗು ಸಾವನ್ನಪ್ಪಿದ ಮರುದಿನವೇ ರಕ್ಷಿಸಲು ಮುಂದಾಗಿ ಗಂಭೀರ ಗಾಯಗೊಂಡಿದ್ದ ತಂದೆಯೂ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಂದು ಮೃತಪಟ್ಟಿರುವ ಘಟನೆ ಧಾರವಾಡದ ಸಂತೋಷ್‌ ನಗರದಲ್ಲಿ ನಡೆದಿದೆ. ಚಂದ್ರಕಾಂತ್‌ ಮಾಶ್ಯಾಳ ಮೃತ ದುರ್ದೈವಿ.

ಕಳೆದ ಆ.15ರ ರಾತ್ರಿಚಳಿ ಕಾರಣ ಬೆಂಕಿ ಕಾಯಿಸಿಕೊಳುತ್ತಿದ್ದರು ಈ ವೇಳೆ ಅಲ್ಲೇ ಆಟವಾಡುತ್ತಿದ್ದ 4 ವರ್ಷದ ಅಗಸ್ತ್ಯ ಸಮೀಪದಲ್ಲೇ ಇಟ್ಟಿದ್ದ ಥಿನ್ನರ್‌ ಬಾಟಲಿಯನ್ನು ಕೆಡವಿದ್ದ. ಈ ವೇಳೆ ಥಿನ್ನರ್‌ಗೆ ಬೆಂಕಿ ತಗುಲಿದ್ದು, ಬೆಂಕಿಯ ಕೆನ್ನಾಲಿಗೆ ಬಾಲಕನ ದೇಹ ಸುಟ್ಟು ಹೋಗಿತ್ತು.

ಮಗನನ್ನು ಕಾಪಾಡಲು ಹೋಗಿದ್ದ ಚಂದ್ರಕಾಂತ್‌ಗೆ ಸಹ ಗಂಭೀರವಾಗಿ ಸುಟ್ಟ ಗಾಯಗಳಾಗಿದ್ದವು. ಕೂಡಲೆ ಮನೆಯವರು ತಂದೆ, ಮಗನನ್ನು ಕಿಮ್ಸೌಆಸ್ಪತ್ರೆಗೆ ದಾಖಲಿಸಿದ್ದರು. ಅಷ್ಟರಲ್ಲಾಗಲೇ ಬಾಲಕ ಅಗಸ್ತ್ಯ ಮೃತಪಟ್ಟಿದ್ದ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಂದ್ರಕಾಂತ್‌ ಅವರು ಇಂದು ಚಿಕಿತ್ಸೆಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದೀಗ ತಂದೆ, ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

RELATED ARTICLES

Latest News