ಬೆಂಗಳೂರು ಆ.19- ಕೆಎಸ್‌ಆರ್‌ಟಿ ಸಿ, ಬಿಎಂಟಿಸಿ ಸೇರಿದಂತೆ ಯಾವುದೇ ಸಾರಿಗೆ ಸಂಸ್ಥೆಗಳ ನೌಕರರು ಮುಷ್ಕರ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳುವ ಎಸ್ಮಾ ಕಾಯ್ದೆ ಮುಂದಿನ 20 ವರ್ಷಗಳ ಅವಧಿಗೆ ಜಾರಿಯಲ್ಲಿರುವಂತೆ ವಿಧೇಯಕವನ್ನು ವಿಧಾನಸಭೆಯಲ್ಲಿಂದು ಅಂಗೀಕರಿಸಲಾಯಿತು.
ಸಾರಿಗೆ ಸಚಿವ ರಾಮಲಿಂಗರೆಡ್ಡಿ, ಕರ್ನಾಟಕ ಅತ್ಯಾವಶ್ಯಕ ಸೇವೆಗಳ ನಿರ್ವಹಣಾ ತಿದ್ದುಪಡಿ ವಿಧೇಯಕ 2025 ಅನ್ನು ಪರ್ಯಾಲೋಚನೆಗೆ ಮಂಡಿಸಿದರು. ಕಾಯ್ದೆಯ ಬಗ್ಗೆ ವಿವರಣೆ ನೀಡಿದ ಸಚಿವರು ಈ ಹಿಂದೆ 2018ರಲ್ಲಿ ಎಸಾ ಕಾಯ್ದೆಯನ್ನು ನಾನೇ ಸಚಿವನಾಗಿ ಜಾರಿ ಮಾಡಿದ್ದೆ.
ಆದರೆ ಅದು ನಮ ಸರ್ಕಾರದಲ್ಲಿ ಉಪಯೋಗಕ್ಕೆ ಬರಲಿಲ್ಲ. 2021 ರಲ್ಲಿ 15 ದಿನ ಮುಷ್ಕರ ನಡೆದಾಗ ಬಳಕೆಯಾಗಿತ್ತು ಎಂದರು. 2025ರ 27ರಿಂದ ಪೂರ್ವನ್ವಯಗೊಳ್ಳುವಂತೆ ತಿದ್ದುಪಡಿ ವಿಧೇಯಕವನ್ನು ರೂಪಿಸಲಾಗಿದ್ದು, 10 ವರ್ಷಗಳ ಬದಲಾಗಿ ಮುಂದಿನ 20 ವರ್ಷಗಳಿಗೆ ಜಾರಿಯಲ್ಲಿರುವಂತೆ ತಿದ್ದುಪಡಿ ತರಲಾಗಿದೆ ಎಂದು ಹೇಳಿದರು.
ಬಿಜೆಪಿಯ ಸದಸ್ಯ ಸುರೇಶ್ ಕುಮಾರ್ ಎಸಾ ಜಾರಿ ಮಾಡಿ ಸಾರಿಗೆ ಸಂಸ್ಥೆಗಳ ನೌಕರರನ್ನು ಮುಷ್ಕರ ಮಾಡದಂತೆ ಹತ್ತಿಕ್ಕುವುದು ಒಂದು ಕಡೆಯಾದರೆ, ನೌಕರರು ಹಾಗೂ ಅಧಿಕಾರಿಗಳಿಗೆ ತಮ ದೂರು ದುಮ್ಮಾನಗಳನ್ನು ಹೇಳಿಕೊಳ್ಳಲು ಒಂದು ವೇದಿಕೆ ಕಲ್ಪಿಸಿ ಎಂದು ಆಗ್ರಹಿಸಿದ್ದರು.
ನಮ ಸರ್ಕಾರ ನಾಲ್ಕು ಬಾರಿ ಮುಖ್ಯಮಂತ್ರಿಯವರ ಜೊತೆ ಸಾರಿಗೆ ನಿಗಮಗಳ ವಿವಿಧ ಸಂಘಟನೆಗಳ ಜೊತೆ ಚರ್ಚೆ ನಡೆಸಿದೆ. 1996 ರಿಂದಲೂ ನಿಗಮಗಳ ಸಂಘಟನೆಗಳಿಗೆ ಚುನಾವಣೆ ನಡೆದಿಲ್ಲ, ಒಟ್ಟು 13 ಸಂಘಟನೆಗಳಿವೆ. ಚುನಾವಣೆ ನಡೆಸುವ ಅಗತ್ಯ ಇದೆ ಎಂದ ಸಚಿವ ರಾಮಲಿಂಗ ರೆಡ್ಡಿ ಹೇಳಿದರು. ವಿಧೇಯಕದ ಹೆಚ್ಚಿನ ಚರ್ಚೆಇಲ್ಲದೆ ಸರ್ವಾನುಮತದಿಂದ ಅಂಗೀಕಾರವಾಯಿತು.
- ಶಾಸಕ ಮುನಿರತ್ನ ಕಾಲೆಳೆದ ಡಿಸಿಎಂ ಡಿಕೆಶಿ
- ಶಾಸಕ ಎಸ್.ಆರ್.ವಿಶ್ವನಾಥ್ ವಿರುದ್ಧ ಅವಹೇಳನಕಾರಿ ಹೇಳಿಕೆ, ಜಗದೀಶ್ ವಿರುದ್ಧ ದೂರು
- ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಗೆ ಸೇರಿದ ಶಕ್ತಿ ಯೋಜನೆ
- ಮಳೆಗೆ ಮುಂಬೈ ಚಿತ್ : ರೈಲು, ವಾಹನ ಸಂಚಾರ ಸ್ಥಗಿತ
- ಮಾದಕ ವಸ್ತು ನಿರ್ಮೂಲನೆಗೆ ಸಾರ್ವಜನಿಕರು ಪೊಲೀಸರೊಂದಿಗೆ ಕೈಜೋಡಿಸಿ :ಸೀಮಂತ್ಕುಮಾರ್ ಸಿಂಗ್ ಮನವಿ