Wednesday, August 20, 2025
Homeರಾಜ್ಯಸತ್ತ ವ್ಯಕ್ತಿಗೂ ಡಯಾಲಿಸಿಸ್‌‍ ಮಾಡಿದ ವಿಚಾರ ವಿಧಾನಸಭೆಯಲ್ಲಿ ಪ್ರಸ್ತಾಪ

ಸತ್ತ ವ್ಯಕ್ತಿಗೂ ಡಯಾಲಿಸಿಸ್‌‍ ಮಾಡಿದ ವಿಚಾರ ವಿಧಾನಸಭೆಯಲ್ಲಿ ಪ್ರಸ್ತಾಪ

dialysis on a dead person was raised in the Assembly.

ಬೆಂಗಳೂರು,ಆ.20- ಸತ್ತ ವ್ಯಕ್ತಿಗೂ ಡಯಾಲಿಸಿಸ್‌‍ ಮಾಡಿ ಹಣ ಪಡೆಯಲಾಗುತ್ತಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಬಿಜೆಪಿ ಶಾಸಕ ಚನ್ನಬಸಪ್ಪ ವಿಧಾನಸಭೆಯಲ್ಲಿಂದು ಒತ್ತಾಯಿಸಿದರು.

ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ಆಸ್ಪತ್ರೆಯಲ್ಲಿ ಉಚಿತವಾಗಿ ಡಯಾಲಿಸಿಸ್‌‍ ಮಾಡುವ ವ್ಯವಸ್ಥೆ ಇದೆ. ಡಯಾಲಿಸಿಸ್‌‍ ಮಾಡುವ ಏಜೆನ್ಸಿಯು ಫೆ.15 ರಂದು ಮೃತಪಟ್ಟ ಹೆಣ್ಣುಮಗಳಿಗೆ ಫೆ.24 ಹಾಗೂ ಆನಂತರ ಮತ್ತೊಮೆ ಡಯಾಲಿಸಿಸ್‌‍ ಮಾಡಿ ಹಣ ಪಡೆದಿದೆ ಎಂದು ಆರೋಪಿಸಿದರು.

20 ರಿಂದ 30 ಲಕ್ಷ ರೂ. ಹಣವು ಸರ್ಕಾರದಿಂದ ಸಂದಾಯವಾಗುತ್ತದೆ. ಸತ್ತ ವ್ಯಕ್ತಿಗೂ ಡಯಾಲಿಸಿಸ್‌‍ ಮಾಡಲಾಗುತ್ತದೆ. ಇದೇ ಏಜೆನ್ಸಿಗೆ ಮತ್ತೆ 50 ಡಯಾಲಿಸಿಸ್‌‍ ಉಪಕರಣ ನೀಡುವ ಹುನ್ನಾರ ನಡೆದಿದೆ. ಈ ಬಗ್ಗೆ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜವಳಿ ಸಚಿವ ಶಿವಾನಂದ ಪಾಟೀಲ್‌, ಈ ವಿಚಾರ ಗಂಭೀರವಾಗಿದ್ದು, ಆರೋಗ್ಯ ಸಚಿವರ ಗಮನಕ್ಕೆ ತಂದು ಉತ್ತರ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.

RELATED ARTICLES

Latest News