ಬೆಂಗಳೂರು, ಆ.20- ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಉಪ ಯೋಜನೆಯ ಹಣದ ಬಳಕೆಯಲ್ಲಿ ಅರ್ಹ ಫಲಾನುಭವಿಗಳ ಪಟ್ಟಿ ನೀಡದೆ ಇದ್ದರೆ ಅನುದಾನವನ್ನು ಹಿಂಪಡೆಯುವುದಾಗಿ ಸಮಾಜ ಕಲ್ಯಾಣ ಸಚಿವ ಎಚ್. ಸಿ .ಮಹದೇವಪ್ಪ ಎಚ್ಚರಿಕೆ ನೀಡಿದ್ದಾರೆ .
ವಿಧಾನಸಭೆಯಲ್ಲಿಂದು ಮಾಗಡಿ ಕ್ಷೇತ್ರದ ಶಾಸಕ ಎಚ್.ಸಿ .ಬಾಲಕೃಷ್ಣ ಅವರು ವಿವಿಧ ನಿಗಮಗಳಿಗೆ ಒದಗಿಸಿರುವ ಅನುದಾನದ ಬಗ್ಗೆ ಮಾಹಿತಿ ಕೇಳಿದರು ಹಾಗೂ ಗಂಗಾ ಕಲ್ಯಾಣ ಯೋಜನೆಯಲ್ಲಿ ಬೋರ್ವೆಲ್ ಕೊರೆಯುವುದು ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸಲು ಸಮಯ ವ್ಯರ್ಥವಾಗುತ್ತಿದೆ. ಕಾಲಮಿತಿಯಲ್ಲಿ ಈ ಯೋಜನೆಗಳನ್ನು ಪೂರ್ಣಗೊಳಿಸಿ ಎಂದು ಒತ್ತಾಯಿಸಿದರು.
ಉತ್ತರ ನೀಡಿದ ಸಚಿವ ಮಹದೇವಪ್ಪ, ಗಂಗಾ ಕಲ್ಯಾಣ ಹಾಗೂ ಇತರ ಯೋಜನೆಗಳನ್ನು ಜಿಲ್ಲಾವಾರು ಅನುಷ್ಠಾನಗೊಳಿಸಲಾಗುತ್ತಿದೆ. ಬೋರ್ವೆಲ್ ಕೊರೆದ ಬಳಿಕ, ವಿದ್ಯುತ್ ಸಂಪರ್ಕ ಕಲ್ಪಿಸುವುದು ಇಂಧನ ಇಲಾಖೆಯ ಜವಾಬ್ದಾರಿ. ಗಂಗಾ ಕಲ್ಯಾಣ ಯೋಜನೆ ಅಡಿ 75 ಸಾವಿರ ರೂ.ಗಳನ್ನು ನೀಡುತ್ತಿದ್ದೇವೆ. ಹೆಚ್ಚಿನ ವೆಚ್ಚವಾದರೆ ಅದನ್ನು ಇಂಧನ ಇಲಾಖೆಗೆ ಭರಿಸಬೇಕು ಎಂದರು.
ಇಂಧನ ಇಲಾಖೆಗೆ ಎಸ್‌ಸಿ, ಎಸ್‌ಟಿ ಉಪ ಯೋಜನೆಯ ಅಡಿ 5180 ಕೋಟಿ ರೂ.ಗಳನ್ನು ನೀಡಲಾಗಿದೆ. ಆ ಹಣವನ್ನು ಯಾವುದಕ್ಕೆ ಬಳಕೆ ಮಾಡಲಾಗುತ್ತಿದೆ ಎಂದು ಶಾಸಕ ಎಂ. ಚಂದ್ರಪ್ಪ ಪ್ರಶ್ನಿಸಿದರು.ಉಪ ಯೋಜನೆಗಳ ಫಲಾನುಭವಿಗಳ ಪಟ್ಟಿಯನ್ನು ಎಲ್ಲಾ ಇಲಾಖೆಗಳು ಸಮಾಜ ಕಲ್ಯಾಣ ಇಲಾಖೆಗೆ ನೀಡಬೇಕು. ಇಲ್ಲವಾದರೆ ಅನುದಾನ ವಾಪಾಸ್ ಪಡೆಯಲಾಗುವುದು ಎಂದು ಮಹದೇವಪ್ಪ ಎಚ್ಚರಿಕೆ ನೀಡಿದರು.
- ಹಣಕಾಸು ವಿಚಾರಕ್ಕೆ ಇಬ್ಬರು ಕಟ್ಟಡ ಕಾರ್ಮಿಕರ ನಡುವೆ ನಡೆದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯ
- ಮತ್ತೆ ಮುನ್ನೆಲೆಗೆ ಬಂದ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ
- ದೇವನಹಳ್ಳಿಯಲ್ಲಿ ಐಫೋನ್ ಘಟಕ ಸ್ಥಾಪನೆ
- ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪನೆ : ಸಿಎಂ ಸಿದ್ದರಾಮಯ್ಯ ಭರವಸೆ
- “ನಿಮ್ಮ ಉಪಜಾತಿ ಯಾವುದು..?” ಎಂದು ಕೇಳಿದ ಗಣತಿದಾರರ ವಿರುದ್ಧ ಸಚಿವ ವಿ.ಸೋಮಣ್ಣ ಗರಂ