Wednesday, August 20, 2025
Homeರಾಷ್ಟ್ರೀಯ | Nationalಬಸ್‌‍ಗಳ ಮೇಲೆ 'ಪ್ರಾಣಿಗಳ ಮೇಲೆ ದಯೆ ಇರಲಿ' ಘೋಷವಾಕ್ಯ ಕಡ್ಡಾಯ

ಬಸ್‌‍ಗಳ ಮೇಲೆ ‘ಪ್ರಾಣಿಗಳ ಮೇಲೆ ದಯೆ ಇರಲಿ’ ಘೋಷವಾಕ್ಯ ಕಡ್ಡಾಯ

'Be Kind to Animals' posters on public transport: India's move for animal safety

ಬೆಂಗಳೂರು, ಆ.20– ಸಾರಿಗೆ ಸಂಸ್ಥೆಗಳ ಬಸ್‌‍ಗಳ ಮೇಲೆ ಪ್ರಾಣಿಗಳ ಮೇಲೆ ದಯೆ ಇರಲಿ ಎಂಬ ಘೋಷವಾಕ್ಯ ಬರೆಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ.ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳಿಗೆ ಪ್ರಾಣಿಗಳು ಬಲಿಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಇಂತಹ ಮಹತ್ವದ ಆದೇಶ ಹೊರಡಿಸಿದೆ.

ಈ ಆದೇಶ ದೇಶದ ಎಲ್ಲಾ ಸರ್ಕಾರಿ ಸಾಮ್ಯದ ಸಾರಿಗೆ ಸಂಸ್ಥೆಗಳಿಗೆ ಅನ್ವಯವಾಗಲಿದೆ. ವಾಹನ ಹರಿದು ಪ್ರಾಣಿಗಳು ಸಾವನ್ನಪ್ಪುತ್ತಿರುವ ಹಿನ್ನಲೆಯಲ್ಲಿ ಇಂತಹ ತೀರ್ಮಾನ ಕೈಗೊಳ್ಳಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಸುತ್ತೊಲೆ ಹೊರಡಿಸಿದೆ.ಸಾರಿಗೆ ಸಂಸ್ಥೆ ಬಸ್‌‍ ನ ಹಿಂಬದಿ ಗಾಜಿನ ಮೇಲೆ ಪ್ರಾಣಿಗಳ ಮೇಲೆ ಇರಲಿ ದಯೆ ಎಂಬ ಘೋಷವಾಕ್ಯ ಬರೆಸುವಂತೆ ಸೂಚನೆ ನೀಡಲಾಗಿದೆ.

ಕೇಂದ್ರ ಸರ್ಕಾರದ ಈ ಆದೇಶ ರಾಜ್ಯದ ನಾಲ್ಕೂ ಸಾರಿಗೆ ಸಂಸ್ಥೆಗಳಿಗೂ ಅನ್ವಯವಾಗಲಿದೆ. ಹಿಂದಿ ಅಥವಾ ಸ್ಥಳೀಯ ಭಾಷೆಯಲ್ಲಿ ಈ ಘೋಷವಾಕ್ಯ ಬರೆಸುವಂತೆ ಸುತ್ತೋಲೆ ಬಂದಿದೆ.
ಎಲ್ಲ ಬಸ್‌‍ಗಳ ಮೇಲೆ ಘೋಷವಾಕ್ಯ ಬರೆಸಿ ವರದಿ ನೀಡುವಂತೆ ರಾಜ್ಯದ ನಾಲ್ಕೂ ನಿಗಮಗಳ ಅಧಿಕಾರಿಗಳಿಗೆ ಕೇಂದ್ರ ಸರ್ಕಾರ ಪತ್ರ ಬರೆದಿದೆ.

ಕೇಂದ್ರ ಸರ್ಕಾರಆದ್ಯತೆ ಮೇರೆಗೆ ಬರೆಸುವಂತೆ ಸೂಚಿಸಿದ ಕೇಂದ್ರ ಸರ್ಕಾರ ಬಸ್‌‍ಗಳ ಹಿಂಬದಿ ಗಾಜಿನ ವಿಂಡ್‌ ಶೀಲ್‌್ಡ ಮೇಲೆ ಪ್ರಾಣಿಗಳ ಮೇಲೆ ದಯೆ ಇರಲಿ ಅಂತ ನಾಮಫಲಕ ಬರೆಸಬೇಕು ಅಕ್ಷರಗಳ ಗಾತ್ರ 150 ಮಿ.ಮೀ ಇರಬೇಕು ಹಾಗೂ ಹಳದಿ ಬಣ್ಣ ಬಳಕೆ ಮಾಡಬೇಕು ಎಂದು ತಿಳಿಸಿದೆ.

RELATED ARTICLES

Latest News