ನವದೆಹಲಿ,ಆ.21-ರಾಷ್ಟ್ರ ರಾಜಧಾನಿಯ ಇಂದು ಬೆಳಿಗ್ಗೆ ಆರು ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಪೊಲೀಸರು ಮತ್ತು ಇತರ ತುರ್ತು ಸಂಸ್ಥೆಗಳು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ.
ರಾಜಧಾನಿಯ ಆರು ಶಾಲೆಗಳಲ್ಲಿ ಬೆಳಿಗ್ಗೆ 6.35 ರಿಂದ ಬೆಳಿಗ್ಗೆ 7.48 ರ ನಡುವೆ ಬಾಂಬ್ ಬೆದರಿಕೆಗೆ ಸಂಬಂಧಿಸಿದ ಕರೆಗಳು ಬಂದಿವೆ. ಇವುಗಳಲ್ಲಿ ಪ್ರಸಾದ್ ನಗರದಲ್ಲಿರುವ ಆಂಧ್ರ ಶಾಲೆ, ಬಿಜಿಎಸ್ ಇಂಟರ್‌ನ್ಯಾಷನಲ್ ಶಾಲೆ, ರಾವ್ ಮಾನ್ ಸಿಂಗ್ ಶಾಲೆ, ಕಾನ್ವೆಂಟ್ ಶಾಲೆ, ಮ್ಯಾಕ್‌್ಸ ಫೋರ್ಟ್ ಶಾಲೆ ಮತ್ತು ದ್ವಾರಕಾದ ಇಂದ್ರಪ್ರಸ್ಥ ಅಂತರರಾಷ್ಟ್ರೀಯ ಶಾಲೆ ಸೇರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ಮತ್ತು ಬಾಂಬ್ ನಿಷ್ಕ್ರಿಯ ದಳಗಳೊಂದಿಗೆ ಪೊಲೀಸ್ ತಂಡಗಳು ತಕ್ಷಣ ಆವರಣಕ್ಕೆ ಧಾವಿಸಿವೆ ಪರಿಶೀಲನೆ ನಡೆಸಿದೆ. ನಾಲ್ಕು ದಿನಗಳಲ್ಲಿ ಇದು ಮೂರನೇ ಘಟನೆಯಾಗಿದೆ. ಸೋಮವಾರ, ದೆಹಲಿಯಾದ್ಯಂತ 32 ಶಾಲೆಗಳಿಗೆ ಇದೇ ರೀತಿಯ ಬೆದರಿಕೆಗಳು ಬಂದವು, ಅದು ನಂತರ ಹುಸಿ ಬೆದರಿಕೆಯಾಗಿತ್ತು.
ೞಬುಧವಾರ, ರಾಷ್ಟ್ರ ರಾಜಧಾನಿಯ ಸುಮಾರು 50 ಶಾಲೆಗಳಿಗೆ ಇ-ಮೇಲ್ ಮೂಲಕ ಮತ್ತೆ ಬಾಂಬ್ ಬೆದರಿಕೆಗಳು ಬಂದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕುಚೊದ್ಯದ ಬಗ್ಗೆ ಪೊಲೀಸರ ಸೈಬರ್ ತಂಡ ತನಿಖೆ ನಡೆಸುತ್ತಿದೆ.
- ವಿದ್ಯಾರ್ಥಿನಿ ಕೊಲೆ ಪ್ರಕರಣ ಆರೋಪಿಗಳ ವಿರುದ್ಧ ಕಠಿಣ ಕ್ರಮ : ಗೃಹಸಚಿವ ಪರಮೇಶ್ವರ್
- ಬೆಂಗಳೂರಲ್ಲಿ ಇಂದು ಸಂಭವಿಸಿದ ನಾಲ್ಕು ಪ್ರತ್ಯಕ ಅಪಘಾತಗಳಲ್ಲಿ ವಿದ್ಯಾರ್ಥಿನಿ ಸೇರಿ ನಾಲ್ವರ ಸಾವು
- ಭೂಕಂದಾಯ ತಿದ್ದುಪಡಿ ವಿಧೇಯಕ ಆಯ್ಕೆ ಸಮಿತಿಗೆ ವಹಿಸಲು ನಿರ್ಣಯ
- ದೆಹಲಿ ಸಿಎಂ ಮೇಲಿನ ದಾಳಿ ವ್ಯವಸ್ಥಿತ ಪಿತೂರಿ
- ಅಗ್ನಿ-5 ಕ್ಷಿಪಣಿ ಪರೀಕ್ಷೆ ಯಶಸ್ವಿ