Thursday, August 21, 2025
Homeರಾಷ್ಟ್ರೀಯ | Nationalದೆಹಲಿ ಸಿಎಂ ರೇಖಾ ಗುಪ್ತಾಗೆ ಗಂಭೀರ ಗಾಯ, ನಿವಾಸದಿಂದಲೇ ಕೆಲಸ

ದೆಹಲಿ ಸಿಎಂ ರೇಖಾ ಗುಪ್ತಾಗೆ ಗಂಭೀರ ಗಾಯ, ನಿವಾಸದಿಂದಲೇ ಕೆಲಸ

CM Rekha Gupta suffered serious injuries, working from her residence:

ನವದೆಹಲಿ,ಆ.21-ಮುಖ್ಯಮಂತ್ರಿ ರೇಖಾ ಗುಪ್ತಾ ಅವರಿಗೆ ಗಂಭೀರ ದೈಹಿಕ ಗಾಯಗಳಾಗಿದ್ದು, ದಾಳಿಯ ನಂತರ ಅವರು ಆಘಾತ ಸ್ಥಿತಿಯಲ್ಲಿದ್ದರು ಆದರೆ ಅವರು ತಮ ನಿವಾಸದಿಂದಲೇ ಕೆಲಸ ಮಾಡುತ್ತಿದ್ದರು ಎಂದು ಸಚಿವ ಕಪಿಲ್‌ ಮಿಶ್ರಾ ತಿಳಿಸಿದ್ದಾರೆ.

ಗುಪ್ತಾ ಮೇಲಿನ ದಾಳಿಯನ್ನು ಯೋಜಿತ ಪಿತೂರಿಯ ಎಂದು ಅವರು ಪುನರುಚ್ಚರಿಸಿದ್ದು , ಆರೋಪಿಯು ಗಂಭೀರ ಅಪರಾಧಗಳ ಇತಿಹಾಸ ಹೊಂದಿರುವ ವೃತ್ತಿಪರ ಅಪರಾಧಿ ಎಂದು ಹೇಳಿದ್ದಾರೆ.

ಮನೆಯಲ್ಲಿ ಅವರು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ, ಆದರೆ ಅವರಿಗೆ ವಿಶ್ರಾಂತಿ ಬೇಕು. ಅವರ ದೈಹಿಕ ಗಾಯಗಳು ಗಂಭೀರವಾಗಿವೆ ಮತ್ತು ಅವರು ಆಘಾತದ ಸ್ಥಿತಿಯಲ್ಲಿದ್ದಾರೆ ಎಂದು ಮಿಶ್ರಾ ಸುದ್ದಿಗಾರರಿಗೆ ತಿಳಿಸಿದರು.

ಆರೋಪಿಯ ವಿರುದ್ಧ ಕೊಲೆ ಯತ್ನ ಮತ್ತು ಕಳ್ಳಸಾಗಣೆ ಆರೋಪ ಸೇರಿದಂತೆ ಒಂಬತ್ತು ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿವೆ ಎಂದು ಸಚಿವರು ಹೇಳಿದ್ದಾರೆ. ದಾಳಿಯನ್ನು ಯೋಜಿತ ರೀತಿಯಲ್ಲಿ ನಡೆಸಲಾಗಿದೆ, ಆರೋಪಿ ದಾಳಿ ನಡೆಸಿದಾಗ ಅವರ ಫೋನ್‌ನಿಂದ ವಶಪಡಿಸಿಕೊಂಡ ನಂತರ ಅದರಲ್ಲಿದ್ದ ಎರಡು ವೀಡಿಯೊಗಳು ಇದನ್ನು ಸಾಬೀತುಪಡಿಸುತ್ತವೆ ಎಂದು ಅವರು ಹೇಳಿದರು.

RELATED ARTICLES

Latest News