Thursday, August 21, 2025
Homeರಾಜ್ಯವಿದ್ಯಾರ್ಥಿನಿ ಕೊಲೆ ಪ್ರಕರಣ ಆರೋಪಿಗಳ ವಿರುದ್ಧ ಕಠಿಣ ಕ್ರಮ : ಗೃಹಸಚಿವ ಪರಮೇಶ್ವರ್‌

ವಿದ್ಯಾರ್ಥಿನಿ ಕೊಲೆ ಪ್ರಕರಣ ಆರೋಪಿಗಳ ವಿರುದ್ಧ ಕಠಿಣ ಕ್ರಮ : ಗೃಹಸಚಿವ ಪರಮೇಶ್ವರ್‌

Strict action against accused in student murder case: Home Minister .Parameshwar

ಬೆಂಗಳೂರು,ಆ.21- ಚಿತ್ರದುರ್ಗ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 48ರ ಸಮೀಪದ ಗೋನೂರು ರಸ್ತೆಯಲ್ಲಿ ಪದವಿ ವಿದ್ಯಾರ್ಥಿನಿ ವರ್ಷಿತ ಕೊಲೆ ಪ್ರಕರಣದ ಆರೋಪಿಗಳನ್ನು ಮುಲಾಜಿಲ್ಲದೆ ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿಪಡಿಸುತ್ತೇವೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ಎಚ್ಚರಿಸಿದ್ದಾರೆ.

ಪರಿಷತ್‌ನಲ್ಲಿ ಬಿಜೆಪಿಯ ನವೀನ್‌ ಅವರು ಪ್ರಸ್ತಾಪಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಗೃಹಸಚಿವರು, ಈ ಪ್ರಕರಣದಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಕಾನೂನಿನ ಪ್ರಕಾರ ಆರೋಪಿಗಳಿಗೆ ಯಾವ ಶಿಕ್ಷೆಯಾಗಬೇಕೋ ಅದು ಆಗೇ ಆಗುತ್ತದೆ ಎಂದು ಹೇಳಿದರು. ಇಂಥ ಘಟನೆಗಳು ನಾಗರಿಕ ಸಮಾಜದಲ್ಲಿ ಆಗಲೇಬಾರದು. ಯಾರನ್ನು ನಾವು ಸಹಿಸಿಕೊಳ್ಳುವುದಿಲ್ಲ. ನಾನು ಈ ಪ್ರಕರಣ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ನಾಳೆ ಸದನಕ್ಕೆ ಪೂರ್ಣ ಮಾಹಿತಿ ನೀಡುವುದಾಗಿ ತಿಳಿಸಿದರು.

ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ನವೀನ್‌, ಮಂಗಳವಾರ ಯುವತಿಯ ಮೃತದೇಹ ಪತ್ತೆಯಾಗಿದೆ. ಐಮಂಗಲ ಪೊಲೀಸ್‌‍ ಠಾಣೆ ವ್ಯಾಪ್ತಿಯಲ ಕೊವೇರಹಟ್ಟಿ ಗ್ರಾಮದ ವರ್ಷಿತ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು.

ಡಾ.ಬಿ.ಆರ್‌.ಅಂಬೇಡ್ಕರ್‌ ಹಾಸ್ಟೆಲ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವತಿಯನ್ನು ದುಷ್ಕರ್ಮಿಗಳು ಅಪಹರಿಸಿ ಅತ್ಯಂತ ಭೀಕರವಾಗಿ ಕೊಲೆ ಮಾಡಿ ಮೃತದೇಹವನ್ನು ಸುಟ್ಟು ಹಾಕಿದ್ದಾರೆ. ನಾವು ಮಹಿಳೆಯರ ಸುರಕ್ಷತೆಯ ಕುರಿತು ಎರಡು ಮಸೂದೆಗಳನ್ನ ಅಂಗೀಕರಿಸಿದ್ದೇವೆ. ಈ ಪ್ರಕರಣ ನೋಡಿದರೆ ಪೋಷಕರು ತಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ನ್ಯಾಯಕ್ಕಾಗಿ ದಲಿತ ಸಂಘಟನೆಗಳು ಮತ್ತಿತರ ಸಂಘಟನೆಗಳು ಹೋರಾಟ ನಡೆಸುತ್ತಿವೆ. ಪೋಷಕರು ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ಸರ್ಕಾರ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಲಿ ಎಂದು ಒತ್ತಾಯಿಸಿದರು.ಇದಕ್ಕೂ ಮುನ್ನ ಸದಸ್ಯರಿಗೆ ವಿಷಯ ಪ್ರಸ್ತಾಪಿಸಲು ಅವಕಾಶ ನೀಡಿದಕ್ಕೆ ಮುಖ್ಯ ಸಚೇತಕ ಸಲೀಂ ಮತ್ತಿತರರು ಆಕ್ಷೇಪಿಸಿದರು. ಮೊದಲು ವಿಧೇಯಕಗಳ ಮಂಡನೆಯಾಗಲಿ. ನಂತರ ಚರ್ಚೆಗೆ ಅವಕಾಶ ಕೊಡಿ ಎಂದು ಸಭಾಪತಿಗೆ ಮನವಿ ಮಾಡಿದರು. ನಾನು ಅವಕಾಶ ನೀಡಿದ ಮೇಲೆ ನೀವೇಕೆ ಪ್ರಶ್ನೆ ಮಾಡುತ್ತೀರಿ? ಸುಮನೆ ಕುಳಿತುಕೊಳ್ಳಿ ಎಂದು ಸಭಾಪತಿಗಳು ಗರಂ ಆದರು.

RELATED ARTICLES

Latest News