Friday, November 22, 2024
Homeರಾಷ್ಟ್ರೀಯ | Nationalಮುಂಬೈನ ವಸತಿ ಕಟ್ಟಡದಲ್ಲಿ ಬೆಂಕಿ, 135 ಜನರ ರಕ್ಷಣೆ

ಮುಂಬೈನ ವಸತಿ ಕಟ್ಟಡದಲ್ಲಿ ಬೆಂಕಿ, 135 ಜನರ ರಕ್ಷಣೆ

ಮುಂಬೈ, ನ 23 (ಪಿಟಿಐ) ಇಲ್ಲಿನ 24 ಅಂತಸ್ತಿನ ವಸತಿ ಕಟ್ಟಡದಲ್ಲಿ ಇಂದು ಬೆಳಿಗ್ಗೆ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಠ 135 ಜನರನ್ನು ಅಲ್ಲಿಂದ ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ನಾಗರಿಕ ಅಧಿಕಾರಿಗಳು ತಿಳಿಸಿದ್ದಾರೆ.

ಘೋಡಾಪ್ಡಿಯೊ ಪ್ರದೇಶದ ಎಂಎಚ್‍ಎಡಿಎ ಕಾಲೋನಿಯಲ್ಲಿರುವ ನ್ಯೂ ಹಿಂದ್ ಮಿಲ್ ಕಾಂಪೌಂಡ್‍ನಲ್ಲಿರುವ ಕಟ್ಟಡದ ಮೂರನೇ ಮಹಡಿಯಲ್ಲಿ ಮುಂಜಾನೆ 3.40 ಕ್ಕೆ ಬೆಂಕಿ ಕಾಣಿಸಿಕೊಂಡಿತು. ಕಟ್ಟಡದ 1 ರಿಂದ 24 ನೇ ಮಹಡಿಯವರೆಗಿನ ಎಲೆಕ್ಟ್ರಿಕ್ ಮೀಟರ್ ಕ್ಯಾಬಿನ್, ವೈರಿಂಗ್, ಕೇಬಲ, ವಿದ್ಯುತ್ ನಾಳದಲ್ಲಿನ ಸ್ಕ್ರ್ಯಾಪ್ ವಸ್ತುಗಳು, ಕಸ ಮತ್ತು ಕಸದ ನಾಳದಲ್ಲಿನ ವಸ್ತುಗಳಿಗೆ ಬೆಂಕಿ ಸೀಮಿತವಾಗಿದೆ ಎಂದು ನಾಗರಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಹಾದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣ ಅಪರಾಧ ವಿಭಾಗಕ್ಕೆ ವರ್ಗಾವಣೆ

ಕಟ್ಟಡದ ವಿವಿಧ ಮಹಡಿಗಳಿಂದ ಕನಿಷ್ಠ 135 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಅವರು ಹೇಳಿದರು.ಅವರಲ್ಲಿ 25 ಮಂದಿಯನ್ನು ಟೆರೇಸ್‍ನಿಂದ, 30 ಮಂದಿಯನ್ನು 15ನೇ ಮಹಡಿಯಲ್ಲಿನ ಆಶ್ರಯ ಪ್ರದೇಶದಿಂದ ಮತ್ತು 80 ಜನರನ್ನು ಕಟ್ಟಡದ 22ನೇ ಮಹಡಿಯಲ್ಲಿರುವ ಆಶ್ರಯ ಪ್ರದೇಶದಿಂದ ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದರು.

ಕರೆ ಸ್ವೀಕರಿಸಿದ ನಂತರ ಐದು ಅಗ್ನಿಶಾಮಕ ದಳಗಳು ಮತ್ತು ಮೂರು ನೀರಿನ ಟ್ಯಾಂಕರ್‍ಗಳು ಮತ್ತು ಇತರ ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಳಿಗ್ಗೆ 7.20 ರ ಹೊತ್ತಿಗೆ ಬೆಂಕಿಯನ್ನು ನಂದಿಸಲಾಯಿತು ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಂಕಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ, ಆದರೆ ಶಾರ್ಟ್ ಸಕ್ರ್ಯೂಟ್ ಇದನ್ನು ಪ್ರಚೋದಿಸಬಹುದು ಎಂದು ನಾಗರಿಕ ಅಧಿಕಾರಿ ತಿಳಿಸಿದ್ದಾರೆ.

RELATED ARTICLES

Latest News