Thursday, August 21, 2025
Homeಬೆಂಗಳೂರುಶಾಂತಿ ಸೌಹಾರ್ದತೆಯಿಂದ ಗೌರಿ ಗಣೇಶ -ಈದ್‌ ಮಿಲಾದ್‌ ಹಬ್ಬ ಆಚರಿಸಿ : ಡಿಸಿಪಿ ಸಜೀತ್‌

ಶಾಂತಿ ಸೌಹಾರ್ದತೆಯಿಂದ ಗೌರಿ ಗಣೇಶ -ಈದ್‌ ಮಿಲಾದ್‌ ಹಬ್ಬ ಆಚರಿಸಿ : ಡಿಸಿಪಿ ಸಜೀತ್‌

Celebrate Gauri Ganesh-Eid Milad festival with peace and harmony: DCP Sajeet

ಬೆಂಗಳೂರು,ಆ.21- ಮುಂಬರುವ ಗೌರಿ -ಗಣೇಶ ಹಾಗೂ ಈದ್‌ ಮಿಲಾದ್‌ ಹಬ್ಬದ ಪ್ರಯುಕ್ತ ಈಶಾನ್ಯ ವಿಭಾಗದ ಡಿಸಿಪಿ ಸಜೀತ್‌ ಅವರ ಅಧ್ಯಕ್ಷತೆಯಲ್ಲಿ ಶಾಂತಿ ಸೌಹಾರ್ದತ ಸಭೆಯನ್ನು ಯಲಹಂಕದ ಅಂಬೇಡ್ಕರ್‌ ಭವನದಲ್ಲಿ ಆಯೋಜಿಸಲಾಗಿತ್ತು.

ಸಭೆಯಲ್ಲಿ ಶ್ರೀವಿದ್ಯಾ ಗಣಪತಿ ಪ್ರತಿಷ್ಠಾಪಕರು, ಆಯೋಜಕರು ಹಾಗೂ ಮುಸ್ಲಿಂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.ಹಬ್ಬಗಳನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸುವ ಮೂಲಕ ಕಾನೂನು ಮತ್ತು ಸುವ್ಯೆವಸ್ಥೆ ಕಾಪಾಡಬೇಕು ಎಂದು ಸಜೀತ್‌ ಅವರು ಸಾರ್ವಜನಿಕರಿಗೆ ಸಲಹೆ ನೀಡಿದರು.

ಬ್ಯಾನರ್‌, ಬಂಟಿಂಗ್‌ ,ಫ್ಲೆಕ್ಸ್ ಅಳವಡಿಕೆ ಹಾಗೂ ಡಿಜೆ ಬಳಕೆಯ ನಿಷೇಧದ ಬಗ್ಗೆ, ಗಣಪತಿ ಮೆರವಣಿಗೆ ಮತ್ತು ಗಣಪತಿ ವಿಸರ್ಜನೆ ಸಮಯದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಯಿತು.

ಪ್ರತಿ ಹಬ್ಬಕ್ಕೆ ಪಾವಿತ್ರತೆ, ಸಾಂಸ್ಕೃತಿಕ, ಪಾರಂಪರಿಕತೆ ಇದೆ ಅದನ್ನು ಮರೆಯಬಾರದು. ಧರ್ಮಕ್ಕೆ ಯಾವುದೇ ರೀತಿಯ ಧಕ್ಕೆ ಬಾರದಂತೆ ಹಬ್ಬ ಹರಿದಿನಗಳನ್ನು ಆಚರಿಸಬೇಕೆಂದು ಸಭೆಯಲ್ಲಿ ಅವರು ತಿಳಿಸಿದರು.ಶಾಂತಿ ಸೌಹಾರ್ದತೆ ಸಭೆಯಲ್ಲಿ ಬಿಬಿಎಂಪಿ, ಬೆಸ್ಕಾಂ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

RELATED ARTICLES

Latest News