Thursday, August 21, 2025
Homeರಾಷ್ಟ್ರೀಯ | Nationalದೆಹಲಿ ಸಿಎಂ ರೇಖಾ ಗುಪ್ತಾಗೆ ಝಡ್‌+ ಭದ್ರತೆ

ದೆಹಲಿ ಸಿಎಂ ರೇಖಾ ಗುಪ್ತಾಗೆ ಝಡ್‌+ ಭದ್ರತೆ

Rekha Gupta To Get Joint Z Security Cover By CRPF, Delhi Police After Attack

ನವದೆಹಲಿ,ಆ.21- ಅನಾಮಧೇಯ ವ್ಯಕ್ತಿಯೊಬ್ಬ ಏಕಾಏಕಿ ಕಪಾಳಮೋಕ್ಷ ನಡೆಸಿದ ಹಿನ್ನಲೆಯಲ್ಲಿ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರಿಗೆ ದೇಶದ 2ನೇ ಅತಿ ಗರಿಷ್ಠ ಭದ್ರತೆಯ ಝೆಡ್‌+ ವ್ಯವಸ್ಥೆ ಒದಗಿಸಲಾಗಿದೆ.

ಪ್ರಧಾನಮಂತ್ರಿಗಳಿಗೆ ಮಾತ್ರ ದೇಶದ ಅತ್ಯುನ್ನತ ಎಸ್‌‍ಪಿಜಿ ಭದ್ರತೆಯನ್ನು ನೀಡಲಾಗುತ್ತದೆ. ಅದನ್ನು ಬಿಟ್ಟರೆ ಗೃಹಸಚಿವರು ಹಾಗೂ ಇತರೆ ಕೆಲವೇ ಗಣ್ಯ ವ್ಯಕ್ತಿಗಳಿಗೆ ಮಾತ್ರ ಝೆಡ್‌+ ಭದ್ರತೆಯನ್ನು ಒದಗಿಸಲಾಗುತ್ತದೆ.

ಗುಪ್ತಚರ ವಿಭಾಗದ ಮಾಹಿತಿ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆಯು ರೇಖಾ ಗುಪ್ತ ಅವರಿಗೆ ಝೆಡ್‌+ ಭದ್ರತೆ ನೀಡಬೇಕೆಂದು ಸಲಹೆ ಮಾಡಿತ್ತು. ಹೀಗಾಗಿ ಗೃಹ ಇಲಾಖೆಯು ತತಕ್ಷಣವೇ ಅನ್ವಯವಾಗುವಂತೆ ದೆಹಲಿ ಮುಖ್ಯಮಂತ್ರಿಗೆ ಝೆಡ್‌+ ಭದ್ರತೆಯನ್ನು ನಿಯೋಜಿಸಲಾಗಿದೆ.ಇದರಿಂದ ಮುಖ್ಯಮಂತ್ರಿಗೆ ಒಟ್ಟು 55 ಭದ್ರತಾ ಅಧಿಕಾರಿಗಳನ್ನು ಒದಗಿಸಲಾಗುತ್ತದೆ. ಎನ್‌ಎಸ್‌‍ಜಿ ಕಮಾಂಡೋ, ಸಿಆರ್‌ಪಿಎಫ್‌, ಪೊಲೀಸ್‌‍ ಅಧಿಕಾರಿಗಳು, ಇತರೆ ಭದ್ರತಾ ಪಡೆಗಳು ನಿಯೋಜನೆಗೊಳ್ಳುತ್ತಾರೆ. ಮುಖ್ಯಮಂತ್ರಿಗೆ ರಕ್ಷಣಾ ದೃಷ್ಟಿಯಿಂದ ಗುಂಡು ನಿರೋಧಕ(ಬುಲೆಟ್‌ ಪ್ರೂಪ್‌) ವಾಹನಗಳನ್ನು ಬಳಸಲಾಗುತ್ತದೆ.

ಬುಧವಾರ ದೆಹಲಿಯಲ್ಲಿರುವ ಸಿವಿಲ್‌ ಲೈನ್ಸ್ ಕ್ಯಾಂಪ್‌ ಕಚೇರಿಯಲ್ಲಿ ಜನ್‌ ಸುನ್ವಾಯ್‌ ಕಾರ್ಯಕ್ರಮ ನಡೆಯುವ ವೇಳೆ ಅನಾಮಧೇಯ ವ್ಯಕ್ತಿಯೊಬ್ಬ ಭೇಟಿ ಮಾಡುವ ನೆಪದಲ್ಲಿ ಬಂದು ಏಕಾಏಕಿ ಹಲ್ಲೆ ನಡೆಸಿ ಕಪಾಳಮೋಕ್ಷ ನಡೆಸಿದ್ದಾನೆ. ಈ ಪ್ರಕರಣವು ದೇಶಾದ್ಯಂತ ಭಾರೀ ಸುದ್ದಿ ಮಾಡಿತ್ತು. ಇದೀಗ ಈ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮೂಲತಃ ಈತ ಗುಜರಾತ್‌ನವನು ಎಂದು ತಿಳಿದುಬಂದಿದೆ.

RELATED ARTICLES

Latest News