Thursday, August 21, 2025
Homeಬೆಂಗಳೂರುಬೆಂಗಳೂರಿನ ಮಿಲ್ಕ್ ಕಾಲೋನಿಯಲ್ಲಿ ಡೈಮಂಡ್‌ ಗಣಪತಿ

ಬೆಂಗಳೂರಿನ ಮಿಲ್ಕ್ ಕಾಲೋನಿಯಲ್ಲಿ ಡೈಮಂಡ್‌ ಗಣಪತಿ

Diamond Ganpati in Bengaluru's Milk Colony

ಬೆಂಗಳೂರು,ಆ.21- ನಾಡಿನೆಲ್ಲೆಡೆ ಗಣೇಶ ಹಬ್ಬ ಸಂಭ್ರಮ ಈಗಾಗಲೇ ಮನೆಮಾಡಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ನಗರದ ಮಿಲ್ಕ್ ಕಾಲೋನಿಯಲ್ಲಿ ಡೈಮಂಡ್‌ ಗಣಪತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಬರೋಬ್ಬರಿ 12 ಲಕ್ಷ ರೂ. ಮೌಲ್ಯದ ಅಮೆರಿಕನ್‌ ಡೈಮಂಡ್‌ ಗಣಪ ನಗರಕ್ಕೆ ಆಗಮಿಸಿದ್ದು, ಅದ್ಧೂರಿಯಾಗಿ ಸ್ವಾಗತಿಸಲಾಯಿತು.ಸ್ವಸ್ತಿಕ್‌ ಯುವಕರ ಸಂಘ ಕಳೆದ 39 ವರ್ಷಗಳಿಂದಲೂ ಅದ್ಧೂರಿಯಾಗಿ ಗಣೇಶೋತ್ಸವವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಅದರಂತೆ ಈ ಬಾರಿಯೂ ಸಹ ವಿಘ್ನ ನಿವಾರಕನ ಪ್ರತಿಷ್ಠಾಪನೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಅಮೋಘ ಮಹಾಮಂಟಪ ನಿರ್ಮಾಣ ಸೇರಿದಂತೆ ಮತ್ತಿತರ ಸಿದ್ಧತೆಗಳನ್ನು ಕೈಗೊಂಡಿದ್ದಾರೆ.

ಮುಂಬೈನಿಂದ ಸುಮಾರು 6 ಅಡಿ ಎತ್ತರದ ಅಮೆರಿಕನ್‌ ಡೈಮಂಡ್‌ , ಮುತ್ತು, ರತ್ನ, ಹವಳದಿಂದ ನಿರ್ಮಾಣವಾದ ಸುಮಾರು 12 ಲಕ್ಷ ರೂ. ಬೆಲೆ ಬಾಳುವ ಮೂರ್ತಿಯನ್ನು 30ಕ್ಕೂ ಹೆಚ್ಚು ದಿನಗಳ ಕಾಲ ಮುಂಬೈ ಹಾಗೂ ಸೊಲ್ಲಾಪುರದ ಕುಶಲಕರ್ಮಿಗಳು ನಿರ್ಮಾಣ ಮಾಡಿದ್ದಾರೆ.
ಕಳೆದ ವರ್ಷ ಕೈಲಾಸನಾಥ ದೇವಾಲಯ ಹೋಲುವ ಮಂಟಪದ ಮಾದರಿಯನ್ನು ನಿರ್ಮಾಣ ಮಾಡಿದ್ದರು. ಈ ಬಾರಿ ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯ ಹೋಲುವ ಮಂಟಪವನ್ನು ನಿರ್ಮಾಣ ಮಾಡಲಾಗುತ್ತಿದೆ.

ಮುಂಬೈನಿಂದ ಮಿಲ್‌್ಕ ಕಾಲೋನಿಗೆ ಆಗಮಿಸಿದ ಗಣೇಶ ಮೂರ್ತಿಯನ್ನು ಭಕ್ತರು, ಸಂಘದ ಮುಖಂಡರು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಪೂರ್ಣಕುಂಭ ಕಳಸದೊಂದಿಗೆ ಅದ್ಧೂರಿಯಾಗಿ ಸ್ವಾಗತ ಮಾಡಿಕೊಳ್ಳಲಾಯಿತು.ಇದೇ 27 ರಂದು ನಡೆಯಲಿರುವ ಗಣೇಶ ಹಬ್ಬದಂದು ಈ ಗಣೇಶನನ್ನು ಪ್ರತಿಷ್ಠಾಪಿಸಲಾಗುವುದು ಎಂದು ಸಂಘ ತಿಳಿಸಿದೆ.

RELATED ARTICLES

Latest News