Friday, August 22, 2025
Homeಬೆಂಗಳೂರುಬೆಂಗಳೂರಿನ ವಾಹನ ಸವಾರರಿಗೆ ಗುಡ್‌ ನ್ಯೂಸ್‌‍..!

ಬೆಂಗಳೂರಿನ ವಾಹನ ಸವಾರರಿಗೆ ಗುಡ್‌ ನ್ಯೂಸ್‌‍..!

Good news for motorists in Bengaluru..!

ಬೆಂಗಳೂರು,ಆ.22-ವಾಹನ ಸವಾರರಿಗೆ ನಗರ ಸಂಚಾರಿ ಪೊಲೀಸರು ಗುಡ್‌ ನ್ಯೂಸ್‌‍ ನೀಡಿದ್ದು, ನಿಯಮ ಉಲ್ಲಂಘಿಸಿರುವ ದಂಡದಲ್ಲಿ ಶೇ. 50ರಷ್ಟು ರಿಯಾಯಿತಿ ನೀಡಿ ದಂಡ ಕಟ್ಟಲು ಅವಕಾಶ ಕಲ್ಪಿಸಿದ್ದಾರೆ.

ಪೊಲೀಸ್‌‍ ಇಲಾಖೆಯಲ್ಲಿ ಸಂಚಾರಿ ಇ-ಚಲನ್‌ನಲ್ಲಿ ದಾಖಲಾದ ಪ್ರಕರಣಗಳಿಗೆ ಮಾತ್ರಅನ್ವಯವಾಗುವಂತೆ, ಬಾಕಿ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಿ ಸರ್ಕಾರವು ಆದೇಶ ಹೊರಡಿಸಿದೆ.

ಈ ರಿಯಾಯಿತಿಯು ನಾಳೆಯಿಂದ ಸೆ.12ರವರೆಗೆ ಶೇ.50 ರಷ್ಟು ಮಾತ್ರ ದಂಡ ಪಾವತಿಸಲು ಸೂಚಿಸಲಾಗಿದೆ.ಈ ರಿಯಾಯಿತಿಯು 2023 ಫೆ.11ರ ಒಳಗಾಗಿ ಇತ್ಯರ್ಥಗೊಳ್ಳುವ ಪ್ರಕರಣಗಳಿಗೆ ಮಾತ್ರಅನ್ವಯವಾಗುತ್ತದೆ ಎಂದು ತಿಳಿಸಲಾಗಿದೆ.ಹಲವು ವರ್ಷಗಳಿಂದ ಸಂಚಾರಿ ನಿಯಮ ಉಲ್ಲಂಘನೆಯ ದಂಡ ಕಟ್ಟದೆ ಬಾಕಿ ಉಳಿಸಿಕೊಂಡವರಿಗೆ ಈಗ ಮತ್ತೊಮೆ ರಿಯಾಯಿತಿ ಘೋಷಿಸಿದೆ.

RELATED ARTICLES

Latest News