Friday, August 22, 2025
Homeರಾಜ್ಯಮಕ್ಕಳ ಶಿಕ್ಷಣದ ಹಣದಲ್ಲೂ ಲೂಟಿ ಮಾಡುವ ಸ್ಥಿತಿ ತಲುಪಿದ ಕಾಂಗ್ರೆಸ್‌‍ ಸರ್ಕಾರ : ರೇವಣ್ಣ ಆಕ್ರೋಶ

ಮಕ್ಕಳ ಶಿಕ್ಷಣದ ಹಣದಲ್ಲೂ ಲೂಟಿ ಮಾಡುವ ಸ್ಥಿತಿ ತಲುಪಿದ ಕಾಂಗ್ರೆಸ್‌‍ ಸರ್ಕಾರ : ರೇವಣ್ಣ ಆಕ್ರೋಶ

Congress government looting even from children's education funds: Revanna

ಬೆಂಗಳೂರು, ಆ.22- ರಾಜ್ಯದ ಕಾಂಗ್ರೆಸ್‌‍ ಸರ್ಕಾರ ಮಕ್ಕಳ ಶಿಕ್ಷಣದ ಹಣದಲ್ಲೂ ಲೂಟಿ ಹೊಡೆಯುವ ದುಸ್ಥಿತಿಗೆ ತಲುಪಿದೆ ಎಂದು ಜೆಡಿಎಸ್‌‍ ನ ಹಿರಿಯ ಶಾಸಕ ಎಚ್‌.ಡಿ .ರೇವಣ್ಣ ಆಕೋಶ ವ್ಯಕ್ತ ಪಡಿಸಿರು.

ಸರ್ಕಾರಿ ಶಾಲೆಗಳ ಸ್ಥಿತಿಗತಿ ಹಾಗೂ ಸುಧಾರಣಾ ವ್ಯವಸ್ಥೆಗಳ ಬಗ್ಗೆ ವಿಧಾನಸಭೆಯಲ್ಲಿ ನಡೆಯುತ್ತಿದ್ದ ಚರ್ಚೆಯಲ್ಲಿ ಮಧ್ಯಪ್ರವೇಶಿಸಿದ ಹೆಚ್‌.ಡಿ. ರೇವಣ್ಣ, ಸರ್ಕಾರಗಳು ಬರುತ್ತವೆ ಹೋಗುತ್ತವೆ ಆದರೆ ಆದ್ಯತಾವಲಯಗಳ ಮೇಲೆ ನಿಗಾ ವಹಿಸಬೇಕು ಎಂದರು.

ದೇಶದಲ್ಲಿ ಯಾವ ಕ್ಷೇತ್ರದಲ್ಲೂ ಏಳು ಪ್ರಥಮ ದರ್ಜೆ ಕಾಲೇಜುಗಳಿಲ್ಲ. ತಮ ಹೊಳೆನರಸಿಪುರದಲ್ಲಿ ಮಾತ್ರ ಅಂತಹ ವ್ಯವಸ್ಥೆ ಇದೆ. ಎರಡು ಕೋಟಿ ರೂ. ಖರ್ಚು ಮಾಡಿ ಸರ್ಕಾರಿ ಶಾಲೆಯನ್ನು ಅಭಿವೃದ್ಧಿ ಪಡಿಸಿದ್ದೇನೆ. ನಾವು ಖಾಸಗಿ ಶಿಕ್ಷಣ ಸಂಸ್ಥೆ ನಡೆಸುತ್ತಿಲ್ಲ. ಬಡವರ ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರಿ ವ್ಯವಸ್ಥೆಯನ್ನು ಉತ್ತಮ ಪಡಿಸುತ್ತಿದ್ದೇವೆ ಎಂದು ಹೇಳಿದರು.

ರಾಜ್ಯದಲ್ಲಿ ನಾಲ್ಕು ಸಾವಿರ ಪ್ರಾಥಮಿಕ ಶಾಲೆಗಳು ಮುಚ್ಚುವ ಹಂತದಲ್ಲಿವೆ. ಶಿಕ್ಷಣ ಇಲಾಖೆಯ ಆಯುಕ್ತರಾಗಿದ್ದ ಅಜಯ್‌ ನಾಗಭೂಷಣ್‌ ಅವರು ಸರ್ಕಾರಕ್ಕೆ ಬರೆದಿರುವ ಪತ್ರವನ್ನು ಒಮೆ ನೋಡಿದರೆ ಶಿಕ್ಷಣ ಇಲಾಖೆಯಲ್ಲೂ ಯಾವ ಮಟ್ಟಿನ ಲೂಟಿ ನಡೆಯುತ್ತಿದೆ ಎಂದು ಗೊತ್ತಾಗುತ್ತದೆ. ಶಾಲಾ ಕಟ್ಟಡಗಳ ನಿರ್ಮಾಣವನ್ನು ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಇಲಾಖೆಗಳಿಂದ ನಿರ್ವಹಿಸಿದರೆ ಹಣ ಉಳಿತಾಯವಾಗುತ್ತದೆ. ಆದರೆ ಭ್ರಷ್ಟಾಚಾರಕ್ಕಾಗಿ ಬೇರೆ ವ್ಯವಸ್ಥೆಯ ಮೂಲಕ ನಿರ್ಮಾಣ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂದು ದೂರಿದರು.

ಸರ್ಕಾರಿ ಶಾಲೆಗಳ ಕಾಮಗಾರಿಗಳನ್ನು ನಿರ್ವಹಣೆ ಮಾಡಲಾಗದಿದ್ದ ಮೇಲೆ ಲೋಕೋಪಯೋಗಿ ಮತ್ತು ವಸತಿ ನಿಗಮಗಳನ್ನು ಇಟ್ಟುಕೊಂಡಿರುವುದಾದರೂ ಏಕೆ? ಅವುಗಳನ್ನು ಮುಚ್ಚಿ ಹಾಕಿ ಎಂದು ರೇವಣ್ಣ ಆಕೋಶ ವ್ಯಕ್ತಪಡಿಸಿದರು. ಇದೇ ವ್ಯವಸ್ಥೆಯನ್ನು ಮುಂದುವರಿಸಿದರೆ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಖಾಸಗಿ ವಲಯದ ಅಧಿಪತ್ಯಕ್ಕೊಳಪಡುತ್ತದೆ ಎಂಬ ಆತಂಕವನ್ನು ಅವರು ವ್ಯಕ್ತ ಪಡಿಸಿದರು.

RELATED ARTICLES

Latest News