ಬೆಂಗಳೂರು, ಆ.22- ಬಿಜೆಪಿಯಲ್ಲಿ ಬುದ್ಧಿವಂತರಿಗೆ ಸ್ಥಾನ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಲು ಎಳೆದ ಪ್ರಸಂಗ ವಿಧಾನಸಭೆಯಲ್ಲಿಂದು ನಡೆಯಿತು.ವಿಧಾನಸಭೆಯ ಕಲಾಪದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣ ಕುರಿತಂತೆ ನಡೆದ ಸುದೀರ್ಘ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡುವ ಮುನ್ನ, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಇವತ್ತು ಹೊಸ ಬಟ್ಟೆ ಹಾಕಿದ್ದೀರಾ ಎಂದು ಪ್ರಶಂಸಿದ್ದರು. ಇಲ್ಲ ಇದು ಹಳೆಯ ಬಟ್ಟೆ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.
ಕೇಸರಿ ಧರಿಸಿದ್ದೀರಲ್ಲ, ಅದನ್ನು ಗಮನಿಸ್ದೆಿ ಎಂದು ಅಶೋಕ್ ಹೇಳಿದಾಗ, ನೀನು ಧರಿಸಿರುವುದು ಕೇಸರಿ. ನನ್ನ ಬಟ್ಟೆ ಕೇಸರಿ ಅಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.ಈ ಸಂದರ್ಭದಲ್ಲಿ ಬಿಜೆಪಿಯ ಸುರೇಶ್ ಕುಮಾರ್, ಬಟ್ಟೆ ಮುಖ್ಯ ಅಲ್ಲ. ಅದನ್ನು ಧರಿಸುವವರು ಮುಖ್ಯ ಎಂಬುದು ಅಶೋಕ್ ಅವರಿಗೆ ಗೊತ್ತಿಲ್ಲ ಎಂದರು.
ಪಾಪ ಸುರೇಶ್ ಕುಮಾರ್ ಬುದ್ಧಿವಂತರು. ಬಿಜೆಪಿಯಲ್ಲಿ ಬುದ್ಧಿವಂತರಿಗೆ ಸೂಕ್ತ ಸ್ಥಾನಮಾನ ಇಲ್ಲ ಎಂದು ಸಿದ್ದರಾಮಯ್ಯ ಕಾಲು ಎಳೆದರು.ಇದಕ್ಕೆ ಪ್ರತಿಕ್ರಿಯಿಸಿದ ಸುರೇಶ್ ಕುಮಾರ್, ಬಿಜೆಪಿ ಪಕ್ಷ ನನ್ನನ್ನು ಚೆನ್ನಾಗಿ ನೋಡಿಕೊಂಡಿದೆ. ಆರು ಬಾರಿ ಶಾಸಕನಾಗಿದ್ದೇನೆ. ಸಚಿವನಾಗಿಯೂ ಕೆಲಸ ಮಾಡಿದ್ದೇನೆ. ಈಗ ಮುಂದಿನ ಸಾಲಿನಲ್ಲಿ ಕುಳಿತಿದ್ದೇನೆ ಎಂದರು.ಆದರೂ ನಿಮನ್ನು ಸಚಿವ ಸ್ಥಾನದಿಂದ ತೆಗೆದರಲ್ಲ ಎಂದು ಸಿದ್ದರಾಮಯ್ಯಛೇಡಿಸಿದರು.
- ಕರ್ನಾಟಕ ಸಹಕಾರಿ ಪಾರದರ್ಶಕ ವಿಧೇಯಕಕ್ಕೆ ವಿಧಾನಪರಿಷತ್ನಲ್ಲಿ ಮರು ಅಂಗೀಕಾರ
- ಆರ್ಸಿಬಿ ವಿಜಯೋತ್ಸವಕ್ಕೆ ಅನುಮತಿ ನಿರಾಕರಿಸಿದ್ದರೆ ಬಿಜೆಪಿಯಿಂದ ದೊಡ್ಡ ಚಳವಳಿಯೇ ನಡೆಯುತ್ತಿತ್ತು : ಸಿಎಂ
- ಛತ್ತೀಸ್ಗಢ : ತ್ರಿವರ್ಣ ಧ್ವಜ ಹಾರಿಸಿದ್ದ ವ್ಯಕ್ತಿಯನ್ನು ಕೊಂದ ನಕ್ಸಲರು
- ಅಮೆರಿಕದ ಡ್ರೇಕ್ ಪ್ಯಾಸೇಜ್ ಪ್ರದೇಶದಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ
- ಶೇ.5.5 ರಷ್ಟು ಶುಲ್ಕದೊಂದಿಗೆ ಬೆಂಗಳೂರಿನಲ್ಲಿರುವ ‘ಬಿ’ ಖಾತೆಗಳನ್ನು ‘ಎ’ ಖಾತೆಗಳಾಗಿ ಪರಿವರ್ತನೆ : ಡಿಕೆಶಿ