Saturday, August 23, 2025
Homeಅಂತಾರಾಷ್ಟ್ರೀಯ | Internationalಅಚ್ಚರಿಯ ಬೆಳವಣಿಯಲ್ಲಿ ಭಾರತೀಯ ರಾಯಭಾರಿಯಾಗಿ ಟ್ರಂಪ್‌ ಆಪ್ತ ಸೆರ್ಗಿಯೊ ಗೋರ್‌ ನೇಮಕ

ಅಚ್ಚರಿಯ ಬೆಳವಣಿಯಲ್ಲಿ ಭಾರತೀಯ ರಾಯಭಾರಿಯಾಗಿ ಟ್ರಂಪ್‌ ಆಪ್ತ ಸೆರ್ಗಿಯೊ ಗೋರ್‌ ನೇಮಕ

Trump nominates close ally Sergio Gor as US Ambassador to India amid trade tensions

ವಾಷಿಂಗ್ಟನ್‌,ಆ.23- ಅಚ್ಚರಿಯ ಬೆಳವಣಿಗೆ ಎಂಬಂತೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ಆಪ್ತ ರಾಜಕೀಯ ಸಹಾಯಕ ಮತ್ತು ಶ್ವೇತಭವನದ ಪ್ರಮುಖ ಅಧಿಕಾರಿಯಾದ ಸೆರ್ಗಿಯೊ ಗೋರ್‌ ಅವರನ್ನು ಅಮೆರಿಕಾದ ಭಾರತೀಯ ರಾಯಭಾರಿಯಾಗಿ ನೇಮಕ ಮಾಡಲಾಗಿದೆ. ಭಾರತದೊಂದಿಗೆ ಅಮೆರಿಕ ಸಂಬಂಧ ಸೂಕ್ಷ್ಮ ಹಂತದಲ್ಲಿರುವಾಗ ಟ್ರಂಪ್‌ ತಮ ಅತ್ಯಂತ ನಂಬಿಕಸ್ಥ ಅಧಿಕಾರಿಯನ್ನು ಈ ಮಹತ್ವದ ಹುದ್ದೆಗೆ ಆಯ್ಕೆ ಮಾಡಿದ್ದಾರೆ.

ಗೋರ್‌ ಅವರನ್ನು ಭಾರತ ರಾಯಭಾರಿ ಮಾತ್ರವಲ್ಲದೇ ದಕ್ಷಿಣ ಮತ್ತು ಮಧ್ಯ ಏಷ್ಯಾಕ್ಕೆ ವಿಶೇಷ ರಾಯಭಾರಿಯಾಗಿಯೂ ಟ್ರಂಪ್‌ ನೇಮಿಸಿದ್ದಾರೆ.ಈ ಕುರಿತು ತಮ ಟ್ರೂತ್‌ ಸೋಶಿಯಲ್‌ ವೇದಿಕೆಯಲ್ಲಿ ಪ್ರಕಟಿಸಿರುವ ಡೊನಾಲ್ಡ್ ಟ್ರಂಪ್‌ ಅವರು, ವಿಶ್ವದ ಅತ್ಯಂತ ಜನನಿಬಿಡ ಪ್ರದೇಶದಲ್ಲಿ ನನ್ನ ಕಾರ್ಯಸೂಚಿಯನ್ನು ಜಾರಿಗೊಳಿಸಲು ಮತ್ತು ಅಮೆರಿಕವನ್ನು ಮತ್ತೆ ಶ್ರೇಷ್ಠವಾಗಿಸಲು ನಾನು ಸಂಪೂರ್ಣವಾಗಿ ವಿಶ್ವಾಸ ಇಡಬಹುದಾದ ವ್ಯಕ್ತಿ ಇರುವುದು ಮುಖ್ಯ.

ಆದ್ದರಿಂದ ಸೆರ್ಗಿಯೊ ಗೋರ್‌ ಅವರನ್ನು ಭಾರತದ ರಾಯಭಾರಿಯಾಗಿ ನೇಮಿಸುತ್ತಿದ್ದು, ಗೋರ್‌ ಅವರನ್ನು ಭಾರತ ಗಣರಾಜ್ಯಕ್ಕೆ ನಮ ಮುಂದಿನ ಅಮೆರಿಕದ ರಾಯಭಾರಿಯಾಗಿ ಬಡ್ತಿ ನೀಡುತ್ತಿದ್ದೇನೆ ಎಂದು ಘೋಷಿಸಲು ನನಗೆ ಸಂತೋಷವಾಗುತ್ತಿದೆ. ಅವರು ದಕ್ಷಿಣ ಮತ್ತು ಮಧ್ಯ ಏಷ್ಯಾ ವ್ಯವಹಾರಗಳಿಗೆ ವಿಶೇಷ ರಾಯಭಾರಿಯಾಗಿಯೂ ಸೇವೆ ಸಲ್ಲಿಸಲಿದ್ದಾರೆ ಎಂದು ಹೇಳಿದ್ದಾರೆ.

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಅವರನ್ನು ನೇಮಕ ಮಾಡಲಾಗಿದೆ. ನನ್ನ ಕಾರ್ಯಸೂಚಿಯನ್ನು ಪೂರೈಸಲು ಮತ್ತು ಅಮೆರಿಕವನ್ನು ಮತ್ತೆ ಶ್ರೇಷ್ಠವಾಗಿಸಲು ನಮಗೆ ಸಹಾಯ ಮಾಡಲು ನಾನು ಸಂಪೂರ್ಣವಾಗಿ ನಂಬಬಹುದಾದ ವ್ಯಕ್ತಿಯನ್ನು ಹೊಂದಿರುವುದು ಮುಖ್ಯ. ಸೆರ್ಗಿಯೊ ಅದ್ಭುತ ರಾಯಭಾರಿಯಾಗುತ್ತಾರೆ. ಅಭಿನಂದನೆಗಳು ಸೆರ್ಗಿಯೊ ಎಂದು ಬರೆದುಕೊಂಡಿದ್ಧಾರೆ.

ಇದಕ್ಕೆ ಗೋರ್‌ ಸಹ ಅಭಿನಂದನೆ ಸಲ್ಲಿಸಿದ್ದಾರೆ. ಭಾರತಕ್ಕೆ ಮುಂದಿನ ಅಮೆರಿಕಾ ರಾಯಭಾರಿ ಮತ್ತು ದಕ್ಷಿಣ ಮತ್ತು ಮಧ್ಯ ಏಷ್ಯಾ ವ್ಯವಹಾರಗಳ ವಿಶೇಷ ರಾಯಭಾರಿಯಾಗಿ ನಾಮನಿರ್ದೇಶನ ಮಾಡುವಲ್ಲಿ ಅವರ ಅದ್ಭುತ ನಂಬಿಕೆ ಮತ್ತು ವಿಶ್ವಾಸಕ್ಕಾಗಿ ಅವರಿಗೆ ನಾನು ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ.

ಅಮೆರಿಕವನ್ನು ಪ್ರತಿನಿಧಿಸುವುದು ನನ್ನ ಜೀವನದ ಗೌರವವಾಗಿರುತ್ತದೆ ಎಂದೂ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.ಉಪಾಧ್ಯಕ್ಷ ಜೆಡಿ ವ್ಯಾನ್‌್ಸ ಸಹ, ಗೋರ್‌ ಭಾರತಕ್ಕೆ ಅದ್ಭುತ ರಾಯಭಾರಿಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೇ 2023 ರಿಂದ ಜನವರಿ 2025 ರವರೆಗೆ ರಾಯಭಾರಿಯಾಗಿ ಸೇವೆ ಸಲ್ಲಿಸಿದ ಎರಿಕ್‌ ಗಾರ್ಸೆಟ್ಟಿಯವರ ಸ್ಥಾನವನ್ನು ಗೋರ್‌ ತುಂಬಲಿದ್ದಾರೆ.ಅಮೆರಿಕಾ ಹಾಗೂ ಭಾರತದ ನಡುವಿನ ಸುಂಕದ ಉದ್ವಿಗ್ನತೆಯ ನಡುವೆ ಈ ಘೋಷಣೆ ಬಂದಿದೆ. ಡೊನಾಲ್‌್ಡ ಟ್ರಂಪ್‌ ಆಡಳಿತದಲ್ಲಿ ಸುಮಾರು 4,000 ನೇಮಕಾತಿಗಳನ್ನು ಪರಿಶೀಲಿಸಿ, ಅವರೆಲ್ಲರೂ ಅಧ್ಯಕ್ಷರಿಗೆ ನಿಷ್ಠರಾಗಿರುವುದನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿಯನ್ನು ಗೋರ್‌ ಹೊಣೆ ಹೊತ್ತಿದ್ದರು.

RELATED ARTICLES

Latest News