Sunday, August 24, 2025
Homeರಾಷ್ಟ್ರೀಯ | Nationalರಾಮ ಜನಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಮುಖ ಸದಸ್ಯ ಬಿಮಲೇಂದ್ರ ಮಿಶ್ರಾ ನಿಧನ

ರಾಮ ಜನಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಮುಖ ಸದಸ್ಯ ಬಿಮಲೇಂದ್ರ ಮಿಶ್ರಾ ನಿಧನ

Key member of Ram Janmabhoomi Teerth Kshetra Trust Bimalendra Mishra passes away

ಅಯೋಧ್ಯೆ,ಆ.24- ಶ್ರೀ ರಾಮ ಜನಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಮುಖ ಸದಸ್ಯ ಮತ್ತು ಅಯೋಧ್ಯೆಯ ಹಿಂದಿನ ರಾಜಮನೆತನದ ವಂಶಸ್ಥ ಬಿಮಲೇಂದ್ರ ಮೋಹನ್‌ ಪ್ರತಾಪ್‌ ಮಿಶ್ರಾ ತಡರಾತ್ರಿ ನಿಧನರಾಗಿದ್ದರೆ.

ತಮ 75 ನೇ ವಯಸ್ಸಿನಲ್ಲಿ ಮಿಶ್ರಾ ತಮ ನಿವಾಸದಲ್ಲಿ ಕೊನೆಯುಸಿರೆಳೆದರು ಎಂದು ಅವರ ಕಿರಿಯ ಸಹೋದರ ಶೈಲೇಂದ್ರ ಮೋಹನ್‌ ಪ್ರತಾಪ್‌ ಮಿಶ್ರಾ ತಿಳಿಸಿದ್ದಾರೆ. ಮಿಶ್ರಾ ಕಾಲಿಗೆ ಗಾಯವಾಗಿ ಶಸ್ತ್ರಚಿಕಿತ್ಸೆಯ ನಂತರ ಹಲವಾರು ತಿಂಗಳುಗಳಿಂದ ಆನಾರೋಗ್ಯದಿಂದ ಬಳಲಿದ್ದರು.

ಶಸ್ತ್ರಚಿಕಿತ್ಸೆಯಿಂದ ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳಲಿಲ್ಲ ಎಂದು ಸ್ನೇಹಿತರು ಮತ್ತು ಕುಟುಂಬದವರು ತಿಳಿಸಿದ್ದಾರೆ.ಅಯೋಧ್ಯೆ ವಿವಾದದ ಕುರಿತು ಸುಪ್ರೀಂ ಕೋರ್ಟ್‌ನ ಅಂತಿಮ ತೀರ್ಪಿನ ನಂತರ, ಮಿಶ್ರಾ ಅವರನ್ನು ಶ್ರೀ ರಾಮ ದೇವಾಲಯದ ಧರ್ಮಧಾರರಾಗಿ ನೇಮಿಸಲಾಯಿತು, ಈ ಹಿಂದೆ ಅಯೋಧ್ಯೆ ಆಯುಕ್ತರು ಈ ಪಾತ್ರವನ್ನು ಹೊಂದಿದ್ದರು. ದೇವಾಲಯ ಟ್ರಸ್ಟ್‌ಗೆ ನೀಡಿದ ಕೊಡುಗೆಗಳ ಜೊತೆಗೆ, ಮಿಶ್ರಾ ಅವರು ಸಂಕ್ಷಿಪ್ತ ರಾಜಕೀಯ ವೃತ್ತಿಜೀವನವನ್ನು ಸಹ ಹೊಂದಿದ್ದರು.

ಕಳೆದ 2009 ರ ಸಂಸತ್‌ ಚುನಾವಣೆಯಲ್ಲಿ ಫೈಜಾಬಾದ್‌ (ಅಯೋಧ್ಯೆ) ಲೋಕಸಭಾ ಕ್ಷೇತ್ರದಿಂದ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು.ಮಿಶ್ರಾ ಅವರ ನಿಧನನಕ್ಕೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿಥ್ಯನಾಧ್‌ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

RELATED ARTICLES

Latest News