Monday, August 25, 2025
Homeಮನರಂಜನೆದರ್ಶನ್‌ ಅನುಪಸ್ಥಿತಿಯಲ್ಲಿ ಡಿ.12ಕ್ಕೆ ತೆರೆಗೆ ಬರಲಿದೆ 'ದಿ ಡೆವಿಲ್‌' ಚಿತ್ರ

ದರ್ಶನ್‌ ಅನುಪಸ್ಥಿತಿಯಲ್ಲಿ ಡಿ.12ಕ್ಕೆ ತೆರೆಗೆ ಬರಲಿದೆ ‘ದಿ ಡೆವಿಲ್‌’ ಚಿತ್ರ

The Devil' to hit screens on December 12 in Darshan's absence

ಬೆಂಗಳೂರು, ಆ.24- ನಟ ದರ್ಶನ್‌ ಅವರ ಅನುಪಸ್ಥಿತಿಯಲ್ಲಿ ದಿ ಡೆವಿಲ್‌ ಚಿತ್ರವನ್ನು ಡಿಸೆಂಬರ್‌ 12ಕ್ಕೆ ಬಿಡುಗಡೆ ಮಾಡುವುದಾಗಿ ಪ್ರಕಟಿಸಲಾಗಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಮತ್ತು ಸಂಗಡಿಗರು ಜೈಲು ಸೇರಿದ್ದಾರೆ. ಈ ಮೊದಲು ಬಂಧಿತರಾಗಿದ್ದ ದರ್ಶನ್‌ ಮತ್ತು ಸಹಚರರಿಗೆ ಹೈಕೋರ್ಟ್‌ ಜಾಮೀನು ನೀಡಿತ್ತು. ತನಿಖಾಧಿಕಾರಿಗಳು ಅದನ್ನು ಸುಪ್ರೀಂಕೊರ್ಟ್‌ನಲ್ಲಿ ಪ್ರಶ್ನಿಸಿದಾಗ ಆ.14ರಂದು ಜಾಮೀನು ರದ್ದುಗೊಂಡಿದ್ದು, ಅದೇ ದಿನ ಎಲ್ಲರೂ ಜೈಲು ಪಾಲಾಗಿದ್ದಾರೆ.

ಮೊದಲ ಬಾರಿ ಜಾಮೀನು ದೊರೆತ ಸಂದರ್ಭದಲ್ಲಿ ದರ್ಶನ್‌ ಚಿತ್ರೀಕರಣ ಸೇರಿದಂತೆ ಇತರ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಬಹುತೇಕವಾಗಿ ಚಿತ್ರದ ಕೆಲಸ ಕಾರ್ಯಗಾರಗಳನ್ನು ದರ್ಶನ್‌ ಪೂರ್ಣಗೊಳಿಸಿದ್ದರು ಎಂದು ಹೇಳಲಾಗಿತ್ತು.

ದರ್ಶನ್‌ ಕೊಲೆ ಆರೋಪದಲ್ಲಿ ಜೈಲು ಪಾಲಾಗಿದ್ದು, ಒಂದು ವರ್ಗದ ಅಭಿಮಾನಿಗಳ ಕ್ರೇಜ್‌ ಕಡಿಮೆಯಾಗಿಲ್ಲ. ದರ್ಶನ್‌ ಚಿತ್ರ ಬಿಡುಗಡೆಗಾಗಿ ಅಪಾರ ಸಂಖ್ಯೆಯ ಅಭಿಮಾನಿಗಳು ನಿರೀಕ್ಷೆಯಲ್ಲಿದ್ದಾರೆ.

ಇದೇ ಸಂದರ್ಭದಲ್ಲಿ ದರ್ಶನ್‌ ಅವರ ಸಾಮಾಜಿಕ ಜಾಲತಾಣದಲ್ಲಿ ದಿ ಡೆವಿಲ್‌ ಚಿತ್ರ ಬಿಡುಗಡೆಯ ದಿನಾಂಕವನ್ನು ಘೋಷಿಸಲಾಗಿದೆ. ದರ್ಶನ್‌ ಅವರ ಸಾಮಾಜಿಕ ಜಾಲತಾಣವನ್ನು ತಾವು ಬಳಸಿಕೊಂಡು ಚಿತ್ರದ ಪ್ರಚಾರ ಹಾಗೂ ಇತರ ವಿದ್ಯಮಾನಗಳ ಮಾಹಿತಿಯನ್ನು ಅಭಿಮಾನಿಗಳಿಗೆ ನೀಡುವುದಾಗಿ ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮಿ ಈ ಮೊದಲು ತಿಳಿಸಿದ್ದರು. ಅದರಂತೆ ಸಾಮಾಜಿಕ ಜಾಲತಾಣದಲ್ಲಿ ಚಿತ್ರ ದಿನಾಂಕವನ್ನು ಪ್ರಕಟಿಸಲಾಗಿದೆ.

ಇದ್ದರೆ ನೆಮದಿಯಾಗಿರಬೇಕು ಎಂಬ ಡೆವಿಲ್‌ ಚಿತ್ರದ ಹಾಡು ಬಿಡುಗಡೆಯಾಗಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ತಿಳಿಸಲಾಗಿದೆ. ಅದರ ಬೆನ್ನಲ್ಲೇ ನಲೆಯ ಸೆಲೆಬ್ರಿಟಿಸ್‌‍ ನಿಮ ನಿರಂತರ ಪ್ರಾರ್ಥನೆ, ಪ್ರೀತಿ ಮತ್ತು ಬೆಂಬಲಕ್ಕೆ ಅನಂತ ಧನ್ಯವಾದಗಳು. ನೀವು ಕಾತುರದಿಂದ ಕಾಯುತ್ತಿದ್ದ ದಿ ಡೆವಿಲ್‌ ಚಿತ್ರ ಡಿ. 12ರಂದು ಬಿಡುಗಡೆಯಾಗಲಿದೆ ಎದು ಪ್ರಕಟಿಸಲಾಗಿದೆ.

RELATED ARTICLES

Latest News