ಬೆಂಗಳೂರು, ಆ.24- ಯೂಟ್ಯೂಬರ್ ಸಮೀರ್ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಿ, ವಿಚಾರಣೆ ಎದುರಿಸಿದ್ದಾರೆ.ಎಐ ತಂತ್ರಜ್ಞಾನ ಬಳಸಿ ವಿಡಿಯೋ ಮಾಡಿ ಧರ್ಮಸ್ಥಳದ ವಿರುದ್ಧ ತಪ್ಪು ಮಾಹಿತಿ ಹರಡಿರುವುದು ಮತ್ತು ಪ್ರಚೋದನೆ ನೀಡಿದ್ದಾರೆಂಬ ಸಮೀರ್ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆ ಸೇರಿದಂತೆ ವಿವಿಧ ಕಡೆ ಪ್ರಕರಣಗಳು ದಾಖಲಾಗಿವೆ.
ನ್ಯಾಯಾಲಯ ಸಮೀರ್‌ಗೆ ಧರ್ಮಸ್ಥಳ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡಿದೆ. ಆದರೆ, ವಿಚಾರಣೆಗೆ ಹಾಜರಾಗಲೇ ಬೇಕು ಎಂದು ತಾಕೀತು ಮಾಡಿತ್ತು. ಪೊಲೀಸರ ನೋಟೀಸ್ ಹಿನ್ನೆಲೆಯಲ್ಲಿ ಸಮೀರ್ ಹಲವಾರು ದಾಖಲಾತಿಗಳು ಹಾಗೂ ಲ್ಯಾಪ್‌ಟಾಪ್ ಜೊತೆ ಬೆಳ್ತಂಗಡಿ ಸರ್ಕಲ್ ಇನ್‌್ಸಪೆಕ್ಟರ್ ಕಚೇರಿಗೆ ವಕೀಲರುಗಳ ಜೊತೆ ಹಾಜರಾಗಿದ್ದರು.
ಸರ್ಕಲ್ ಇನ್‌್ಸಪೆಕ್ಟರ್ ನಾಗೇಶ್ ಕದ್ರಿ ಸಮೀರ್ ಅವರನ್ನು ವಿಚಾರಣೆಗೊಳಪಡಿಸಿದರು. ಸಮೀರ್ ಮಾಡಿದ ವಿಡಿಯೋಗಳು ಭಾರೀ ವಿವಾದ ಸೃಷ್ಟಿಸಿದವು. ಸೌಜನ್ಯ ಹಾಗೂ ಅನನ್ಯಭಟ್ ಅವರ ಪ್ರಕರಣಗಳಿಗೆ ಕುರಿತಂತೆ ಸಮೀರ್ ನೀಡಿದ ಹೇಳಿಕೆಗಳು ತೀವ್ರ ಆಕ್ರೋಶಕ್ಕೆ ಗುರಿಯಾಗಿವೆ.