Tuesday, August 26, 2025
Homeಮನರಂಜನೆಕೆಜಿಎಫ್‌ ಚಿತ್ರದಲ್ಲಿ 'ಬಾಂಬೆ ಡಾನ್‌' ಆಗಿ ಖ್ಯಾತಿ ಪಡೆದಿದ್ದ ನಟ ದಿನೇಶ್‌ ಮಂಗಳೂರು ನಿಧನ

ಕೆಜಿಎಫ್‌ ಚಿತ್ರದಲ್ಲಿ ‘ಬಾಂಬೆ ಡಾನ್‌’ ಆಗಿ ಖ್ಯಾತಿ ಪಡೆದಿದ್ದ ನಟ ದಿನೇಶ್‌ ಮಂಗಳೂರು ನಿಧನ

Actor Dinesh Mangalore passed away

ಬೆಂಗಳೂರು, ಆ.25- ಕೆಜಿಎಫ್‌ ಚಿತ್ರದ ಬಾಂಬೆ ಡಾನ್‌ ಎಂದೇ ಖ್ಯಾತಿ ಹೊಂದಿದ್ದ ದಿನೇಶ್‌ ಮಂಗಳೂರು ಅವರು ಇಂದು ನಿಧನರಾಗಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ದಿನೇಶ್‌ ಅವರನ್ನು ಕುಂದಾಪುರದ ಕೋಟೇಶ್ವರದ ಸರ್ಜನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ತಮ ಬಣ್ಣದ ಲೋಕದ ಪಯಣ ಮುಗಿಸಿದ್ದಾರೆ.

ರಂಗಕಲಾವಿದರಾದ ದಿನೇಶ್‌ ಅವರು ಚಿನ್ನಾರಿಮುತ್ತ ಚಿತ್ರಕ್ಕೆ ಸಹಾಯಕ ಕಲಾ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ದಿನೇಶ್‌ ಮಂಗಳೂರು ಅವರು ನಂತರ ಶಿವರಾಜ್‌ಕುಮಾರ್‌ ಅಭಿನಯದ ಜನುಮದ ಜೋಡಿ ಮೂಲಕ ಸ್ವತಂತ್ರ ಕಲಾನಿರ್ದೇಶಕರಾದರು.

ಅತ್ಯುತ್ತಮ ಕಲಾ ನಿರ್ದೇಶಕ:
ಕಿಚ್ಚ ಸುದೀಪ್‌ ಅಭಿನಯದ ವೀರ ಮದಕರಿ, ನಂ. 73 ಶಾಂತಿನಿವಾಸ, ರಮೇಶ್‌ ಅರವಿಂದ್‌ ನಟನೆಯ ಚಂದ್ರಮುಖಿ ಪ್ರಾಣಸಖಿ ಸೇರಿದಂತೆ ಹಲವು ಸಿನಿಮಾಗಳಿಗೆ ಕಲಾನಿರ್ದೇಶಕರಾಗಿದ್ದ ದಿನೇಶ್‌ ಮಂಗಳೂರು ಅವರಿಗೆ ರಾಕ್ಷಸ ಚಿತ್ರದ ಕಲಾನಿರ್ದೇಶನಕ್ಕಾಗಿ ಅತ್ಯುತ್ತಮ ಕಲಾನಿರ್ದೇಶಕ ಪ್ರಶಸ್ತಿ ಸಂದಿದೆ.

ಹೆಸರು ತಂದುಕೊಟ್ಟ ಆ ದಿನಗಳು:
ಕೆ.ಎಂ.ಚೈತನ್ಯ ನಿರ್ದೇಶದ ಆ ದಿನಗಳು ಚಿತ್ರದ ಸೀತಾರಾಮ್‌ ಶೆಟ್ಟಿ ಪಾತ್ರದ ಮೂಲಕ ಗಮನ ಸೆಳೆದ ದಿನೇಶ್‌ ಅವರು ಕೆಲವು ಸಿನಿಮಾಗಳಲ್ಲೂ ತಮ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದು, ಕೆಜಿಎಫ್‌ ಚಿತ್ರವು ಅವರಿಗೆ ಬಹಳಷ್ಟು ಹೆಸರು ತಂದುಕೊಟ್ಟಿತು. ಉಳಿದವರು ಕಂಡಂತೆ, ರಿಕ್ಕಿ, ಕಿರಿಕ್‌ ಪಾರ್ಟಿ, ರಣವಿಕ್ರಮ ಸೇರಿದಂತೆ ಹಲವು ಚಿತ್ರಗಳಲ್ಲಿ ಕಲಾವಿದರಾಗಿಯೂ ಗಮನ ಸೆಳೆದಿದ್ದಾರೆ. ನಿರ್ದೇಶಕ ಪಿ.ಶೇಷಾದ್ರಿ ಸೇರಿದಂತೆ ಹಲವರು ಕಲಾವಿದರು ಹಾಗೂ ತಂತ್ರಜ್ಞರು ದಿನೇಶ್‌ ಅವರ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದ್ದಾರೆ.

RELATED ARTICLES

Latest News