Tuesday, August 26, 2025
Homeಇದೀಗ ಬಂದ ಸುದ್ದಿಮುಸುಕುಧಾರಿ ಚಿನ್ನಯ್ಯ ಕ್ರಿಶ್ಚಿಯನ್‌ ಮತಾಂತರಿ..?

ಮುಸುಕುಧಾರಿ ಚಿನ್ನಯ್ಯ ಕ್ರಿಶ್ಚಿಯನ್‌ ಮತಾಂತರಿ..?

Masked Man Chinnaiah a Christian convert?

ಬೆಂಗಳೂರು, ಆ.25- ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟಿದ್ದಾಗಿ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ಮುಸುಕುದಾರಿ ಸಿ.ಎನ್‌. ಚಿನ್ನಯ್ಯ ಚರ್ಚ್‌ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿರುವ ಮಾಹಿತಿ ತಿಳಿದು ಬಂದಿದ್ದು, ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರವಾಗಿದ್ದಾನೆಂದು ಕೇಳಿ ಬಂದಿವೆ. ಮಂಡ್ಯ ಜಿಲ್ಲೆಯ ಚಿಕ್ಕಬಳ್ಳಿ ಗ್ರಾಮದವನಾಗಿರುವ ಚಿನ್ನಯ್ಯ ಎರಡು ಮದುವೆಗಳನ್ನಾಗಿದ್ದು, ಮೊದಲನೇ ಪತ್ನಿ ರತ್ನಮ ಮಂಡ್ಯದವರಾಗಿದ್ದು, ಎರಡನೇ ಪತ್ನಿ ಮಲ್ಲಿಗೆ ತಮಿಳುನಾಡಿನ ಸತ್ಯಮಂಗಲ ಬಳಿಯ ಚಿಕ್ಕರಸಂಪಾಳ್ಯದವರು ಎಂದು ಹೇಳಲಾಗಿದೆ.

ಎರಡನೇ ಪತ್ನಿಯ ಮನೆಯಲ್ಲಿದ್ದ ಚಿನ್ನಯ್ಯ, ಅದೇ ಗ್ರಾಮದಲ್ಲಿ
ನಿರ್ಮಿಸಲಾಗಿರುವ ಚರ್ಚಿಗೆ ಭೇಟಿ ನೀಡುತ್ತಿದ್ದ ಮತ್ತು ಸತ್ಯಮಂಗಳದ ಚರ್ಚಿಗೂ ಭೇಟಿ ನೀಡಿದ್ದಾರೆಂಬ ಉದಾಹರಣೆಗಳಿವೆ ಎಂದು ಮೂಲಗಳು ತಿಳಿಸಿವೆ.ಈ ಬಗ್ಗೆ ಚರ್ಚಿನ ಫಾದರ್‌ ಕೂಡ ಖಚಿತಪಡಿಸಿದ್ದು ಚಿನ್ನಯ್ನ ತಮ ಚರ್ಚಿಗೆ ಭೇಟಿ ನೀಡುತ್ತಿದ್ದರು ಎಂದು ಖಚಿತಪಡಿಸಿದ್ದಾರೆ. ಅದೇ ಗ್ರಾಮದ ಜನರು ಕೂಡ ಚಿನ್ನಯ್ಯ ಚರ್ಚಿಗೆ ಬರುತ್ತಿದ್ದುದ್ದನ್ನು ಖಚಿತಪಡಿಸಿದ್ದಾರೆ.

ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆಸಿರುವ ಪಟ್ಟಿಯನ್ನು ಸಿದ್ಧಗೊಳಿಸಿರುವ ಎಸ್‌‍ಐಟಿ ಸುಮಾರು 10-12 ಮಂದಿಯ ವಿರುದ್ಧ ತನಿಖೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಈ ವರೆಗಿನ ಮಾಹಿತಿಯ ಪ್ರಕಾರ ಮಹೇಶ್‌ಶೆಟ್ಟಿ ತಿಮರೋಡಿ, ಗಿರೀಶ್‌ ಮಟ್ಟಣ್ಣನವರ್‌, ಯೂಟ್ಯೂಬರ್‌ ಸಮೀರ್‌, ಟಿ.ಜಯಂತ್‌ ಅವರುಗಳ ಹೆಸರನ್ನು ಪ್ರಮುಖವಾಗಿ ಗುರುತಿಸಲಾಗಿದೆ ಎಂದು ತಿಳಿದು ಬಂದಿದೆ.

ಚಿನ್ನಯ್ಯ ಮತ್ತು ಸುಜಾತಾಭಟ್‌ ಅವರನ್ನು ಪಾತ್ರದಾರಿಗಳು ಎಂದು ಹೆಸರಿಸಲಾಗಿದೆ. ಸುಜಾತಾಭಟ್‌ ತಮ ಮಗಳು ಅನನ್ಯ ಭಟ್‌ ಎಂಬಿಬಿಎಸ್‌‍ ಓದುವ ಹಂತದಲ್ಲಿ ಧರ್ಮಸ್ಥಳಕ್ಕೆ ಭೇಟಿ ನೀಡಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿದ್ದಾಳೆ. ಆಕೆಯ ಅಸ್ಥಿಗಳು ದೊರೆತರೆ ತಮಗೆ ಕೊಡಿ ಎಂದು ದೂರು ನೀಡುವ ಮೂಲಕ ರಂಗಪ್ರವೇಶ ಮಾಡಿದ್ದರು.

ಚಿನ್ನಯ್ಯ ತಲೆಬುರುಡೆಯೊಂದನ್ನು ತಂದು ಇದು ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಬಾಲಕಿಯ ಶವ ಎಂದು ನಂಬಿಸುವ ಪ್ರಯತ್ನ ಮಾಡಿದ್ದರು. ಆದರೆ ಆತ ಹೇಳಿದ ಸ್ಥಳಗಳಲ್ಲಿ ಉತ್ಖನನ ಮಾಡಿದಾಗ ಯಾವ ಅಂಶಗಳು ಪತ್ತೆಯಾಗಲಿಲ್ಲ. ಹೀಗಾಗಿ ತನಿಖೆ ತಿರುವು-ಮರುವಾಗಿದ್ದು, ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆಸಿರುವವರ ಜಾಲದ ವಿರುದ್ಧ ಎಸ್‌‍ಐಟಿ ಬೆನ್ನು ಹತ್ತಿದೆ.

ಚಿನ್ನಯನನ್ನು ನಾನಾ ರೀತಿಯ ತನಿಖೆಗೆ ಒಳಪಡಿಸಲಾಗಿದ್ದು, ಬೆಳ್ತಂಗಡಿ ಎಸ್‌‍ಐಟಿ ಕಚೇರಿಯಲ್ಲಿ ಆತನನ್ನು ಇರಿಸಿ, ವಿಚಾರಣೆ ಮುಂದುವರೆಸಲಾಗಿದೆ. ಚಿನ್ನಯ್ಯನಿಗೆ ಆರ್ಥಿಕ ನೆರವು ನೀಡಿದ್ದು ಯಾರು? ಧರ್ಮಸ್ಥಳದಲ್ಲಿ ಅಷ್ಟೂ ಸ್ಥಳಗಳನ್ನು ಗುರುತಿಸಲು ಹೇಳಿಕೊಟ್ಟಿದ್ದು ಯಾರು? ಎಂಬೆಲ್ಲಾ ಮಾಹಿತಿಗಳನ್ನು ಪೊಲೀಸರು ಪಡೆಯುತ್ತಿದ್ದಾರೆ.

RELATED ARTICLES

Latest News