Tuesday, August 26, 2025
Homeರಾಜ್ಯಸೆ.1ರಿಂದ ಬಿಜೆಪಿ 'ಧರ್ಮಸ್ಥಳ ಚಲೋ'

ಸೆ.1ರಿಂದ ಬಿಜೆಪಿ ‘ಧರ್ಮಸ್ಥಳ ಚಲೋ’

BJP to 'Dharmasthala Chalo' from September 1

ಬೆಂಗಳೂರು,ಆ.25- ಶ್ರೀ ಕ್ಷೇತ್ರ ಧರ್ಮಸ್ಥಳ ಪ್ರಕರಣದಲ್ಲಿ ಹಿಂದೂಗಳ ಮನಸಿನಲ್ಲಿ ಉಂಟಾಗಿರುವ ಅನುಮಾನವನ್ನು ಹೋಗಲಾಡಿಸುವ ದೃಷ್ಟಿಯಿಂದ ಸೆಪ್ಟಂಬರ್‌ 1 ರಿಂದ ಬಿಜೆಪಿ ಧರ್ಮಸ್ಥಳ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದೆ.

ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನಮ್ಮ ಧರ್ಮಸ್ಥಳ ಚಲೋ ಹಿಂದೂಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ.ಇದರಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು.ನಾವು ಬಾಯಿ ಮುಚ್ಚಿಕೊಂಡಿರಲು ಕಾಂಗ್ರೆಸ್‌‍ ನವರಲ್ಲ. ಈ ಸರ್ಕಾರವನ್ನು ಬಗ್ಗಿಸುವ ಶಕ್ತಿ ಹಿಂದೂಗಳಿಗೆ ಇದೆ ಎಂದು ಎಚ್ಚರಿಕೆ ಕೊಟ್ಟರು.

ಧರ್ಮಸ್ಥಳ ವಿರುದ್ಧ ಆರೋಪ ಬಂದಾಗ ಕೋಟ್ಯಂತರ ಭಕ್ತರಲ್ಲಿ ಆತಂಕ ಆದ ಹಾಗೆ ನಮಗೂ ಆತಂಕ ಆಗಿತ್ತು. ನಿಷ್ಪಕ್ಷಪಾತ ತನಿಖೆ ಆಗಲಿ ನೋಡೋಣ ಎಂದು ನಾವು ಸುಮನಿದ್ದವು. ಆದರೆ, ಈ ತನಿಖೆ, ಅಪಪ್ರಚಾರಕ್ಕೆ ಕಡಿವಾಣ ಹಾಕಲಿಲ್ಲ. ರಾಜ್ಯ ಸರ್ಕಾರ ಧರ್ಮಸ್ಥಳ ವಿಚಾರದಲ್ಲಿ ಎಡವಿದೆ.ಆ ಕಾರಣಕ್ಕಾಗಿಯೇ ಕೆಲವು ಕಾಂಗ್ರೆಸ್‌‍ ನಾಯಕರು ಕೇಸರಿ ಶಲ್ಯ ಹಾಕಿಕೊಂಡು ಧರ್ಮಸ್ಥಳಕ್ಕೆ ಹೊರಟಿದ್ದಾರೆ.ಕಾಂಗ್ರೆಸ್‌‍ನವರು ಧರ್ಮಸ್ಥಳ ಭೇಟಿ ಪಾಪ ಪ್ರಾಯಶ್ಚಿತ್ತಕ್ಕಾಗಿ ಎಂದು ವ್ಯಂಗ್ಯವಾಡಿದರು.

ಉಪ ಮುಖಮಂತ್ರಿ ಡಿ,ಕೆ ಶಿವಕುಮಾರ್‌ ಅವರ ದೈವಭಕ್ತಿ ಬಗ್ಗೆ ನಾನು ಪ್ರಶ್ನೆ ಮಾಡುವುದಿಲ್ಲ. ಅವರಿಗೂ ಸಹ ಧರ್ಮಸ್ಥಳದ ಬಗ್ಗೆ ಶ್ರದ್ಧೆ ಭಕ್ತಿ ಇದೆ.ಆದರೆ, ಷಡ್ಯಂತ್ರದ ಬಗ್ಗೆ ಡಿಕೆಶಿ ಕೈಕಟ್ಟಿ ಕೂರುವುದು ಸರಿಯಲ್ಲ. ಸಿಎಂ ಮೇಲೆ ಒತ್ತಡ ತಂದು ಡಿಕೆಶಿ ಅವರು ಪ್ರಕರಣವನ್ನು ಎನ್‌ಐಎಗೆ ವಹಿಸಲಿ ಎಂದರು. ಡಿಕೆಶಿ ಆರ್‌ಎಸ್‌‍ಎಸ್‌‍ ಗೀತೆ ಹಾಡಿದ್ದಾರೆಂದರೆ, ಅವರಿಗೆ ಜ್ಞಾನೋದಯ ಆಗಿದೆ ಎಂದರ್ಥ. ಕೆಲವು ಕಾಂಗ್ರೆಸ್‌‍ ನಾಯಕರು ಆರ್‌ಎಸ್‌‍ಎಸ್‌‍ ಮೇಲೆ ವಿಷ ಕಕ್ಕುತ್ತಿದ್ದಾರೆ.ಆರೆಸೆಸ್‌‍ ವಿಷಕಂಠ ಸಂಸ್ಥೆ, ವಿಷ ನುಂಗಿಕೊಂಡೇ ಸಮಾಜ ಸೇವೆ ಮುಂದುವರೆಸುತ್ತದೆ.

ಧರ್ಮಸ್ಥಳ ಚಲೋಗೆ ಸಮಿತಿ ರಚನೆ : ಧರ್ಮಸ್ಥಳ ಚಲೋ ಸಮಿತಿಗೆ ಎಸ್‌‍ ಆರ್‌ ವಿಶ್ವನಾಥ್‌ ಸಂಚಾಲಕರು, ಪಿಸಿ ಮೋಹನ್‌ ಸಹ ಸಂಚಾಲಕರು, ಸುನೀಲ್‌ ಕುಮಾರ್‌, ರವಿಕುಮಾರ್‌, ಪ್ರೀತಂ ಗೌಡ, ರಾಜೀವ್‌, ದೊಡ್ಡನಗೌಡ ಪಾಟೀಲ್‌‍, ಜನಾರ್ದನ ರೆಡ್ಡಿ, ರೇಣುಕಾಚಾರ್ಯ, ಭಾರತಿ ಶೆಟ್ಟಿ, ಹರೀಶ್‌ ಪೂಂಜಾ, ತಮೇಶ್‌ ಗೌಡ, ಭಾಗೀರಥಿ ಮುರುಳ್ಯ ಸಮಿತಿ ಸದಸ್ಯರು ಧರ್ಮಸ್ಥಳ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿಲ್ಲ. ಸರ್ಕಾರದ ಹಿಂದೂ ವಿರೋಧಿ ನೀತಿ, ಹಿಂದೂ, ಬಿಜೆಪಿ ಕಾರ್ಯಕರ್ತರ ಹತ್ಯೆ, ಹಲ್ಲೆ ಎಲ್ಲವನ್ನೂ ನಾವು ಗಮನಿಸಿದ್ದೇವೆ.

ಧರ್ಮಸ್ಥಳ ವಿಚಾರದಲ್ಲಿ ಇಷ್ಟೆಲ್ಲಾ ಅಪಪ್ರಚಾರ ನಡೆಯುತ್ತಿದ್ದಾಗ ಸರ್ಕಾರ ಯಾವ ಕ್ರಮ ತೆಗೆದುಕೊಳ್ಳಲಿಲ್ಲ. ಇದು ಭಕ್ತರ, ಹಿಂದೂಗಳ ಪ್ರಶ್ನೆ ಎಂದು ತಮ ನಿರ್ಧಾರವನ್ನು ವಿಜಯೇಂದ್ರ ಸಮರ್ಥನೆ ಮಾಡಿಕೊಂಡರು.

ಸಿಎಂ ಅವರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ ಹೆಸರು ಘೋಷಣೆ ಮಾಡಿದ್ದಾರೆ. ಬಾನು ಮುಷ್ತಾಕ್‌ ಅವರು ಹಿಂದೂ ಪರಂಪರೆ, ಹಿಂದೂ ಆಚಾರ ವಿಚಾರಗಳ ಮೇಲೆ ನಂಬಿಕೆ ಇಟ್ಟು ಬಂದರೆ ಸ್ವಾಗತ ಮಾಡುತ್ತೇವೆ. ಬಾನು ಮುಷ್ತಾಕ್‌ ಹಾಗೂ ಕೊಡಗಿನ ದೀಪಾ ಬಸ್ತಿ ಇಬ್ಬರಿಗೂ ಸೇರಿ ಬೂಕರ್‌ ಪ್ರಶಸ್ತಿ ಬಂದಿದೆ.ಆದರೆ, ಸರ್ಕಾರ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ ಅವರನ್ನು ಮಾತ್ರ ಕರೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ದೀಪಾ ಬಸ್ತಿ ಅವರನ್ನು ಕರೆದಿಲ್ಲ? ಎಂದು ಪ್ರಶ್ನೆ ಮಾಡಿದರು.

ದೀಪಾ ಬಸ್ತಿ ಅವರನ್ನು ಏಕೆ ಕರೆಯಬೇಕು ಎಂಬ ಆಲೋಚನೆ ಸರ್ಕಾರಕ್ಕೆ ಬಂದಿಲ್ಲ? ಕೊಡಗಿನ ಬಗ್ಗೆ ಸಿಎಂಗೆ ಆಸಕ್ತಿ ಕಡಿಮೆ.ದಸರಾ ಧಾರ್ಮಿಕ ಸಂಪ್ರದಾಯ ಒಳಗೊಂಡ ಕಾರ್ಯಕ್ರಮ. ನಮಗೆ ಆಚಾರ ವಿಚಾರ, ಸಂಪ್ರದಾಯ ಎಲ್ಲವೂ ಗೊತ್ತಿದೆ ಎಂದು ಹೇಳಿದರು.

RELATED ARTICLES

Latest News