Tuesday, August 26, 2025
Homeಬೆಂಗಳೂರುಶೇ.50 ರಷ್ಟು ರಿಯಾಯಿತಿ ಹಿನ್ನೆಲೆಯಲ್ಲಿ ಮುಗಿಬಿದ್ದು ದಂಡ ಕಟ್ಟಿದ ವಾಹನ ಸವಾರರು

ಶೇ.50 ರಷ್ಟು ರಿಯಾಯಿತಿ ಹಿನ್ನೆಲೆಯಲ್ಲಿ ಮುಗಿಬಿದ್ದು ದಂಡ ಕಟ್ಟಿದ ವಾಹನ ಸವಾರರು

Motorists rush to pay fines after 50% discount

ಬೆಂಗಳೂರು,ಆ.25- ಸಂಚಾರಿ ನಿಯಮ ಉಲ್ಲಘಂನೆ ಸಂಬಂಧ ಸಂಚಾರಿ ಇ-ಚಲನ್‌ ಮುಖಾಂತರ ದಾಖಲಾದ ಪ್ರಕರಣಗಳಲ್ಲಿ ಬಾಕಿ ದಂಡ ಪಾವತಿಗೆ ನೀಡಲಾದ ಶೇ.50 ರಷ್ಟು ರಿಯಾಯಿತಿಗೆ ವಾಹನ ಚಾಲಕರಿಂದ ಭಾರೀ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಎರಡನೇ ಬಾರಿಗೆ ದಂಡ ರಿಯಾಯಿತಿಗೆ ಅವಕಾಶ ಕಲ್ಪಿಸಿದ್ದು, ಎರಡನೇ ದಿನವಾದ ನಿನ್ನೆ ನಗರದಲ್ಲಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿ 1.07 ಲಕ್ಷ ಪ್ರಕರಣಗಳಲ್ಲಿ 3.01 ಕೋಟಿ ರೂ. ದಂಡ ಸಂಗ್ರಹವಾಗಿದೆ.

ರಾಜ್ಯಸರ್ಕಾರ ಸಂಚಾರಿ ನಿಯಮ ಉಲ್ಲಂಘನೆಗಳ ಹಳೇ ಪ್ರಕರಣಗಳಲ್ಲಿ ಬಾಕಿ ದಂಡ ಪಾವತಿಗೆ ಶೇ.50 ರಷ್ಟು ರಿಯಾಯಿತಿ ನೀಡಿ ಆದೇಶಿಸಿದ್ದು, ಸೆ.19ರವರೆಗೆ ಈ ಅವಕಾಶವಿದೆ.
ಮೊದಲ ದಿನ 1.48 ಲಕ್ಷ ಪ್ರಕರಣಗಳಲ್ಲಿ 4.18 ಕೋಟಿ ರೂ. ಸಂಗ್ರಹವಾಗಿತ್ತು. ಎರಡನೇ ದಿನ 1.07 ಪ್ರಕರಣಗಳಲ್ಲಿ 3.01 ಕೋಟಿ ರೂ. ಸಂಗ್ರಹವಾಗಿದೆ.

ವೀಕೆಂಡ್‌ ಹಿನ್ನೆಲೆಯಲ್ಲಿ 2 ದಿನ ಸಾರ್ವಜನಿಕರೇ ಸ್ವಯಂ ಪ್ರೇರಿತರಾಗಿ ಸಂಚಾರಿ ಠಾಣೆಗಳಿಗೆ ಭೇಟಿ ನೀಡಿ ದಂಡ ಪಾವತಿಸಿದ್ದಾರೆ. ಇಂದು ಜನರು ಕಡಿಮೆ ಸಂಖ್ಯೆಯಲ್ಲಿ ದಂಡ ಪಾವತಿಗೆ ಆಗಮಿಸಿದ್ದರು. ಕೆಲವು ಕಡೆ ಸಂಚಾರಿ ಪೊಲೀಸರು ವಾಹನಗಳನ್ನು ತಡೆದು ಪರಿಶೀಲಿಸಿದಾಗ ದಂಡ ಪಾವತಿಸಿದ್ದಾರೆ.

ನಗರದಲ್ಲಿ ವಾಹನ ಸವಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ನಿಗದಿತ ಸಮಯದೊಳಗೆ ನಿರೀಕ್ಷೆಗಿಂತ ಹೆಚ್ಚು ದಂಡ ಸಂಗ್ರಹವಾಗುವ ನಿರೀಕ್ಷೆಯಿದೆ ಎಂದು ಕಬ್ಬನ್‌ಪಾರ್ಕ್‌ ಸಂಚಾರಿ ಠಾಣೆಯ ಎಎಸ್‌ಐ ಜಯರಾಂ ಎಚ್‌.ಆರ್‌. ಅವರು ತಿಳಿಸಿದ್ದಾರೆ.

ಸಂಚಾರಿ ಪೊಲೀಸರ ಕಾರ್ಯಾಚರಣೆ, 667 ಸವಾರರ ಮೇಲೆ ಕೇಸು ದಾಖಲು.. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ಸಂಚಾರಿ ಪೊಲೀಸರು ಒಂದು ವಾರಗಳ ಕಾಲ ಕಾರ್ಯಾಚರಣೆ ನಡೆಸಿ 667 ಸವಾರರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡು 90 ಸಾವಿರ ದಂಡ ವಸೂಲಿ ಮಾಡಿದ್ದಾರೆ.

ಆ.18 ರಿಂದ 24 ರ ವರೆಗೆ ನಗರದ 53 ಸಂಚಾರಿ ಪೊಲೀಸ್‌‍ ಠಾಣೆ ವ್ಯಾಪ್ತಿಗಳಲ್ಲಿ ಸಿಬ್ಬಂದಿ ವಿಶೇಷ ಕಾರ್ಯಾಚರಣೆ ಕೈಗೊಂಡು ವಿವಿಧ ಮಾದರಿಯ 47749 ವಾಹನಳನ್ನು ತಪಾಸಣೆ ಮಾಡಿ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ ವಾಹನ ಚಾಲಕರು , ಸವಾರರುಗಳ ವಿರುದ್ಧ 667 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.

ಅಲ್ಲದೇ ಅತೀ ವೇಗ ವಾಹನ ಚಲಾಯಿಸುವವರ ವಿರುದ್ಧ ನಡೆಸಿದ ಕಾರ್ಯಾಚರಣೆ ಯಲ್ಲಿ 90 ಪ್ರಕರಣಗಳನ್ನು ದಾಖಲಿಸಿಕೊಂಡು 90 ಸಾವಿರ ದಂಡ ವಿಧಿಸಿದ್ದಾರೆ.ನಗರದಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸುವ ಮತ್ತು ಅತೀ ವೇಗ ವಾಹನ ಚಲಾಯಿಸುವವರ ಹಾವಳಿಯನ್ನು ತಡೆಗಟ್ಟಲು ಮತ್ತು ರಸ್ತೆ ಸುರಕ್ಷತೆಗಾಗಿ ಮುಂದಿನ ದಿನಗಳಲ್ಲಿಯೂ ಸಹ ಕಾರ್ಯಾಚರಣೆಗಳನ್ನು ಹಮಿಕೊಳ್ಳಲಾಗುವುದು ಎಂದು ಸಂಚಾರಿ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

Latest News