Tuesday, August 26, 2025
Homeರಾಷ್ಟ್ರೀಯ | Nationalಸ್ಥಳ ನಿಯುಕ್ತಿಗೊಳಿಸಿ ಕೆಎಎಸ್‌‍ ಅಧಿಕಾರಿಗಳ ವರ್ಗಾವಣೆ

ಸ್ಥಳ ನಿಯುಕ್ತಿಗೊಳಿಸಿ ಕೆಎಎಸ್‌‍ ಅಧಿಕಾರಿಗಳ ವರ್ಗಾವಣೆ

KAS officers transferred with postings

ಬೆಂಗಳೂರು, ಆ.26-ರಾಜ್ಯ ಸರ್ಕಾರ ಹುದ್ದೆ ನಿರೀಕ್ಷೆಯಲ್ಲಿದ್ದ 10 ಮಂದಿ ಕೆಎಎಸ್‌‍ ಅಧಿಕಾರಿಗಳಿಗೆ ಸ್ಥಳ ನಿಯುಕ್ತಿಗೊಳಿಸಿ ಹಾಗೂ 6 ಮಂದಿ ಕೆಎಎಸ್‌‍ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಸ್ಥಳ ನಿರೀಕ್ಷೆಯಲ್ಲಿದ್ದ ಶೇಖ್‌ ಲತೀಫ್‌ ಅವರನ್ನು ಆಯುಷ್‌ ಇಲಾಖೆ ಮುಖ್ಯ ಆಡಳಿತಾಧಿಕಾರಿಯನ್ನಾಗಿ, ರೂಪ ಆರ್‌. ಅವರನ್ನು ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿ ಹುದ್ದೆಗೆ, ಮಂಜುನಾಥ ಪಿ.ಎಸ್‌‍. ಅವರನ್ನು ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತರನ್ನಾಗಿ ಹಾಗೂ ಸರೋಜ ಬಿ.ಬಿ.ಅವರನ್ನು ಕಿದ್ವಾಯಿ ಸಾರಕ ಗಂಥಿ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶಿಸಿದೆ.

ಕೃಷ್ಣ ಕುಮಾರ್‌ ಎಂ.ಪಿ.ಅವರನ್ನು ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರನ್ನಾಗಿ, ಡಾ. ಶೃತಿ ಎಂ.ಕೆ. ಅವರನ್ನು ಬ್ಯುಸಿನೆಸ್‌‍ ಕಾರಿಡಾರ್‌ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿ-1 ಕ್ಕೆ ಸ್ಥಳ ನಿಯುಕ್ತಿಗೊಳಿಸಲಾಗಿದೆ. ಡಾ.ಕವಿತಾ ಯೋಗೇಪ್ಪನವರ್‌ ಅವರನ್ನು ದಾವಣಗೆರೆಯ ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ, ಡಾ.ಬಸಂತಿ ಬಿ.ಎಸ್‌‍. ಅವರನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ವಿಶೇಷ ಭೂಸ್ವಾಧೀನಾಧಿಕಾರಿಯನ್ನಾಗಿ ಮಾರುತಿ ಬಾಕೋಡ ಅವರನ್ನು ಯುಕೆಪಿ ಮೇಲ್ದಂಡೆ ಯೋಜೆ ವಿಶೇಷ ಜಿಲ್ಲಾಧಿಕಾರಿಯನ್ನಾಗಿ ವರ್ಗಾಯಿಸಲಾಗಿದೆ.

ಪ್ರಮೋದ್‌ ಎಲ್‌. ಪಾಟೀಲ್‌ ಅವರನ್ನು ವಿದ್ಯುನಾನ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಪ್ರಧಾನ ವ್ಯವಸ್ಥಾಪಕರು-4(ಇ ಮತ್ತು ಪಿ) ಹುದ್ದೆಗೆ, ಕಾಂತರಾಜ ಕೆ.ಜೆ.ಅವರನ್ನು ಬ್ಯುಸಿನೆಸ್‌‍ ಕಾರಿಡಾರ್‌ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿ-4 ಹುದ್ದೆಗೆ ಹಾಗೂ ಅಪೂರ್ವ ಬಿದಡಿ ಅವರನ್ನು ಕರ್ನಾಟಕ ಮೇಲನವಿ ನ್ಯಾಯಾಧಿಕರಣದ ರಾಜ್ಯ ಪ್ರತಿನಿಧಿ-1ರ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಲಾಗಿದೆ.

ಕಮಲಾಬಾಯಿ ಬಿ. ಅವರನ್ನು ಬ್ಯುಸಿನೆಸ್‌‍ ಕಾರಿಡಾರ್‌ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ , ಅರ್ಜುನ ಒಡೆಯರ್‌ ಅವರನ್ನು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವರನ್ನಾಗಿ , ನಿತಿನ್‌ ಚಕ್ಕಿ ಮಡಿಕೇರಿ ಉಪ ವಿಭಾಗದ ಉಪ ವಿಭಾಗಾಧಿಕಾರಿಯನ್ನಾಗಿ ಹಾಗೂ ಮಾರುತಿ ಜೆ.ನಿ. ಅವರನ್ನು ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನಾಗಿ (ಆಡಳಿತ ಮತ್ತು ವಸೂಲಾತಿ) ವರ್ಗಾಯಿಸಲಾಗಿದೆ.

RELATED ARTICLES

Latest News