ನವದೆಹಲಿ, ಆ. 26 (ಪಿಟಿಐ) ಖಾಸಗಿ ಕಂಪನಿಗಳು ಪರಮಾಣು ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲು ಮತ್ತು ನಡೆಸಲು ಅನುವು ಮಾಡಿಕೊಡಲು ಅಸ್ತಿತ್ವದಲ್ಲಿರುವ ಎರಡು ಕಾಯ್ದೆಗಳನ್ನು ತಿದ್ದುಪಡಿ ಮಾಡುವ ಭರವಸೆಯ ಬಗ್ಗೆ ಕಾಂಗ್ರೆಸ್ ಇಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.
ಪರಮಾಣು ಇಂಧನ ಸ್ಥಾಪನೆಯ ಭಾಗವಲ್ಲದ ಸ್ವತಂತ್ರ ನಿಯಂತ್ರಕ ಸಂಸ್ಥೆಯನ್ನು ಸ್ಥಾಪಿಸುವ ಮಸೂದೆಯ ಬಗ್ಗೆ ಏನು?ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2025-26ರ ಬಜೆಟ್ ಅನ್ನು ಮಂಡಿಸಿದಾಗ, ಖಾಸಗಿ ಕಂಪನಿಗಳು ಪರಮಾಣು ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲು ಮತ್ತು ನಡೆಸಲು ಅನುವು ಮಾಡಿಕೊಡಲು ಪರಮಾಣು ಹಾನಿಗಾಗಿ ನಾಗರಿಕ ಹೊಣೆಗಾರಿಕೆ ಕಾಯ್ದೆ, 2010 ಮತ್ತು ಪರಮಾಣು ಇಂಧನ ಕಾಯ್ದೆ, 1962 ಅನ್ನು ತಿದ್ದುಪಡಿ ಮಾಡುವ ಮೂಲಕ ಪರಮಾಣು ಇಂಧನಕ್ಕೆ ಉತ್ತೇಜನ ನೀಡುವ ಭವ್ಯ ಭರವಸೆಗಳನ್ನು ನೀಡಿದ್ದರು.
ಆ ಮಸೂದೆಯನ್ನು ಚಳಿಗಾಲದ ಅಧಿವೇಶನದಲ್ಲಿ ಮಂಡಿಲಾಗುವುದೇ ಎಂದು ಎಂದು ಕಾಂಗ್ರೆಸ್ ಸಂಪರ್ಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್ತಿನ ಅಧಿವೇಶನದಲ್ಲಿ ಈ ಎರಡು ಮಸೂದೆಗಳನ್ನು ಮಂಡಿಸಲಾಗಿಲ್ಲ ಎಂದು ಅವರು ಹೇಳಿದರು.ಮೂರು ತಿಂಗಳ ಚಳಿಗಾಲದ ಅಧಿವೇಶನದಲ್ಲಿ ಮಸೂದೆಗಳನ್ನು ಪರಿಚಯಿಸಲಾಗುತ್ತದೆಯೇ? ಇದಲ್ಲದೆ, ಪರಮಾಣು ಇಂಧನ ಸ್ಥಾಪನೆಯ ಭಾಗವಲ್ಲದ ಸ್ವತಂತ್ರ ನಿಯಂತ್ರಕ ಸಂಸ್ಥೆಯನ್ನು ಸ್ಥಾಪಿಸುವ ಮಸೂದೆಯ ಬಗ್ಗೆ ಏನು ನಿಮ ನಿರ್ಧಾರ ಎಂದು ಅವರು X ಮಾಡಿದ್ದಾರೆ.
ಖಾಸಗಿ ಹೂಡಿಕೆಯನ್ನು ಪ್ರೋತ್ಸಾಹಿಸಬೇಕಾದರೆ ಇದು ಅತ್ಯಗತ್ಯ ಎಂದು ಅವರು ಹೇಳಿದರು.ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಸಂಪೂರ್ಣ ಬೆಂಬಲದೊಂದಿಗೆ, ಅರುಣ್ ಜೇಟ್ಲಿ ಮತ್ತು ಸುಷ್ಮಾ ಸ್ವರಾಜ್ ಇಬ್ಬರೂ ಪರಮಾಣು ಹಾನಿಗಾಗಿ ನಾಗರಿಕ ಹೊಣೆಗಾರಿಕೆ ಕಾಯ್ದೆ, 2010 ಅನ್ನು ಅಂತಿಮಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂಬುದನ್ನು ನೆನಪಿಸಿಕೊಳ್ಳಬೇಕು. ಪ್ರಸ್ತಾವಿತ ತಿದ್ದುಪಡಿಗಳು ಅವರು ಸಾಧಿಸಿದ್ದನ್ನು ರದ್ದುಗೊಳಿಸುತ್ತವೆ ಎಂದು ರಮೇಶ್ ಹೇಳಿದರು.