ಬಾಗ್‌ಪತ್,ಆ.28– ಪ್ರೀತಿಸಲು ನಿರಾಕರಿಸಿದ ಬಾಲಕಿಯ ಮೇಲೆ ಯುವಕನೊಬ್ಬ ಸಲಿಕೆಯಿಂದ ಹಲ್ಲೆ ನಡೆಸಿ ಕೊಂದು, ಆಕೆಯ ಮನೆಯಲ್ಲೇ ಶವ ಹೂಳಲು ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಬಾಗ್‌ಪತ್ ಜಿಲ್ಲೆಯ ಬೌಧಾ ಗ್ರಾಮದಲ್ಲಿ ನಡೆದಿದೆ.
ಸುಮಾರು 14 ವರ್ಷದ ಬಾಲಕಿಯ ಮನೆಗೆ ನುಗ್ಗಿ ಸಮುನ್(19) ಎಂಬಾತ ಆಕೆಯನ್ನು ಸಲಿಕೆಯಿಂದ ಹೊಡೆದು ಕೊಂದಿದ್ದಾನೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎನ್ ಪಿ ಸಿಂಗ್‌ತಿಳಿಸಿದ್ದಾರೆ.
ವಿಚಾರಣೆಯ ಸಮಯದಲ್ಲಿ,ಆರೋಪಿ ಸಮುನ್ ತಾನು ಹುಡುಗಿಯನ್ನು ಪ್ರೀತಿಸುತ್ತಿರುವುದಾಗಿ ಆಕೆ ಪ್ರತಿಕ್ರಿಯೆ ನೀಡಲಿಲ್ಲ,ಇದರಿಂದ ಬಾಲಕಿಯ ಮನೆಗೆ ನುಗ್ಗಿದ್ದ.ಈ ವೇಳೆ ಬಾಲಕಿಯ ಮೇಲೆ ಅತ್ಯಾಚಾರಕ್ಕೂ ಪ್ರಯತ್ನಿಸಿದ್ದು ಇದಕ್ಕೆ ಪ್ರತಿರೋಧ ವ್ಯಕ್ತವಾದ ನಂತರ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಆರೋಪಿ ಬಾಲಕಿಯ ಶವವನ್ನು ಮನೆಯಲ್ಲಿಯೇ ಹೂಳುತ್ತಿದ್ದಾಗ ಆಕೆಯ ಕುಟುಂಬ ಸದಸ್ಯರು ಬಂದಿದ್ದಾರೆ.ಛಪ್ರೌಲಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಘಟನೆ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ.
- ಕೊಡಗಿನ ರೋಷನ್ ಜೊತೆ ಹಸೆಮಣೆ ಏರಿದ ಆ್ಯಂಕರ್ ಅನುಶ್ರೀ
- ಡಿಕೆಶಿ ಹೇಳಿಕೆ ಹಿಂದೂ ಭಾವನೆಗೆ ಧಕ್ಕೆ ತರುವ ವಿಚಾರ : ಯದುವೀರ್
- ಚಾಮುಂಡೇಶ್ವರಿ ದೇವಸ್ಥಾನ ಹಿಂದೂ ಧರ್ಮಕ್ಕೆ ಸೇರಿಲ್ಲವೆಂದಾದರೆ ಮುಜರಾಯಿ ಸುಪರ್ದಿಗೆ ಏಕೆ..?
- ಸರ್ಕಾರಕ್ಕೆ ಮಂಜುನಾಥಸ್ವಾಮಿಯೇ ಶಿಕ್ಷೆ ಕೊಡುತ್ತಾನೆ : ಹೆಚ್.ಡಿ.ಕುಮಾರಸ್ವಾಮಿ
- ಬೆಂಗಳೂರಲ್ಲಿ ಗೌರಿ ಹಬ್ಬದ ದಿನವೇ ಮಹಿಳಾ ಟೆಕ್ಕಿ ಆತ್ಮಹತ್ಯೆ