ಬೆಂಗಳೂರು, ಆ.28- ಧರ್ಮಸ್ಥಳ ವಿಚಾರದಲ್ಲಿ ನಾನು ರಾಜಕೀಯ ಬೆರೆಸೋಕೆ ಹೋಗಲ್ಲ. ಆದರೆ, ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಮಂಜುನಾಥಸ್ವಾಮಿಯೇ ಶಿಕ್ಷೆ ಕೊಡುತ್ತಾನೆ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸರ್ಕಾರ ನಡೆದುಕೊಂಡ ರೀತಿ ನೋಡಿದರೆ ಎಸ್ ಐಟಿ ಹೆಸರಲ್ಲಿ ತನಿಖೆಯ ನಾಟಕ ಮಾಡಿದೆ. ಶ್ರೀಕ್ಷೇತ್ರಕ್ಕೆ ಅವಮಾನ ಅಪಮಾನವಾಗುವಂತೆ ಸರ್ಕಾರ ನಡೆದುಕೊಂಡಿದೆ ಎಂದು ಆರೋಪಿಸಿದರು.
ಇದರಲ್ಲಿ ಧರ್ಮ ಬೆರೆಸಲು ಹೋಗುವುದಿಲ್ಲ. ಸರ್ಕಾರದ ಮುಂದೆ ದ್ವಾರಕನಾಥ್ ಎಂಬುವರು ದೂರು ಕೊಟ್ಟ ವಿಷಯದಲ್ಲಿ ಮುಖ್ಯಮಂತ್ರಿ ತಕ್ಷಣ ಕ್ರಮ ತೆಗೆದುಕೊಂಡಿದ್ದಾರೆ. ಎಡಪಂಥೀಯ ಶಕ್ತಿಗಳು ಇದೆ ಅಂತಿದಾರೆ. ಏನಿದ್ದರೂ ಮುಂದೆ ಗೊತ್ತಾಗಲಿದೆ ಎಂದರು.
ದಸರಾ ಉದ್ಘಾಟನೆಗೆ ಸಾಹಿತಿ ಭಾನು ಮಸ್ತಾಕ್ ಅವರನ್ನು ಆಹ್ವಾನಿಸಿರುವುದಕ್ಕೆ ತಕರಾರು ಇಲ್ಲ. ಆದರೆ,ಉದ್ಧಟತನ ಬೇಡ. ಹಿಂದೂ ದೇಗುಲಗಳು , ಧಾರ್ಮಿಕ ಕೇಂದ್ರಗಳು ಹಿಂದೂಗಳ ಆಸ್ತಿಯಲ್ಲ ಎನ್ನುತ್ತಾರೆ. ಭಾನು ಮಸ್ತಾಕ್ ಅವರಿಂದ ಪೂಜೆ ಮಾಡಿಸೋದು ಬೇರೆ ವಿಚಾರ. ಧಾರ್ಮಿಕ ಕ್ಷೇತ್ರಗಳಿಗೆ ಈ ರೀತಿ ಸಮಸ್ಯೆ ಉಂಟು ಮಾಡೋದು ಸರ್ಕಾರಕ್ಕೆ ಕುತ್ತು ತರುವಂಥದ್ದು ಎಂದು ಅವರು ಹೇಳಿದರು.
ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತ ಸದನದಲ್ಲಿ ಆರ್‌ಎಸ್‌ಎಸ್ ಗೀತೆ ಹಾಡಿದ್ದಾರೆ. ತಮಾಷೆಗೂ ಆ ರೀತಿ ಹೇಳೋದನ್ನು ಕಾಂಗ್ರೆಸ್ ನವರು ಒಪ್ಪಲ್ಲ. ಈಗ ಕ್ಷಮೆ ಕೇಳುವ ಪರಿಸ್ಥಿತಿ ಉದ್ಬವವಾಗಿದೆ ಎಂದು ಟೀಕಿಸಿದರು.
ನಾನು ಬಹಳನೋವಿನಿಂದ ಹೇಳುತ್ತಿದ್ದೇನೆ. ರಾಜ್ಯದ ಸಮಸ್ಯೆ ಬಗ್ಗೆ ಸರ್ಕಾರ ಕೇಳುತ್ತಿಲ್ಲ. ಕ್ಷಮೆ ಕೇಳಿರುವುದನ್ನು ಗಮನಿಸಿದರೆ, ಅವರು ಭಯ ಬಿದ್ದು ಕೇಳುತ್ತಿದಾರೋ ಏನೋ? ಅದರ ಬಗ್ಗೆ ನನಗೆ ಗೊತ್ತಿಲ್ಲ. ಅದು ಅವರ ಪಕ್ಷದ ವಿಚಾರ ಎಂದು ಕುಮಾರಸ್ವಾಮಿ ತಿಳಿಸಿದರು.
- ಬಾಡಿಗೆ ಮನೆಯಲ್ಲಿ ವಾಸವಾಗಿದ್ದ 71 ವೃದ್ಧೆ ಆತ್ಮಹತ್ಯೆ
- ಗಂಡನ ಕಿರುಕುಳದಿಂದ ನೊಂದು ಕಟ್ಟಡದಿಂದ ಹಾರಿ ಪತ್ನಿ ಆತ್ಮಹತ್ಯೆ ಯತ್ನ
- ಬೆಂಗಳೂರು : ಕುಸಿದುಬಿದ್ದು ಆಟೋ ಚಾಲಕ ಸಾವು
- ಬೆಂಗಳೂರಲ್ಲಿ ಮಂಡ್ಯ ಮೂಲದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ
- ಬೆಂಗಳೂರು : ಡ್ರಗ್ ಪೆಡ್ಲರ್ ಬಳಿ ಇತ್ತು ಪಿಸ್ತೂಲ್ ಹಾಗೂ ನಾಲ್ಕು ಗುಂಡುಗಳು
